For Quick Alerts
  ALLOW NOTIFICATIONS  
  For Daily Alerts

  ರಶ್ಮಿಕಾ ಮಂದಣ್ಣ ಎದುರು ವಿಲನ್ ಆದ 'ಕೆಜಿಎಫ್' ಚಿತ್ರದ ಗರುಡ

  |
  ತಮಿಳಿಗೆ ಹೋದ ರಶ್ಮಿಕಾಗೆ ಶುರುವಾಯ್ತು ಗರುಡನ ಕಾಟ | FILMIBEAT KANNADA

  ನಟಿ ರಶ್ಮಿಕಾ ಮಂದಣ್ಣ ಟಾಲಿವುಡ್ ನಲ್ಲಿ ಸಖತ್ ಬ್ಯುಸಿ ಇರುವ ನಟಿ. ತೆಲುಗು ಸಿನಿಮಾಗಳ ಜೊತೆಗೆ ಕನ್ನಡ ಮತ್ತು ತಮಿಳು ಸಿನಿಮಾದಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ವಿಜಯ್ ದೇವರಕೊಂಡ ಜೊತೆ 'ಡಿಯರ್ ಕಾಮ್ರೇಡ್' ಚಿತ್ರದ ಮೂಲಕ ಸದ್ದು ಮಾಡುತ್ತಿರುವ ರಶ್ಮಿಕಾ ಪಾಲಿಗೀಗ 'ಕೆಜಿಎಫ್' ಚಿತ್ರದ ಗರುಡ ವಿಲನ್ ಆಗಿ ಕಾಡುತ್ತಿದ್ದಾರಂತೆ.

  'ಕೆಜಿಎಫ್' ನಲ್ಲಿ ಖಳನಟನಾಗಿ ಗರುಡ ಪಾತ್ರಕ್ಕೆ ಬಣ್ಣ ಹಚ್ಚಿದ್ದ ನಟ ರಾಮ್ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ರು. ಈಗ ಇದೇ ಗರುಡ ರಶ್ಮಿಕಾ ಪಾಲಿಗೆ ವಿಲನ್ ಆಗಿದ್ದಾರೆ. ಅಚ್ಚರಿ ಪಡಬೇಡಿ, ಇದು ರಿಯಲ್ ಅಲ್ಲ ರೀಲ್. ರಶ್ಮಿಕಾ ಇತ್ತೀಚಿಗಷ್ಟೆ ತಮಿಳು ಸಿನಿಮಾವನ್ನು ಅನೌನ್ಸ್ ಮಾಡಿದ್ದರು. ನಟ ಕಾರ್ತಿಕ್ ಗೆ ನಾಯಕಿಯಾಗುವ ಮೂಲಕ ಮೊದಲ ಬಾರಿಗೆ ರಶ್ಮಿಕಾ ಕಾಲಿವುಡ್ ಪ್ರೇಕ್ಷಕರನ್ನು ರಂಜಿಸಲು ಸಿದ್ಧರಾಗಿದ್ದಾರೆ.

  'ಚಲೋ' ನಿರ್ದೇಶಕನ ಜೊತೆಗೆ ರಶ್ಮಿಕಾ ಮತ್ತೊಂದು ಸಿನಿಮಾ

  ಈ ಸಿನಿಮಾದಲ್ಲಿ 'ಕೆಜಿಎಫ್' ಚಿತ್ರದ ಗರುಡ ವಿಲನ್ ಆಗಿ ಖದರ್ ತೋರಿಸಲಿದ್ದಾರಂತೆ. 'ಕೆಜಿಎಫ್' ನಂತರ ರಾಮ್ ಗೆ ಅವಕಾಶಗಳು ಹೆಚ್ಚಾಗುತ್ತಿವೆ. ಸ್ಯಾಂಡಲ್ ವುಡ್ ಮಾತ್ರವಲ್ಲದೆ ಪರಭಾಷೆಯಿಂದಲೂ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಈಗ ಕಾರ್ತಿಕ್ ಮತ್ತು ರಶ್ಮಿಕಾ ಅಭಿನಯದ ಚಿತ್ರಕ್ಕೆ ಖಳನಟನಾಗಿ ಆಯ್ಕೆಯಾಗುವ ಮೂಲಕ ರಾಮ್ ಮೊದಲ ಬಾರಿಗೆ ತಮಿಳು ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ.

  ''ಇದು ನಾನು ಪ್ರೀತಿಸುವ ಸಮಯ'' ಅಚ್ಚರಿ ಮೂಡಿಸಿದ ರಶ್ಮಿಕಾ ಟ್ವೀಟ್

  'ಕೆಜಿಎಫ್' ನಲ್ಲಿ ಗಡ್ಡಧಾರಿಯಾಗಿ ಕಾಣಿಸಿಕೊಂಡಿದ್ದ ರಾಮ್ ತಮಿಳಿನಲ್ಲಿ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. ಈಗಾಗಲೇ ಚಿತ್ರೀಕರಣ ಪ್ರಾರಂಭವಾಗಿದ್ದು ರಾಮ್ ಮುಂದಿನ ಹಂತದ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರಂತೆ. ಚಿತ್ರ ಭಾಗ್ಯರಾಜ್ ಕಣ್ಣನ್ ಸಾರಥ್ಯದಲ್ಲಿ ಮೂಡಿ ಬರುತ್ತಿದೆ.

  English summary
  Kannada movie 'KGF' villain garuda entrer in to tamil industry. He is playing villain opposite actor Karthik and Rashmika Mandanna.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X