For Quick Alerts
  ALLOW NOTIFICATIONS  
  For Daily Alerts

  ಗಾಡ್ ಫಾದರ್, ಕಠಾರಿವೀರ ಕಿತ್ತಾಟ ಪುಕ್ಸಟೆ ಪ್ರಚಾರಕ್ಕೆ?

  |

  ಈ ರೀತಿಯ ಅನುಮಾನ ನಮ್ಮ ನಿಮ್ಮನ್ನು ಕಾಡದೆ ಇರದು. ಕಠಾರಿವೀರ ಚಿತ್ರದ ನಿರ್ಮಾಪಕ ಮುನಿರತ್ನ ಮತ್ತು ಗಾಡ್ ಫಾದರ್ ಚಿತ್ರದ ನಿರ್ಮಾಪಕ ಕೆ ಮಂಜು ತಮ್ಮ ತಮ್ಮ ಚಿತ್ರಗಳು ಮೊದಲು ಬಿಡುಗಡೆಯಾಗ ಬೇಕೆಂದು ಯಾವ ಪಾಟಿ ಚಾನಲ್ ನಲ್ಲಿ ಕಿತ್ತಾಡಿದ್ದರು. ಅಣ್ಣಾ ಬಾಂಡ್ ಚಿತ್ರಕ್ಕೆ ಪೈಪೋಟಿ ನೀಡಬೇಕಿದ್ದ ಕಠಾರಿವೀರ ಚಿತ್ರ ಮೇ 10ಕ್ಕೆ ಮುಂದೂಡಲ್ಪಟ್ಟಿತು.

  ತಮ್ಮ ಚಿತ್ರವೇ ಮೊದಲು ಬಿಡುಗಡೆ ಯಾಗಬೇಕೆಂದು ಹಠಕ್ಕೆ ಬಿದ್ದಿದ್ದ ಮಂಜು ತಮ್ಮ ಚಿತ್ರವನ್ನು ಜೂನ್ ತಿಂಗಳಿಗೆ ಮುಂದೂಡಿದರು. ಮಂಜು ಈಗ ನೀಡುತ್ತಿರುವ ಕಾರಣ ಕನ್ನಡ ಚಿತ್ರೋದ್ಯಮದ ಒಳಿತಿಗಾಗಿ ಮತ್ತು ಡಿಸ್ತ್ರಿಬ್ಯೂಷನ್ ಹಕ್ಕು ಪಡೆದಿರುವ ಪ್ರಸಾದ್ ವೆಂಚರ್ ಗೆ ನಷ್ಟವಾಗಬಾರದೆಂದು. ಹಾಗಾದರೆ ಇಷ್ಟು ದಿನ ಮಾಧ್ಯಮದಲ್ಲಿ ಕಿತ್ತಾಡಿ, ಜನರಿಗೆ ಪುಕ್ಸಟೆ ಮನೋರಂಜನೆ ನೀಡಿದ್ದು ಯಾಕೆ? ಇಷ್ಟು ದಿನ ಚಿತ್ರೋದ್ಯಮದ ಒಳಿತಿನ ಬಗ್ಗೆ ಅವರಿಗೆ ಕಾಳಜಿ ಇರಲಿಲ್ಲವೇ?

  ರೆಹಮಾನ್ ಅವರ ಸಂಗೀತವಿದೆ ಎಂದು ಹೇಳಲಾಗುವ ಗಾಡ್ ಫಾದರ್ ಚಿತ್ರದ ಧ್ವನಿಸುರಳಿ ಬಿಡುಗಡೆನೇ ಇನ್ನೂ ನಡೆದಿಲ್ಲ, ಚಿತ್ರದ ಚಿತ್ರೀಕರಣ ಯಾವ ಹಂತದಲ್ಲಿ ಇದೆಯೋ ಅದೂ ತಿಳಿದಿಲ್ಲ, ಹಾಗಿದ್ದರೂ ಇನ್ನೊಂದು ಚಿತ್ರದ ಬಿಡುಗಡೆಗೆ ಅಡ್ಡಗಾಲು ಹಾಕುವುದು ಎಷ್ಟರ ಮಟ್ಟಿಗೆ ಸರಿ ಅನ್ನೋದಕ್ಕೆ ಮಂಜು ಅವರೇ ಉತ್ತರ ನೀಡಬೇಕು.

  ಚಿತ್ರಕ್ಕೆ ರೆಹಮಾನ್ ಸಂಗೀತ ನೀಡಿದ್ದಾರೆ, ಮೊದಲು ಅದ್ದೂರಿಯಾಗಿ ಧ್ವನಿಸುರುಳಿ ಬಿಡುಗಡೆ ಮಾಡೋಣ ಆಮೇಲೆ ಚಿತ್ರ ಬಿಡುಗಡೆ ಮಾಡೋಣ ಎನ್ನುವ ಪ್ರಸಾದ್ ಸಲಹೆಯನ್ನು ನಿರ್ಮಾಪಕರು ಈ ಹಿಂದೆ ಯಾಕೆ ಪಾಲಿಸಲಿಲ್ಲವೋ?

  ಗಾಂಧಿನಗರದ ಶ್ರೀ ಅಸಾಮಾನ್ಯ ಹೇಳುವ ಹಾಗೆ ಇದೆಲ್ಲಾ ಬರೀ ಪ್ರಚಾರಕ್ಕೆ. ಎಷ್ಟಾದರೂ ಮುನಿರತ್ನ ಮತ್ತು ಮಂಜು ಇಬ್ಬರೂ ಉತ್ತಮ ಸ್ನೇಹಿತರಲ್ಲವೇ.

  English summary
  Kannada movie producers K Mnaju and Muniratna are good friends. But, still they are fighting over the issue of their movie release dates. Dont you think this for free for all publicity? Lets watch which movie will be screened first. God Father or Katariveera Surasundarangi? ( KVSS)

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X