»   » ಪ್ರೇಕ್ಷಕರ ಮುಂದೆ ಬರುತ್ತಿದೆ ಸಾಯಿ ಸ್ಪೆಷಲ್ ಚಿತ್ರ 'ಕ'

ಪ್ರೇಕ್ಷಕರ ಮುಂದೆ ಬರುತ್ತಿದೆ ಸಾಯಿ ಸ್ಪೆಷಲ್ ಚಿತ್ರ 'ಕ'

Posted By:
Subscribe to Filmibeat Kannada

ಕನ್ನಡ ಚಿತ್ರರಂಗದಲ್ಲಿ ಈಗ ಪ್ರಯೋಗಾತ್ಮಕ ಚಿತ್ರಗಳದ್ದೇ ಹವಾ. ಹೊಸಬರ ಪ್ರಯತ್ನವನ್ನು ಕಾತುರದಿಂದ ನಿರೀಕ್ಷಿಸುವ ಪ್ರೇಕ್ಷಕರ ವರ್ಗವೇ ಈಗ ಸೃಷ್ಟಿಯಾಗಿದೆ. ಈಗ ಅಂತಹದ್ದೇ ಒಂದು ಚಿತ್ರ ಪ್ರೇಕ್ಷಕರ ಮುಂದೆ ಬರುತ್ತಿದೆ. ಚಿತ್ರದ ಶೀರ್ಷಿಕೆಯಿಂದಲೇ ಗಮನಸೆಳೆದಿರುವ ಚಿತ್ರ ಒಂದಕ್ಷರದ 'ಕ'.

ಚಿತ್ರದ ಶೀರ್ಷಿಕೆಯೇ ಪ್ರೇಕ್ಷಕರನ್ನು ಕಕ್ಕಾಬಿಕ್ಕಿ ಮಾಡುವಂತಿದೆ. ಖ್ಯಾತ ನಿರ್ದೇಶಕ ಓಂ ಸಾಯಿಪ್ರಕಾಶ್ ಅವರ ಪುತ್ರ ಹೆಸರಾಂತ ಡಿಸೈನರ್ ಸಾಯಿ ಕೃಷ್ಣ ಅವರ ಚೊಚ್ಚಲ ಪ್ರಯತ್ನವಿದು. ಏನಿದು 'ಕ'? ಎಂಬುದು ಗೊತ್ತಾಗಬೇಕಾದರೆ ಇದೇ ಡಿಸೆಂಬರ್ 5ರಂದು ತೆರೆಕಾಣುತ್ತಿರುವ ಚಿತ್ರವನ್ನು ನೋಡಬೇಕಾಗುತ್ತದೆ. ['ಕ' ಚಿತ್ರತಂಡದಿಂದ ಡಾ.ರಾಜ್ ಗೆ ವಿಭಿನ್ನ ನಮನ]

Kannada movie Ka releases on 5th December

ಹಿರಿಯ ನಿರ್ದೇಶಕ ಓಂ ಸಾಯಿ ಪ್ರಕಾಶ್ ಅವರ ಪುತ್ರ ಸಾಯಿ ಕೃಷ್ಣ ಅವರ ಬಹು ನಿರೀಕ್ಷಿತ ಕನ್ನಡ ಚಿತ್ರವಿದು. ಕುತೂಹಲದ ಜೊತೆಗೆ ಈಗಿನ ಯುವಜನರ ನಾಡಿಮಿಡಿತವನ್ನು ಅರಿತಿರುವ ಸಾಯಿ ಕೃಷ್ಣ ಒಂದು ವಿಶೇಷ ಸಿನಿಮಾವನ್ನೇ ಮಾಡಿದ್ದಾರೆ ಎಂಬ ಸುದ್ದಿ ದಟ್ಟವಾಗಿ ಹರಡಿದೆ.

ಸಾಯಿ ಫಿಲಂಸ್ ನ 'ಕ' ಚಿತ್ರದ ಹಾಡುಗಳಿಂದ ಈಗಾಗಲೇ ಗೆದ್ದಿದ್ದು ಆಗಿದೆ. ಯು/ಎ ಅರ್ಹತಾ ಪತ್ರ ಸ್ವೀಕರಿಸಿರುವ 'ಕ' ...‘ಪ್ಯಾರ್ ರಿಸ್ಕ್ ಔರ್ ಮೋಹಬತ್...ಎಂಬ ಉಪಶೀರ್ಷಿಕೆ ಇಟ್ಟುಕೊಂಡಿದೆ. ಸಾಯಿ ಕೃಷ್ಣ ಅವರು ‘ಕ' ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಅಲ್ಲದೆ ಅವರೇ ನಿರ್ಮಾಪಕರು ಸಹ.

ಜಯಣ್ಣ ಕಂಬೈನ್ಸ್ ಅರ್ಪಿಸುವ ಸಂಗೀತ ಮೂವೀಸ್ ಅವರ ‘ಕ' ಚಿತ್ರದ ನಿರ್ಮಾಪಕರು ರಾಜಮ್ಮ ಸಾಯಿಪ್ರಕಾಶ್. ಶರತ್, ಮೋನಿಶ್ ನಾಗರಾಜ್, ವಿಶಾಲ್ ನಾಯರ್, ಶೈನ್ ಶೆಟ್ಟಿ ಜೊತೆಗ ಪವಿತ್ರ, ಅನುಷ, ಪಲ್ಲವಿ, ದೀಪ, ದೀಪ್ತಿ ಸಹ ತಾರಾಗಣದಲ್ಲಿ ಇದ್ದಾರೆ. ಛಾಯಾಗ್ರಹಣ ಸ್ಟೀವ್ ಬೆಂಜಮಿನ್, ಸಂಗೀತ ಗಣೇಶ್ ನಾರಾಯಣ ಅವರದು. (ಫಿಲ್ಮಿಬೀಟ್ ಕನ್ನಡ)

English summary
Om Saiprakash's son Sai Krishna's 'Ka' releases on 5th December. Along with direction Sai Krishna writes story, screenplay, dialogues and producing the movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada