For Quick Alerts
  ALLOW NOTIFICATIONS  
  For Daily Alerts

  ಈ ಚಿತ್ರಗಳನ್ನ ಈಗಲೇ ನೋಡ್ಕೊಳ್ಳಿ, ಮುಂದಿನ ವಾರ ಇರುತ್ತೋ ಇಲ್ವೋ.!

  By Bharath Kumar
  |
  ಈ ಸಿನಿಮಾಗಳನ್ನ ನೀವು ತಪ್ಪದೆ ನೋಡ್ಲೇಬೇಕು | Oneindia Kannada

  ಮಗಾ, ಮಚ್ಚಾ ಈ ಸಿನಿಮಾ ನೋಡ್ಬೇಕೋ,,,ಈ ವಾರ ಈ ಸಿನಿಮಾಗೆ ಹೋಗೋಣ ಕಣ್ರೆ,,,ಯಾವ ಥಿಯೇಟರ್ ನಲ್ಲಿದೆ ನೋಡು ಈ ಫಿಲ್ಮ್....ಹೀಗೆ, ಹೇಳ್ಕೊಂಡು ಕಾಲ ಕಳೆಯುತ್ತಿರುವ ಚಿತ್ರಪ್ರೇಮಿಗಳು ಬಹುಶಃ ನೋಡ್ಬೇಕು ಅಂದುಕೊಂಡಿದ್ದ ಸಿನಿಮಾಗಳನ್ನ ನೋಡದನೇ ಹಲವು ಸಲ ನಿರಾಸೆ ಅನುಭವಿಸಿರಬಹುದು.

  ಇದೆಲ್ಲ ಬಿಟ್ಟಾಕಿ, ಸದ್ಯ ಬೆಂಗಳೂರಿನ ಚಿತ್ರಮಂದಿರಗಳಲ್ಲಿ ಯಾವ ಯಾವ ಸಿನಿಮಾಗಳು ಪ್ರದರ್ಶನವಾಗುತ್ತಿದೆ? ಕಳೆದ ವಾರ ಬಿಡುಗಡೆಯಾಗಿದ್ದ ಚಿತ್ರ ಇನ್ನು ಚಿತ್ರಮಂದಿರದಲ್ಲಿ ಇದೆಯಾ? ಮುಂದಿನ ವಾರ ಯಾವ ಸಿನಿಮಾ ಬಿಡುಗಡೆಯಾಗುತ್ತೆ ಎಂಬ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

  ಸದ್ಯ, ಸಿಲಿಕಾನ್ ಸಿಟಿಯಲ್ಲಿ ಯಾವೆಲ್ಲ ಕನ್ನಡ ಹಾಗೂ ಇತರೆ ಭಾಷೆಯ ಚಿತ್ರಗಳು ಪ್ರದರ್ಶನವಾಗುತ್ತಿದೆ ಎಂಬುದನ್ನ ನಾವು ತಿಳಿಸುತ್ತೇವೆ. ಹೋಗೋದು, ಬಿಡೋದು ನಿಮಗೆ ಬಿಟ್ಟಿದ್ದು,...ಮುಂದೆ ಓದಿ....

  'ಟಗರು' ನೋಡಬಹುದು

  'ಟಗರು' ನೋಡಬಹುದು

  ಫೆಬ್ರವರಿ 24 ರಂದು ಬಿಡುಗಡೆಯಾಗಿದ್ದ 'ಟಗರು' ಸಿನಿಮಾ ಇನ್ನು ಕೆಲವು ಚಿತ್ರಮಂದಿರದಲ್ಲಿ ಪ್ರದರ್ಶನವಾಗುತ್ತಲೇ ಇದೆ. ಮೆಜೆಸ್ಟಿಕ್ ನ ಮುಖ್ಯ ಚಿತ್ರಮಂದಿರ ಸೇರಿದಂತೆ ಹಲವು ಮಲ್ಟಿಫ್ಲೆಕ್ಸ್ ಗಳಲ್ಲಿ ಇದೆ. ನೂರನೇ ದಿನದ ಗಡಿಯಯಲ್ಲಿರುವ 'ಟಗರು' ನೂರು ದಿನದ ನಂತರ ಇರುತ್ತೋ ಇಲ್ವೋ ಗೊತ್ತಿಲ್ಲ.

  ಕಳೆದ ವಾರ ಬಂದಿತ್ತು 'Rambo 2'

  ಕಳೆದ ವಾರ ಬಂದಿತ್ತು 'Rambo 2'

  ಶರಣ್, ಆಶಿಕಾ ರಂಗನಾಥ್ ಅಭಿನಯಿಸಿದ್ದ 'Rambo 2' ಸಿನಿಮಾ ಕಳೆದ ವಾರವಷ್ಟೇ ತೆರೆಕಂಡಿತ್ತು. ಈ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಕೂಡ ಸಿಕ್ಕಿತ್ತು. ಸದ್ಯ, ಕರ್ನಾಟಕದ ಅತಿ ಹೆಚ್ಚು ಚಿತ್ರಮಂದಿರಗಳಲ್ಲಿ ಈ ಸಿನಿಮಾ ಪ್ರದರ್ಶನವಾಗುತ್ತಿದೆ.

  ಮಲ್ಟಿಪ್ಲೆಕ್ಸ್ ನಲ್ಲಿ 'ಗುಳ್ಟು', 'ಅಂಜನಿಪುತ್ರ'

  ಮಲ್ಟಿಪ್ಲೆಕ್ಸ್ ನಲ್ಲಿ 'ಗುಳ್ಟು', 'ಅಂಜನಿಪುತ್ರ'

  ಇನ್ನು ಮಲ್ಟಿಪ್ಲೆಕ್ಸ್ ಚಿತ್ರಮಂದಿರದಲ್ಲಿ ಒಂದೇ ಒಂದು ಶೋ 'ಗುಳ್ಟು' ಪ್ರದರ್ಶನವಾಗುತ್ತಿದ್ರೆ, ಮೆಜೆಸ್ಟಿಕ್ ನಲ್ಲಿರುವ ಸ್ವಪ್ನ ಚಿತ್ರಮಂದಿರದಲ್ಲಿ ಪುನೀತ್ ರಾಜ್ ಕುಮಾರ್ ಅಭಿನಯದ 'ಅಂಜನಿಪುತ್ರ' ಇದೆ. ಬಹುಶಃ ಮುಂದಿನ ವಾರಗಳಲ್ಲಿ ಈ ಚಿತ್ರಗಳು ಎತ್ತಂಗಡಿ ಆದ್ರೂ ಅಚ್ಚರಿಯಿಲ್ಲ.

  ಈ ವಾರ ತೆರೆಕಂಡ ಚಿತ್ರಗಳು

  ಈ ವಾರ ತೆರೆಕಂಡ ಚಿತ್ರಗಳು

  ಈ ಚಿತ್ರಗಳ ಪೈಕಿ ಈ ವಾರ ತೆರೆಗೆ ಬಂದ 'ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ', 'ರಾಮಧಾನ್ಯ', 'ಓಳ್ ಮುನಿಸ್ವಾಮಿ', 'ರಾಜ ಲವ್ಸ್ ರಾಧೆ', 'ಯಾರ್ ಯಾರ್ ಗೋರಿ ಮೇಲೆ' ಚಿತ್ರಗಳು ಕೂಡ ಸೇರಿಕೊಂಡಿವೆ. ಆದ್ರೆ, ಮುಂದಿನ ವಾರವೂ ಈ ಚಿತ್ರಗಳು ಸ್ಥಿರ ಪ್ರದರ್ಶನ ಕಾಯ್ದುಕೊಳ್ಳುತ್ತಾ ಕಾದು ನೋಡಬೇಕಿದೆ.

  ತೆಲುಗು ಸಿನಿಮಾಗಳು

  ತೆಲುಗು ಸಿನಿಮಾಗಳು

  ಕೀರ್ತಿ ಸುರೇಶ್ ಮುಖ್ಯ ಭೂಮಿಕೆಯಲ್ಲಿ ಅಭಿನಯದ 'ಮಹಾನಟಿ' ಸಿನಿಮಾ, ರವಿತೇಜ ಅಭಿನಯದ 'ನೆಲ ಟಿಕೆಟ್', ಅಲ್ಲು ಅರ್ಜುನ್ ಅಭಿನಯದ 'ನಾ ಪೇರು ಸೂರ್ಯ', ಮಹೇಶ್ ಬಾಬು ಅಭಿನಯದ 'ಭರತ್ ಅನೆ ನೇನು', ರಾಮ್ ಚರಣ್ ಅಭಿನಯದ 'ರಂಗಸ್ಥಲಂ' ಮತ್ತು 'ಅಮ್ಮಮ್ಮಾಗಾರಿಲ್ಲು' ಪ್ರದರ್ಶನವಾಗ್ತಿದೆ.

  ತಮಿಳು ಚಿತ್ರಗಳು

  ತಮಿಳು ಚಿತ್ರಗಳು

  ವಿಶಾಲ್ ಅಭಿನಯದ ಇರುಂಬುತಿರೈ, ಮಹಾನಟಿಯ ತಮಿಳು ಅವತರಣಿಕೆ 'ನಡಿಗರ್ ತಿಲಕಂ', ಸೆಮ, ಪೇಯ್ ಇರುಕ್ಕಾ ಇಲ್ಲೈ, ಚಿತ್ರಗಳು ಬೆಂಗಳೂರಿನಲ್ಲಿ ಪ್ರದರ್ಶನ ಕಾಣುತ್ತಿವೆ.

  ಹಿಂದಿ ಸಿನಿಮಾಗಳು

  ಹಿಂದಿ ಸಿನಿಮಾಗಳು

  ಆಲಿಯಾ ಭಟ್ ಅಭಿನಯದ 'ರಾಝೀ', ಜಾನ್ ಅಬ್ರಾಹಂ ಅಭಿನಯದ 'ಪರಮಾಣು', ಅಮಿತಾಬ್ ಬಚ್ಚನ್ ಮತ್ತು ರಿಷಿ ಕಪೂರ್ ಅಭಿನಯದ '102 ನಾಟೌಟ್', 'ಬಯೋಸ್ಕೋಪ್ ವಾಲ' ಚಿತ್ರಗಳು ಬೆಂಗಳೂರಿನ ಚಿತ್ರಮಂದಿರಗಳಲ್ಲಿ ಪ್ರದರ್ಶನವಾಗ್ತಿದೆ.

  English summary
  Presently, which Kannada, telugu, tamil, hindi movies are performing in bangalore theaters.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X