»   » ಮುಂದಿನ ವಾರ ಚಿತ್ರಮಂದಿರಗಳಲ್ಲಿ 'ಜಿಗರ್ ಥಂಡ' ಹವಾ

ಮುಂದಿನ ವಾರ ಚಿತ್ರಮಂದಿರಗಳಲ್ಲಿ 'ಜಿಗರ್ ಥಂಡ' ಹವಾ

Posted By:
Subscribe to Filmibeat Kannada

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಅರ್ಪಿಸುವ ಬಹುನಿರೀಕ್ಷಿತ ರೀಮೇಕ್ ಸಿನಿಮಾ 'ಜಿಗರ್ ಥಂಡ' ಮುಂದಿನ ಶುಕ್ರವಾರ (ಜೂನ್ 24) ದಂದು ಇಡೀ ಕರ್ನಾಟಕದಾದ್ಯಂತ ಗ್ರ್ಯಾಂಡ್ ಆಗಿ ತೆರೆ ಕಾಣುತ್ತಿದೆ.

ಟಿ.ಎಸ್ ಸತ್ಯನಾರಾಯಣ ಮತ್ತು ರಘನಾಥ್ ಅವರು ಜಂಟಿಯಾಗಿ ಕಿಚ್ಚ ಕ್ರಿಯೇಷನ್ಸ್ ಮತ್ತು ಎಸ್.ಆರ್.ವಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿರುವ 'ಜಿಗರ್ ಥಂಡ' ಬಹಳ ಅದ್ದೂರಿ ವೆಚ್ಚದಲ್ಲಿ ನಿರ್ಮಾಣವಾಗಿದೆ.[50ರ ಗಡಿ ತಲುಪಿದ ಸಂಭ್ರಮದಲ್ಲಿ 'ಆರ್ಮುಗಂ' ರವಿಶಂಕರ್]


Kannada Movie 'Jigarthanda' all set to release on June 24th

ನಟ ಪಿ.ರವಿಶಂಕರ್ ಅವರು ಈ ಚಿತ್ರದಲ್ಲಿ ಮಹತ್ತರ ಪಾತ್ರ ವಹಿಸಿದ್ದು, ಇವರ ಅಭಿನಯದ 50ನೇ ಸಿನಿಮಾ ಇದಾಗಿದೆ. ಹಾಗೂ 'ಜಿಗರ್ ಥಂಡ' ಸಿನಿಮಾದ ಮೂಲಕ ನಟ ರವಿಶಂಕರ್ ಅವರು ಗಾಯಕನಾಗಿ ಕೂಡ ಹೊರಹೊಮ್ಮಿದ್ದಾರೆ.


ನಿರ್ದೇಶಕ ಶಿವ ಗಣೇಶ್ ಅವರು ಆಕ್ಷನ್-ಕಟ್ ಹೇಳಿರುವ ಈ ಚಿತ್ರಕ್ಕೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಅವರು ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಈಗಾಗಲೇ ಹಾಡುಗಳು ಕೂಡ ಉತ್ತಮ ರೆಸ್ಪಾನ್ಸ್ ಗಿಟ್ಟಿಸಿಕೊಂಡಿದೆ.[ಫೋಟೋ ಆಲ್ಬಂ; 'ಜಿಗರ್ ಥಂಡ' ಆಡಿಯೋ ರಿಲೀಸ್ ನಲ್ಲಿ ತಾರೆಗಳ ಸಂಗಮ]


Kannada Movie 'Jigarthanda' all set to release on June 24th

ವಿಶೇಷವಾಗಿ ಸ್ಪೇನ್ ನಲ್ಲಿ 'ಜಿಗರ್ ಥಂಡ'ಕ್ಕೆ ರೀ-ರೆಕಾರ್ಡಿಂಗ್ ಮಾಡಿದ್ದು, ವಿಶೇಷ ಪಾತ್ರದಲ್ಲಿ ನಟ ರಕ್ಷಿತ್ ಶೆಟ್ಟಿ ಮತ್ತು ನಿರ್ಮಾಪಕ ಕೆ.ಮಂಜು ಅವರು ಕಾಣಿಸಿಕೊಂಡಿದ್ದಾರೆ.


ಅಂದಹಾಗೆ ಸುಮಾರು 200ಕ್ಕೂ ಹೆಚ್ಚಿನ ಚಿತ್ರಮಂದಿರಗಳಲ್ಲಿ 'ಜಿಗರ್ ಥಂಡ' ತೆರೆ ಕಾಣಲಿದ್ದು, ಜಾಕ್ ಮಂಜು ಅವರು ವಿತರಣೆಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ.


ಇನ್ನುಳಿದಂತೆ ಚಿತ್ರದ ಪ್ರಮುಖ ಪಾತ್ರದಲ್ಲಿ ನಟ ರಾಹುಲ್, ನಟಿ ಸಂಯುಕ್ತಾ ಬೆಳವಾಡಿ, ದತ್ತಣ್ಣ, ಅವಿನಾಶ್, ಚಿಕ್ಕಣ್ಣ ಸೇರಿದಂತೆ ಹಲವರು ಪ್ರಮುಖ ಪಾತ್ರ ವಹಿಸಿದ್ದಾರೆ.


ಇನ್ನು ಈ ಚಿತ್ರಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ವಿಶೇಷವಾಗಿ ಶುಭ ಹಾರೈಸಿದ್ದು, ಹಾರೈಕೆಯ ವಿಡಿಯೋ ಇಲ್ಲಿದೆ ನೋಡಿ...



English summary
Kichcha Creations' latest offering Jigarthanda gets a release date. The movie will be released on the 24th of this month(June) throughout the state. Actor Rahul and Actor Ravishankar in the lead role. The movie is directed by Shiva Ganesh.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada