»   » '3D' ಚಿತ್ರವಾಗಿ ತೆರೆಗೆ ಬರಲಿದೆ ಕನ್ನಡದ 'ಕುರುಕ್ಷೇತ್ರ'

'3D' ಚಿತ್ರವಾಗಿ ತೆರೆಗೆ ಬರಲಿದೆ ಕನ್ನಡದ 'ಕುರುಕ್ಷೇತ್ರ'

Posted By:
Subscribe to Filmibeat Kannada

ವರ್ಷಗಳ ಹಿಂದೆ... ಅಂದ್ರೆ 2012 ರಲ್ಲಿ ರಿಯಲ್ ಸ್ಟಾರ್ ಉಪೇಂದ್ರ, ರೆಬೆಲ್ ಸ್ಟಾರ್ ಅಂಬರೀಶ್, ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅಭಿನಯಿಸಿದ್ದ 'ಕಠಾರಿವೀರ ಸುರಸುಂದರಾಂಗಿ' ಸಿನಿಮಾ '3D' ವರ್ಷನ್ ನಲ್ಲಿ ತೆರೆಗೆ ಬಂದಿತ್ತು. ಸ್ಯಾಂಡಲ್ ವುಡ್ ಮಟ್ಟಿಗೆ ಅಂದು ಅದು ವಿಭಿನ್ನ ಪ್ರಯೋಗವಾಗಿತ್ತು. 'ಕಠಾರಿವೀರ ಸುರಸುಂದರಾಂಗಿ' ಚಿತ್ರದ ಬಳಿಕ ಕನ್ನಡದಲ್ಲಿ ಯಾವ '3D' ಸಿನಿಮಾಗಳೂ ತೆರೆಗೆ ಬರಲಿಲ್ಲ.

ಇದೀಗ ಮತ್ತದೇ 'ಕಠಾರಿವೀರ ಸುರಸುಂದರಾಂಗಿ' ಚಿತ್ರದ ನಿರ್ಮಾಪಕ ಮುನಿರತ್ನ 'ಕುರುಕ್ಷೇತ್ರ' ಚಿತ್ರಕ್ಕೆ ಬಂಡವಾಳ ಹಾಕಲು ಮುಂದಾಗಿರುವುದು ನಿಮಗೆ ಗೊತ್ತೇ ಇದೆ. 'ಕುರುಕ್ಷೇತ್ರ' ಚಿತ್ರವನ್ನೂ '3D' ವರ್ಷನ್ ನಲ್ಲಿ ತೆರೆಗೆ ತರಲು ಮುನಿರತ್ನ ಸಕಲ ತಯಾರಿ ಮಾಡಿಕೊಂಡಿದ್ದಾರಂತೆ.

Kannada Movie 'Kurukshetra' will be a 3D Film

'ಕುರುಕ್ಷೇತ್ರ' ಸಿನಿಮಾ 2D ಹಾಗೂ 3D ವರ್ಷನ್ ಗಳಲ್ಲಿ ತಯಾರಾಗುವುದನ್ನು ನಿರ್ದೇಶಕ ನಾಗಣ್ಣ ಕೂಡ ಖಚಿತ ಪಡಿಸಿದ್ದಾರೆ.

ಆಗಸ್ಟ್ 6 ರಂದು 'ಕುರುಕ್ಷೇತ್ರ' ಮುಹೂರ್ತ ನಡೆಯಲಿದ್ದು, ಹೈದರಾಬಾದ್ ನ ರಾಮೋಜಿ ಫಿಲ್ಮ್ ಸ್ಟುಡಿಯೋದಲ್ಲಿ ಚಿತ್ರದ ಚಿತ್ರೀಕರಣಕ್ಕಾಗಿ ಅದ್ಧೂರಿ ಸೆಟ್ ನಿರ್ಮಿಸಲಾಗಿದೆ.

'ಬಾಹುಬಲಿ' ಚಿತ್ರದ ಗ್ರಾಫಿಕ್ಸ್ ಗಾಗಿ ಕೆಲಸ ಮಾಡಿದ್ದ ತಂತ್ರಜ್ಞರ ತಂಡ 'ಕುರುಕ್ಷೇತ್ರ' ಚಿತ್ರಕ್ಕೂ ಗ್ರಾಫಿಕ್ಸ್ ಮಾಡಲಿದೆ. 'ಕುರುಕ್ಷೇತ್ರ' ಚಿತ್ರದ ಹೆಚ್ಚಿನ ಮಾಹಿತಿಗಾಗಿ 'ಫಿಲ್ಮಿಬೀಟ್ ಕನ್ನಡ' ಓದುತ್ತಿರಿ...

English summary
Director Naganna confirms that Kannada Movie 'Kurukshetra' will be a 3D Film.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada