»   » ಬರ್ತಾ ಇದೆ 'ಕರ್ವ 2': ಮತ್ತೆ ತೆರೆಯ ಮೇಲೆ ವೈದೇಹಿ ಕಲರವ

ಬರ್ತಾ ಇದೆ 'ಕರ್ವ 2': ಮತ್ತೆ ತೆರೆಯ ಮೇಲೆ ವೈದೇಹಿ ಕಲರವ

Posted By:
Subscribe to Filmibeat Kannada

ವಿಭಿನ್ನ ಪ್ರಯೋಗ ಮಾಡಿ ಹಾರರ್ ಸಿನಿಮಾವನ್ನು ತೆರೆ ಮೇಲೆ ತಂದು ಪ್ರೇಕ್ಷಕರನ್ನು ಮೋಡಿ ಮಾಡಿದ 6-5=2 ಚಿತ್ರತಂಡದ, ಮತ್ತೊಂದು ಹೊಸ ಸಾಹಸ 'ಕರ್ವ' ಚಿತ್ರ ಇಡೀ ಸಿನಿ ಪ್ರೀಯರ ಮೆಚ್ಚುಗೆ ಗಳಿಸಿ ಈಗಲೂ ಚಿತ್ರಮಂದಿರಗಳಲ್ಲಿ ಮುನ್ನುಗ್ಗುತ್ತಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

ಅಂದಹಾಗೆ ಇದೀಗ 'ಕರ್ವ' ನೋಡಿ ಬಹಳ ಮೆಚ್ಚಿಕೊಂಡ ಅಭಿಮಾನಿಗಳಿಗೆ ನಿರ್ದೇಶಕ ನವನೀತ್ ಅವರು ಸಂತಸದ ಸುದ್ದಿಯೊಂದನ್ನು ಹೊರಹಾಕಿದ್ದಾರೆ. ಅದೇನಪ್ಪಾ ಅಂದ್ರೆ 'ಕರ್ವ' ಚಿತ್ರದ ಮುಂದುವರಿದ ಭಾಗದ ಶೂಟಿಂಗ್ ಸದ್ಯದಲ್ಲೇ ಆರಂಭ ಮಾಡುತ್ತಿದ್ದಾರೆ.[ಹೀಗೂ ಉಂಟು.! 'ಕರ್ವ' ಟ್ರೈಲರ್ ನೋಡಿ, ಬೆಚ್ಚಿಬೀಳುವುದು ಖಾತ್ರಿ.!]


Kannada Movie 'Karva 2' to go on floors soon

ಹೌದು 'ಕರ್ವ' ಸಿನಿಮಾ ನೋಡಿದವರು ಕ್ಷಣ-ಕ್ಷಣಕ್ಕೂ ಕುತೂಹಲ ಭರಿತರಾಗಿ ಸೀಟಿನ ತುದಿಗೆ ಬಂದು ಕುಳಿತು ಕೊನೆಗೆ ಕ್ಲೈಮ್ಯಾಕ್ಸ್ ವರೆಗೂ ಉಗುರು ಕಚ್ಚುತ್ತಾ ಕುಳಿತ್ತಿದ್ದವರಿಗೆ ಚಿತ್ರದ ಕೊನೆ ಹಂತದಲ್ಲಿ 'ಮಿಸ್ಟರಿ ಟು ಬಿ ಕಂಟಿನ್ಯೂ' 'ಕರ್ವ ಭಾಗ 2' ನಿರೀಕ್ಷಿಸಿ ಅಂತ ಪರದೆ ಮೇಲೆ ಮೂಡಿ ಬಂದಾಗ ಕೆಲವು ಪ್ರೇಕ್ಷಕರಿಗೆ 'ಛೇ' ಅಂತ ನಿರಾಸೆ ಆಗಿದ್ದು ಸುಳ್ಳಲ್ಲ.[ರೆಕಾರ್ಡ್ ಬೆಲೆಗೆ ಡಬ್ಬಿಂಗ್ ರೈಟ್ಸ್ ಸೇಲ್ ಮಾಡಿದ ಕನ್ನಡ ಚಿತ್ರ ಯಾವುದು.?]


Kannada Movie 'Karva 2' to go on floors soon

ಇದೀಗ ಪ್ರೇಕ್ಷಕರಿಗೆ ನಿರಾಸೆ ಮಾಡಲು ಇಷ್ಟಪಡದ ನವನೀತ್ ಅವರು ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಪಣ ತೊಟ್ಟಿದ್ದಾರೆ. 'ಕರ್ವ' ಚಿತ್ರದ ಮುಂದುವರಿದ ಭಾಗದ ಚಿತ್ರೀಕರಣವನ್ನು ಬಹಳ ಬೇಗನೇ ಶುರು ಮಾಡುತ್ತಿದ್ದಾರೆ.


ಇನ್ನು 'ಕರ್ವ' ಭಾಗ 1 ಒಂದರಲ್ಲಿ ಇದ್ದ ತಾರಾಗಣವೇ ಇಲ್ಲೂ ಮುಂದುವರಿಯಲಿದ್ದು, ನಟ ತಿಲಕ್ ಶೇಖರ್, ಆರ್ ಜೆ ರೋಹಿತ್, ನಟಿ ಅನಿಶಾ ಅಂಬ್ರೋಸ್, ನಟಿ ಅನು ಪೂವಮ್ಮ, ನಟಿ ಪೂನಂ ಸಿಂಗಾರ್ ಮತ್ತು ವಿಜಯ್ ಚೆಂಡೂರ್ ಮುಂತಾದವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.['ಕರ್ವ' ವಿಮರ್ಶೆ: ರಾಜ ಬಂಗಲೆ ರಹಸ್ಯ ನೋಡಿ, ಭಯಪಡಿ!]


Kannada Movie 'Karva 2' to go on floors soon

ಚಿತ್ರಕ್ಕೆ 6-5=2 ಖ್ಯಾತಿಯ ಕೃಷ್ಣ ಚೈತನ್ಯ ಅವರು ಬಂಡವಾಳ ಹೂಡಿದ್ದು, ಇದೀಗ ಭಾಗ 2 ಗೂ ಅವರೇ ನಿರ್ಮಾಪಕರಾಗಿ ಮುಂದುವರಿಯಲಿದ್ದಾರೆ. ಅಂತೂ ಆದಷ್ಟು ಬೇಗ 'ಕರ್ವ 2' ತೆರೆ ಮೇಲೆ ಬರಲಿದ್ದು, ಮತ್ತೆ ಪ್ರೇಕ್ಷಕರಿಗೆ ಭಯ ಹುಟ್ಟಿಸಲು ನವನೀತ್ ತಯಾರಾಗಿದ್ದಾರೆ. ನೀವು ಭಯ ಪಡಲು ತಯಾರಿದ್ದೀರಾ?.

English summary
Director Navneeth directorial Kannada Movie 'Karva 2' to go on floors soon. Actor RJ Rohith, Kannada Actor Tilak, Actress Anu Poovamma, Actress Anisha Ambrose, in the lead role. The movie produced by Krishna Chaitanya.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada