»   » ತೆಲುಗು ಮತ್ತು ತಮಿಳಿನಲ್ಲಿ ರೀಮೇಕ್ ಆಗಲಿದ್ಯಾ ಕನ್ನಡದ 'ಕರ್ವ'?

ತೆಲುಗು ಮತ್ತು ತಮಿಳಿನಲ್ಲಿ ರೀಮೇಕ್ ಆಗಲಿದ್ಯಾ ಕನ್ನಡದ 'ಕರ್ವ'?

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ಅಂಗಳದಲ್ಲಿ 'ಕರ್ವ' ಸಿನಿಮಾ ಸದ್ದು ಮಾಡಿದಂತೆ, ಕಾಲಿವುಡ್ ಹಾಗೂ ಟಾಲಿವುಡ್ ನಲ್ಲೂ ಸೌಂಡ್ ಮಾಡುವ ಸಾಧ್ಯತೆ ಇದೆ.

'ಕರ್ವ' ಚಿತ್ರವನ್ನ ಕಣ್ತುಂಬಿಕೊಂಡಿರುವ ತೆಲುಗು ಹಾಗೂ ತಮಿಳಿನ ಹಲ ನಿರ್ಮಾಪಕರು ರೀಮೇಕ್ ಮಾಡಲು ಮುಂದೆ ಬಂದಿದ್ದಾರೆ. 'ಕರ್ವ' ಚಿತ್ರದ ರೀಮೇಕ್ ರೈಟ್ಸ್ ಪಡೆಯಲು ವ್ಯಕ್ತವಾಗಿರುವ ಡಿಮ್ಯಾಂಡ್ ನೋಡಿ ನಿರ್ದೇಶಕ ನವನೀತ್ ಹಾಗೂ ನಿರ್ಮಾಪಕ ಕೃಷ್ಣ ಚೈತನ್ಯ ಅಚ್ಚರಿ ಪಟ್ಟಿದ್ದಾರೆ. ['ಕರ್ವ' ವಿಮರ್ಶೆ: ರಾಜ ಬಂಗಲೆ ರಹಸ್ಯ ನೋಡಿ, ಭಯಪಡಿ!]


kannada-movie-karva-remake-rights-in-demand

ಸದ್ಯಕ್ಕೆ ಯಾರಿಗೂ ರೀಮೇಕ್ ರೈಟ್ಸ್ ಸೇಲ್ ಮಾಡದ ಈ ತಂಡ, ಖುದ್ದು ಕಾಲಿವುಡ್ ಹಾಗೂ ಟಾಲಿವುಡ್ ನಲ್ಲಿ ರೀಮೇಕ್ ಮಾಡುವ ಪ್ಲಾನ್ ನಲ್ಲಿದೆ. [ಅಮೇರಿಕಾದಲ್ಲಿ ಜುಲೈ 9 ರಿಂದ ಶುರು 'ಕರ್ವ' ಕಲರವ.!]


''ಅಲ್ಲಿನ ಚಿತ್ರರಂಗ ನಮಗೆ ಹೊಸದು. ಹೀಗಾಗಿ ನಾವೇ ಅಲ್ಲಿ ರೀಮೇಕ್ ಮಾಡುವ ಬಗ್ಗೆ ಯೋಚನೆ ಮಾಡುತ್ತಿದ್ದೇವೆ'' ಎನ್ನುತ್ತಾರೆ ನಿರ್ದೇಶಕ ನವನೀತ್.


ಯು.ಎಸ್.ಎ ಹಾಗೂ ಕೆನಡಾದಲ್ಲೂ ಬಿಡುಗಡೆ ಆಗುತ್ತಿರುವ 'ಕರ್ವ' ಸಿನಿಮಾ ರೀಮೇಕ್ ಆದರೆ, ಚಿತ್ರತಂಡದ ಹಿರಿಮೆಗೆ ಮತ್ತೊಂದು ಗರಿ ಸಿಕ್ಕಿದ ಹಾಗೆ.

English summary
Suspense-thriller film 'Karva' remake rights has great demand from Tollywood and Kollywood Producers. Navneeth directorial 'Karva' features Kannada Actor Devaraj, Tilak, Rohit in the prominent role.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada