For Quick Alerts
  ALLOW NOTIFICATIONS  
  For Daily Alerts

  'ಮದಗಜ' ಚಿತ್ರದ ಟ್ರೈಲರ್‌ನಲ್ಲಿ ಅಡಗಿರುವುದೇನು?: ಇಲ್ಲಿದೆ ವಿವರ

  |

  ಕನ್ನಡದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ 'ಮದಗಜ' ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಟ್ರೈಲರ್ ರಿಲೀಸ್‌ ಆಗಿ ಕೆಲವೇ ಗಂಟೆಗಳಲ್ಲಿ ದಾಖಲೆ ಮಟ್ಟದ ವೀಕ್ಷಣೆ ಪಡೆದುಕೊಂಡಿದೆ. ನಟ ಶ್ರೀಮುರಳಿ ರೋರಿಂಗ್‌ ಅವತಾರ ರಿವೀಲ್‌ ಆಗಿದೆ.

  ಈಗಾಗಲೇ 'ಮದಗಜ' ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳು ಹುಟ್ಟಿಕೊಂಡಿದ್ದವು. ನಟ ಶ್ರೀಮುರಳಿ ಅವರ ಫಸ್ಟ್‌ ಲುಕ್ ಟೀಸರ್ ಬಂದಾಗಲೇ ಚಿತ್ರದ ಬಗ್ಗೆ ಎಲ್ಲಿಲ್ಲದ ನಿರೀಕ್ಷೆಗಳು ಹುಟ್ಟಿಕೊಂಡಿದ್ದವು. ಈಗ ಆ ನಿರೀಕ್ಷೆಗಳೆಲ್ಲಾ ದುಪ್ಪಟ್ಟು ಆಗಿವೆ.

  ಇದೀಗ ರಿಲೀಸ್ ಆಗಿರುವ ಚಿತ್ರದ ಟ್ರೈಲರ್ ಸಿನಿಮಾದ ಬಗ್ಗೆ ಮಹತ್ತರ ಸುಳಿವುಗಳನ್ನು ಬಿಟ್ಟು ಕೊಟ್ಟಿದೆ. ಸಿನಿಮಾದಲ್ಲಿ ಅಡಗಿರುವ ಅಂಶಗಳನ್ನು ಟ್ರೈಲರ್‌ನಲ್ಲಿ ಸೂಕ್ಷ್ಮವಾಗಿ ಕಟ್ಟಿ ಕೊಟ್ಟಿದೆ ಚಿತ್ರ ತಂಡ.

  ಯುದ್ಧದಲ್ಲಿ ಶಾಂತಿ ಬಯಸುವವ ಈ ಮದಗಜನಿಗೆ!

  ಯುದ್ಧದಲ್ಲಿ ಶಾಂತಿ ಬಯಸುವವ ಈ ಮದಗಜನಿಗೆ!

  ಮದಗಜ ಚಿತ್ರದ ಟ್ರೇಲರ್ ರಂಗಾಯಣ ರಘು ಧ್ವನಿಯಲ್ಲಿ ಆರಂಭ ಆಗುತ್ತದೆ. 28 ವರ್ಷಗಳಿಂದ ಬಳಿಕ ಏನನ್ನೋ ಕೇಳುತ್ತದೆ ಅವರ ಪಾತ್ರ. ಟ್ರೇಲರ್‌ನಲ್ಲಿ ಬರುವ ಈ ಡೈಲಾಗ್‌ ನಿರೀಕ್ಷೆಗೆ ಕಾರಣವಾಗಿದೆ. ಆ ತರಹದ ಎರಡು ಸಾಲಿನಲ್ಲಿ ಮದಗಜನ ಪಾತ್ರವನ್ನು ವರ್ಣಿಸಲಾಗಿದೆ.

  ಅವನಿಗೆ ಏನು ಇಷ್ಟ ಎನ್ನುವ ಪ್ರಶ್ನೆ ಉತ್ತರವಾಗಿ ಬರುತ್ತವೆ ಎರಡು ಡೈಲಾಗ್‌ಗಳು. " ಕ್ರೌರ್ಯದಲ್ಲಿ ಶಾಂತಿ ಇಷ್ಟ"," ದ್ವೇಷದಲ್ಲಿ ತಾಳ್ಮೆನೇ ಇಷ್ಟ " ಎನ್ನುವ ಈ ಎರಡು ಡೈಲಾಗ್‌ಗಳು ನಟ ಶ್ರೀಮುರಳಿಯ ಪಾತ್ರದ ಗಾಂಭೀರ್ಯತೆಯನ್ನು ಎತ್ತಿ ತೋರಿಸುತ್ತವೆ.

  ಮದಗಜ ಚಿತ್ರದಲ್ಲಿ ಅದ್ದೂರಿ ಆ್ಯಕ್ಷನ್‌!

  ಮದಗಜ ಚಿತ್ರದಲ್ಲಿ ಅದ್ದೂರಿ ಆ್ಯಕ್ಷನ್‌!

  ಇನ್ನೂ ಟ್ರೈಲರ್‌ನಲ್ಲಿ ಬರುವ "ಹುಲಿಯನ್ನು ಹೊಡೆಯಬೇಕು, ನರಿಯನ್ನು ಅಲ್ಲ". "ಊಟಕ್ಕೆ ಕೂತಾಗ ಎಲೆಗಳನ್ನು ಲೆಕ್ಕ ಹಾಕ ಬಾರದು, ಸಾವಿನಲ್ಲಿ ತಲೆಗಳನ್ನು ಲೆಕ್ಕ ಹಾಕಬಾರದು" ಎನ್ನುವ ಡೈಲಾಗ್‌ಗಳು ಚಿತ್ರದಲ್ಲಿ ಮಸ್ತ್ ಆ್ಯಕ್ಷನ್ ಇರಲಿದೆ ಎನ್ನುವುದನ್ನು ರಿವೀಲ್ ಮಾಡಿದೆ.

  ಜೊತೆಗೆ ನಟ ಶ್ರೀಮುರಳಿ ಫೈಟ್‌ ಯಾವ ರೇಂಜಿಗೆ ಇರಲಿದೆ ಎನ್ನುವುದು ಕೂಡ ರಿವೀಲ್‌ ಆಗಿದೆ. ಶ್ರೀಮುರಳಿಯ ಖದರ್ ಮತ್ತು ಸ್ಟೈಲ್ ಸಿನಿರಸಿಕರನ್ನು ಸೆಳೆಯುತ್ತದೆ.

  ಪ್ರತೀ ಪಾತ್ರವನ್ನು ಪರಿಚಯಿಸಿದ 'ಮದಗಜ' ಟ್ರೈಲರ್

  ಪ್ರತೀ ಪಾತ್ರವನ್ನು ಪರಿಚಯಿಸಿದ 'ಮದಗಜ' ಟ್ರೈಲರ್

  ಟ್ರೈಲರ್ ಮೂಲಕ ಚಿತ್ರದಲ್ಲಿರುವ ಹಲವು ಪಾತ್ರಗಳ ಸುಳಿವನ್ನು ಸಣ್ಣದಾಗಿ ಬಿಟ್ಟು ಕೊಟ್ಟಿದ್ದಾರೆ. ನಿರ್ದೇಶಕ ಮಹೇಶ್ ಕುಮಾರ್. ನಟ ಶ್ರೀಮುರಳಿ ನಟಿ, ಆಶಿಕಾ ರಂಗನಾಥ್, ರಂಗಾಯಣ ರಘು, ಜಗಪತಿಬಾಬು, ದೇವಯಾನಿ, ಶಿವರಾಜ್ ಕೆ.ಆರ್ ಪೇಟೆ ಸೇರಿದಂತೆ ನಾನಾ ಪಾತ್ರಗಳ ಬಗ್ಗೆ ಪರಿಚಯ ಮಾಡಿದೆ ಈ ಟ್ರೇಲರ್.

  ಪ್ರತೀ ಪಾತ್ರಕ್ಕೂ ಕೂಡ ಚಿತ್ರದಲ್ಲಿ ತನ್ನದೇ ಆದ ಪ್ರಾಮುಖ್ಯತೆ ಇದೆ ಎನ್ನುವುದನ್ನು ಟ್ರೈಲರ್ ನಲ್ಲಿ ಹೇಳಲಾಗಿದೆ. ಒಟ್ಟಾರೆ 'ಮದಜಗ' ಸಿನಿಮಾ ಒಂದು ಕಂಪ್ಲೀಟ್ ಪ್ಯಾಕೇಜ್ ಎನ್ನುವುದು ಗೊತ್ತಾಗುತ್ತದೆ. ಆಕ್ಷನ್ ಥ್ರಿಲ್ಲರ್, ಪ್ರೇಮ ಕಥೆ, ಕೌಟುಂಬಿಕ ಭಾವನೆ, ತಾಯಿ ಪ್ರೀತಿ ಎಲ್ಲವನ್ನೂ ಮದಗಜ ಸಿನಿಮಾ ಒಳಗೊಂಡಿದೆ.

  3 ಮಿಲಿಯನ್‌ಗೂ ಅಧಿಕ ವೀಕ್ಷಣೆ ಪಡೆದ ಮದಗಜ' ಚಿತ್ರದ ಟ್ರೈಲರ್

  3 ಮಿಲಿಯನ್‌ಗೂ ಅಧಿಕ ವೀಕ್ಷಣೆ ಪಡೆದ ಮದಗಜ' ಚಿತ್ರದ ಟ್ರೈಲರ್

  ಇನ್ನು 'ಮದಗಜ' ಚಿತ್ರದ ಟ್ರೈಲರ್‌ ರಿಲೀಸ್‌ ಆದ ಕೆಲವೇ ಗಂಟೆಗಳಲ್ಲಿ ಟ್ರೆಂಡಿಂಗ್‌ನಲ್ಲಿದೆ. ಯುಟ್ಯೂಬ್‌ ಟ್ರೆಂಡಿಂಗ್‌ನಲ್ಲಿ ಎರಡನೇ ಸ್ಥಾನಕ್ಕೆ ಏರಿ ದಾಖಲೆ ಮಾಡಿದೆ. ಜೊತೆಗೆ 3.4 ಮಿಲಿಯನ್ ವೀಕ್ಷಣೆ ಪಡೆದು ಕೊಂಡಿದೆ.

  ಈ ಚಿತ್ರ ಬಹುಕೋಟಿ ವೆಚ್ಚದಲ್ಲಿ ತಯಾರಾಗಿದ್ದು, ನಿರ್ಮಾಪಕ ಉಮಾಪತಿ ಬಂಡವಾಳ ಹೂಡಿದ್ದಾರೆ. ನಿರ್ದೇಶಕ ಮಹೇಶ್ ಕುಮಾರ್ ನಿರ್ದೇಶನದ ಎರಡನೇ ಸಿನಿಮಾ ಇದು. ಎರಡನೇ ಚಿತ್ರದ ಮೂಲಕವೇ ಮಹೇಶ್‌ ಕುಮಾರ್‌ ಸದ್ದು ಮಾಡುತ್ತಿದ್ದಾರೆ.

  English summary
  Sri Murali Starerr Kannada Movie Madhagaja Trailer Release

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X