»   » ಅಮೇರಿಕಾದಲ್ಲಿ ಜುಲೈ 9 ರಿಂದ ಶುರು 'ಕರ್ವ' ಕಲರವ.!

ಅಮೇರಿಕಾದಲ್ಲಿ ಜುಲೈ 9 ರಿಂದ ಶುರು 'ಕರ್ವ' ಕಲರವ.!

Posted By:
Subscribe to Filmibeat Kannada

ಗಾಂಧಿನಗರದ ಗಲ್ಲಪೆಟ್ಟಿಗೆಯಲ್ಲಿ ಸಿಕ್ಕಾಪಟ್ಟೆ ಕಲೆಕ್ಷನ್ ಮಾಡಿದ್ದ ಹಾರರ್ ಥ್ರಿಲ್ಲರ್ ಸಿನಿಮಾ 'ಕರ್ವ' ಇದೀಗ ಅಮೇರಿಕಾದಲ್ಲೂ ಬಿಡುಗಡೆ ಆಗಲಿದೆ. ಇದೇ ವಾರ (ಜುಲೈ 9) ಯು.ಎಸ್.ಎ ಮತ್ತು ಕೆನಡಾದಲ್ಲಿ 'ಕರ್ವ' ಸಿನಿಮಾ ಗ್ರ್ಯಾಂಡ್ ರಿಲೀಸ್ ಆಗುತ್ತಿದೆ.

ಅನೇಕ ಕನ್ನಡ ಚಿತ್ರಗಳನ್ನ ವಿದೇಶಗಳಲ್ಲಿ ವಿತರಣೆ ಮಾಡಿರುವ ಕಸ್ತೂರಿ ಮೀಡಿಯಾ.ಕಾಮ್ ಸಂಸ್ಥೆ, 'ಕರ್ವ' ಚಿತ್ರವನ್ನ ಅಮೇರಿಕಾದಲ್ಲಿ ತೆರೆಗೆ ತರುತ್ತಿದೆ. ['ಕರ್ವ' ವಿಮರ್ಶೆ: ರಾಜ ಬಂಗಲೆ ರಹಸ್ಯ ನೋಡಿ, ಭಯಪಡಿ!]


kannada-movie-karva-to-release-in-usa-and-canada-this-week

ಈಗಾಗಲೇ ಆಂಗ್ಲ ಭಾಷೆಯಲ್ಲಿ ಸಬ್ ಟೈಟಲ್ ಹಾಕುವ ಕೆಲಸ ಪೂರ್ಣಗೊಂಡಿದೆ. ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. [ಇಡೀ ಭಾರತದಾದ್ಯಂತ ಸದ್ದು-ಸುದ್ದಿ ಮಾಡಲಿದೆ ಕನ್ನಡದ 'ಕರ್ವ'.!]


ದೇವರಾಜ್, ತಿಲಕ್, ಆರ್.ಜೆ ರೋಹಿತ್, ಪೂನಂ ಸಿಂಗಾರ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಿನಿಮಾ 'ಕರ್ವ'. ನವನೀತ್ ಆಕ್ಷನ್ ಕಟ್ ಹೇಳಿರುವ 'ಕರ್ವ' ಚಿತ್ರಕ್ಕೆ ಕೃಷ್ಣ ಚೈತನ್ಯ ನಿರ್ಮಾಪಕರು.


ಕರ್ನಾಟಕದಲ್ಲೇ ಕನ್ನಡ ಚಿತ್ರಗಳಿಗೆ ಕೇಳುವವರಿಲ್ಲ. ಹೀಗಿರುವಾಗ, ವಿದೇಶಿ ನೆಲಕ್ಕೂ ಅಡಿಯಿಡುತ್ತಿರುವ 'ಕರ್ವ' ಚಿತ್ರವನ್ನ ಮೆಚ್ಚಲೇಬೇಕಲ್ಲವೇ.!?

English summary
Suspense-thriller film 'Karva' is all set to release in USA and Canada this week (July 9th). Navneeth directorial 'Karva' features Kannada Actor Devaraj, Tilak, Rohit in the prominent role.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada