For Quick Alerts
  ALLOW NOTIFICATIONS  
  For Daily Alerts

  'ಜೆಸ್ಸಿ' ನಮ್ಮಲ್ಲಿ ಮಾತ್ರವಲ್ಲ, ತಮಿಳು-ತೆಲುಗಲ್ಲೂ ಕಮಾಲ್ ಮಾಡ್ತಾಳೆ

  By Suneetha
  |

  'ಗೂಗ್ಲಿ', 'ರಣವಿಕ್ರಮ' ಸಿನಿಮಾ ಖ್ಯಾತಿಯ ನಿರ್ದೇಶಕ ಪವನ್ ಒಡೆಯರ್ ಅವರ ರೋಮ್ಯಾಂಟಿಕ್ ಸಿನಿಮಾ 'ಜೆಸ್ಸಿ' ಬಿಡುಗಡೆಗೆ ತಯಾರಾಗಿದ್ದು, ಇನ್ನೇನು ಸದ್ಯದಲ್ಲೇ ಚಿತ್ರಮಂದಿರಗಳಲ್ಲಿ ಸದ್ದು ಮಾಡಲಿದೆ.

  'ಪ್ಯಾರ್ಗೆ ಆಗ್ಬುಟ್ಟೈತೆ' ನಟಿ ಪಾರುಲ್ ಯಾದವ್ ಮತ್ತು 'ಡೈರೆಕ್ಟರ್ ಸ್ಪೆಷಲ್' ಹುಡುಗ ಧನಂಜಯ್ ಅವರು ನಟಿಸಿರುವ 'ಜೆಸ್ಸಿ' ಚಿತ್ರತಂಡದಿಂದ ಹೊರಬಿದ್ದಿರುವ ಖಾಸ್ ಖಬರ್ ಏನಪ್ಪಾ ಅಂದ್ರೆ ಈ ಸಿನಿಮಾ ತಮಿಳು ಮತ್ತು ತೆಲುಗು ಭಾಷೆಗಳಿಗೆ ಡಬ್ ಆಗಲಿದೆ ಎಂದು ನಿರ್ದೇಶಕ ಪವನ್ ನುಡಿಯುತ್ತಾರೆ.[ಪ್ರೇಮಿಗಳ ದಿನಕ್ಕೆ ಪುನೀತ್ ಅವರಿಂದ ವಿಶೇಷ ಉಡುಗೊರೆ]

  ಆರ್ ಎಸ್ ಪ್ರೊಡಕ್ಷನ್ಸ್ ನಿರ್ಮಾಣ ಮಾಡಿರುವ 'ಜೆಸ್ಸಿ' ಚಿತ್ರ ಕನ್ನಡದಲ್ಲಿ ಬಿಡುಗಡೆ ಆದ ಎರಡು ವಾರಗಳ ನಂತರ ತೆಲುಗು ಮತ್ತು ತಮಿಳು ಭಾಷೆಗೆ ಡಬ್ ಆಗಿ ತೆರೆ ಕಾಣಲಿದೆ.

  ಈ ತಿಂಗಳ ಕೊನೆಯಲ್ಲಿ 'ಜೆಸ್ಸಿ' ಪ್ರೇಕ್ಷಕರೆದುರು ಬರಲಿದ್ದು, 'ಚಿತ್ರ ಬಿಡುಗಡೆಗೆ ನನಗಿನ್ನು ಕೇವಲ 15 ದಿನಗಳಷ್ಟೇ ಬಾಕಿ ಉಳಿದಿದೆ' ಎಂದು ನಿರ್ದೇಶಕ ಪವನ್ ಒಡೆಯರ್ ಅವರು ಹೇಳುತ್ತಾರೆ.['ಜೆಸ್ಸಿ' ಪ್ರಿಯತಮೆಗೆ ರೊಮ್ಯಾಂಟಿಕ್ ಚಿತ್ರದಲ್ಲಿ, ನಟಿಸೋದು ಇಷ್ಟವಂತೆ!]

  ಕನ್ನಡದ 'ಗೋವಿಂದಾಯ ನಮಃ' ತೆಲುಗಿನಲ್ಲಿ 'ನಾನು ಪೋತುಗಾಡು' ಎಂದು ರೀಮೇಕ್ ಆಗಿದ್ದಾಗ ಅಲ್ಲಿನ ಪ್ರೇಕ್ಷಕರು ಮೆಚ್ಚಿಕೊಂಡಿದ್ದರು. 'ಜೆಸ್ಸಿ' ಚಿತ್ರದ ಕಥೆ ತುಂಬಾ ವಿಶಿಷ್ಟವಾಗಿದ್ದು ಎಲ್ಲ ಕಡೆಯೂ ಸಲ್ಲುವಂತಿದೆ.

  ಜೊತೆಗೆ ನಟ ಧನಂಜಯ್, ಪಾರುಲ್ ಯಾದವ್ ಮತ್ತು ನಟ ರಘು ಮುಖರ್ಜಿ ಅವರಂತಹ ತಾಜಾ ಮುಖಗಳು ಚಿತ್ರದಲ್ಲಿರುವುದರಿಂದ ಖಂಡಿತ ಪ್ರೇಕ್ಷಕರು ಸಿನಿಮಾ ಇಷ್ಟಪಡುತ್ತಾರೆ. ಸದ್ಯಕ್ಕೆ ಶಬ್ದ ತಂತ್ರಜ್ಞ ರಾಮಕೃಷ್ಣ ಅವರು ಚೆನ್ನೈನಲ್ಲಿದ್ದು ಡಬ್ಬಿಂಗ್ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂಬುದು ನಿರ್ದೇಶಕ ಪವನ್ ಅವರ ಮಾತುಗಳು.[ಊಟಿಯ ಲವ್ಲಿ ವಾತಾವರಣದಲ್ಲಿ 'ಜೆಸ್ಸಿ' ಫಸ್ಟ್ ಶೆಡ್ಯೂಲ್ ಶೂಟಿಂಗ್ ಮುಕ್ತಾಯ]

  ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಮ್ಯೂಸಿಕ್ ಕಂಪೋಸ್ ಮಾಡಿರುವ ರೋಮ್ಯಾಂಟಿಕ್ ಲವ್ ಸ್ಟೋರಿ 'ಜೆಸ್ಸಿ' ಚಿತ್ರಕ್ಕೆ ಛಾಯಾಗ್ರಾಹಕ ಸೋಮಸುಂದರಂ ಅವರು ಕ್ಯಾಮರಾ ಕೈ ಚಳಕ ತೋರಿದ್ದಾರೆ.

  English summary
  Director Pawan Wadeyar's upcoming movie 'Jessie' to be dubbed in Tamil & Telugu langauges. The upcoming romantic entertainer is all set for a wider release. Kannada Actress Parul Yadav, Kannada Actor Dhananjay in the lead role.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X