»   » ಜುಲೈ 2ನೇ ವಾರ ಉಪ್ಪಿ ಅಭಿಮಾನಿಗಳಿಗೆ ಥಿಯೇಟರ್ ನಲ್ಲಿ ಹಬ್ಬ

ಜುಲೈ 2ನೇ ವಾರ ಉಪ್ಪಿ ಅಭಿಮಾನಿಗಳಿಗೆ ಥಿಯೇಟರ್ ನಲ್ಲಿ ಹಬ್ಬ

Posted By:
Subscribe to Filmibeat Kannada

ರಿಯಲ್ ಸ್ಟಾರ್ ಉಪೇಂದ್ರ, ನಟಿ ಪ್ರಿಯಾಮಣಿ ಮತ್ತು ನಟಿ ಅವಂತಿಕಾ ಶೆಟ್ಟಿ ಒಂದಾಗಿ ಕಾಣಿಸಿಕೊಂಡಿರುವ 'ಕಲ್ಪನಾ 2' ಚಿತ್ರ ತೆರೆಗೆ ಬರಲು ಕೌಂಟ್ ಡೌನ್ ಶುರು ಆಗಿದೆ. ಹೌದು ಎಲ್ಲವೂ ಅಂದುಕೊಂಡಂತೆ ಸರಾಗವಾಗಿ ನಡೆದರೆ ಜುಲೈ 15ಕ್ಕೆ 'ಕಲ್ಪನಾ 2' ಗ್ರ್ಯಾಂಡ್ ಆಗಿ ತೆರೆಗೆ ಅಪ್ಪಳಿಸಲಿದೆ.

2015 ರಲ್ಲಿ ಸೆಟ್ಟೇರಿ ಶೂಟಿಂಗ್ ಆರಂಭ ಮಾಡಿದ್ದ 'ಕಲ್ಪನಾ 2' ಇದೀಗ ತೆರೆಗೆ ಬರಲು ಸಜ್ಜಾಗಿ ನಿಂತಿದೆ. ಈ ಮೊದಲು ಹೇಳಿದಂತೆ 'ಕಲ್ಪನಾ 2' ಶೂಟಿಂಗ್ ಅನ್ನು 5 ಶೆಡ್ಯೂಲ್ ಗಳಲ್ಲಿ ಮಾಡಿ ಮುಗಿಸಲು ಚಿತ್ರತಂಡ ನಿರ್ಧರಿಸಿತ್ತು. ಆದರೆ ತದನಂತರ ಬರೀ ಒಂದೇ ಶೆಡ್ಯೂಲ್ ನಲ್ಲಿ ಶೂಟಿಂಗ್ ಮಾಡಿದ ಕಾರಣ ಇದೀಗ ಶೂಟಿಂಗ್ ಕಂಪ್ಲೀಟ್ ಆಗಿ ಚಿತ್ರ ತೆರೆಗೆ ಬರಲು ತಯಾರಾಗಿ ನಿಂತಿದೆ.[ವಿಡಿಯೋ: 'H2O' ಕುಡಿದು ಸಖತ್ ಆಗಿ ಹಾಡಿ-ಕುಣಿದ ಉಪೇಂದ್ರ]


Kannada Movie 'Kalpana 2' all set to releasing on July 15th

ತಮಿಳು 'ಕಾಂಚನಾ 2' ಚಿತ್ರದ ರೀಮೇಕ್ ಆಗಿರುವ 'ಕಲ್ಪನಾ 2' ಚಿತ್ರಕ್ಕೆ ನಿರ್ದೇಶಕ ಆರ್ ಅನಂತ್ ರಾಜು ಅವರು ಆಕ್ಷನ್-ಕಟ್ ಹೇಳಿದ್ದಾರೆ. ನಿರ್ಮಾಪಕ ಕೆ.ಎಂ ರಾಜೇಂದ್ರ ಅವರು ಬಂಡವಾಳ ಹೂಡಿರುವ ಚಿತ್ರದಲ್ಲಿ ನಟಿ ಪ್ರಿಯಾಮಣಿ ಮತ್ತು 'ರಂಗಿತರಂಗ' ಖ್ಯಾತಿಯ ಅವಂತಿಕಾ ಶೆಟ್ಟಿ ಅವರು ಉಪ್ಪಿ ಅವರಿಗೆ ಸಾಥ್ ನೀಡಿದ್ದಾರೆ.[ಜೂನ್ 9ಕ್ಕೆ ಉಪ್ಪಿ ಅಭಿಮಾನಿಗಳಿಗೆ ಕಾದಿದೆ ಸಂತಸದ ಸುದ್ದಿ]


Kannada Movie 'Kalpana 2' all set to releasing on July 15th

ಇದೀಗ ಜುಲೈ 15 ಕ್ಕೆ ಹಾರರ್-ಥ್ರಿಲ್ಲರ್ 'ಕಲ್ಪನಾ 2' ತೆರೆಗೆ ಬರಲಿದ್ದು, ಉಪ್ಪಿ ಅಭಿಮಾನಿಗಳು ಕೂಡ ಪಟಾಕಿ ಸಿಡಿಸಿ ಸಂಭ್ರಾಮಾಚರಣೆ ನಡೆಸಲು ಎಲ್ಲಾ ತಯಾರಿ ನಡೆಸುತ್ತಿದ್ದಾರೆ.['ಕಲ್ಪನಾ-2' ಶೂಟಿಂಗ್ ಸೆಟ್ ನಲ್ಲಿ ನಡೆದ್ದೇನು? ಉಪೇಂದ್ರಗೆ ಏನಾಯ್ತು?]


Kannada Movie 'Kalpana 2' all set to releasing on July 15th

ಅಂದಹಾಗೆ ಜುಲೈ 15 ರಂದು ವಿಜಯ ರಾಘವೇಂದ್ರ ಮತ್ತು ನಿಧಿ ಸುಬ್ಬಯ್ಯ ಅವರ 'ನನ್ನ ನಿನ್ನ ಪ್ರೇಮಕಥೆ' ಕೂಡ ತೆರೆಗೆ ಬರಲಿದ್ದು, ಉಪ್ಪಿ ಅವರು ವಿಜಯ ರಾಘವೇಂದ್ರ ಅವರಿಗೆ ಸಖತ್ ಫೈಟ್ ಕೊಡಲಿದ್ದಾರೆ ಎಂದೆನಿಸುತ್ತಿದೆ.

English summary
Kannada Actor Upendra, Kannada Actress Priyamani and Actress Avanthika Shetty starrer Kannada Movie 'Kalpana 2' release date has been confirmed. The movie is releasing worldwide on July 15th. The movie is directed by R Anantharaju.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada