For Quick Alerts
  ALLOW NOTIFICATIONS  
  For Daily Alerts

  'ಮಮ್ಮಿ-ಸೇವ್ ಮಿ' ಚಿತ್ರದ ರಿಲೀಸ್ ಡೇಟ್ ಕನ್ ಫರ್ಮ್

  By Bharath Kumar
  |

  ನಟಿ ಪ್ರಿಯಾಂಕ ಉಪೇಂದ್ರ ಅಭಿನಯದ 'ಮಮ್ಮಿ-ಸೇವ್ ಮಿ' ಚಿತ್ರದ ಬಿಡುಗಡೆಯ ದಿನಾಂಕ ಫಿಕ್ಸ್ ಆಗಿದೆ. ಟ್ರೈಲರ್ ನಿಂದಲೇ ಸಖತ್ ಥ್ರಿಲ್ಲಿಂಗ್ ಎನಿಸಿರುವ 'ಮಮ್ಮಿ' ಚಿತ್ರವನ್ನ ನೋಡುವುದಕ್ಕೆ ಪ್ರೇಕ್ಷಕರು ಕಾಯುತ್ತಿದ್ದರು. ಈಗ 'ಮಮ್ಮಿ' ಆಗಮನಕ್ಕೆ ಮುಹೂರ್ತ ನಿಗದಿಯಾಗಿದ್ದು, ಚಿತ್ರಪ್ರೇಮಿಗಳಲ್ಲಿದ್ದ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.[ಥ್ರಿಲ್ಲಿಂಗ್ ಆಗಿದೆ 'ಮಮ್ಮಿ-ಸೇವ್ ಮಿ' ಹೊಸ ಟ್ರೈಲರ್]

  ಹೌದು, ಇದೇ ಮೊದಲ ಬಾರಿಗೆ ಇಂತಾಹದ್ದೊಂದು ವಿಭಿನ್ನ ಪಾತ್ರದಲ್ಲಿ ಪ್ರಿಯಾಂಕ ಅಭಿನಯಿಸಿರುವ 'ಮಮ್ಮಿ-ಸೇವ್ ಮಿ' ಚಿತ್ರ, ಡಿಸೆಂಬರ್ 2 ರಂದು ಬಿಗ್ ಸ್ಕ್ರೀನ್ ಗೆ ಬರಲಿದೆ. ಇದನ್ನ ಸ್ವತಃ ಚಿತ್ರತಂಡವೇ ಖಚಿತಪಡಿಸಿದ್ದು, ನಟಿ ಪ್ರಿಯಾಂಕ ಉಪೇಂದ್ರ ಕೂಡ ಟ್ವಿಟ್ಟರ್ ನಲ್ಲಿ ವಿಡಿಯೋವೊಂದನ್ನ ಅಪಲೋಡ್ ಮಾಡಿ ಡೇಟ್ ಕನ್ ಫರ್ಮ್ ಮಾಡಿದ್ದಾರೆ.[ಇಲ್ಲಿದೆ ನೋಡಿ ಪ್ರಿಯಾಂಕ ಉಪೇಂದ್ರ ಅವರ ಟ್ವೀಟ್ ವಿಡಿಯೋ]

  Kannada Movie 'Mummy-save me' Releasing on December 2nd

  ಬಿಡುಗಡೆಗೂ ಮುಂಚೆ ಸೆನ್ಸೇಷ್ನಲ್ ಹುಟ್ಟುಹಾಕಿರುವ ಮಮ್ಮಿ, ಪರಭಾಷೆಯಲ್ಲೂ ಕಮಾಲ್ ಮಾಡಲಿದೆ. ಕನ್ನಡದ 'ಮಮ್ಮಿ' ತೆಲುಗಿನಲ್ಲಿ 'ಚಿನ್ನಾರಿ' ಎಂಬ ಶೀರ್ಷಿಕೆಯಡಿ ಬಿಡುಗಡೆಯಾಗಲಿದ್ದು, ತಮಿಳು ಹಾಗೂ ಹಿಂದಿಯಯಲ್ಲೂ ರಿಮೇಕ್ ಆಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

  ಅಂದ್ಹಾಗೆ, 'ಮಮ್ಮಿ-ಸೇವ್ ಮಿ' ನಾಯಕಿ ಪ್ರಧಾನ ಚಿತ್ರವಾಗಿದ್ದು, ವಿದೇಶದಲ್ಲಿ ನಡೆದ ಒಂದು ನೈಜಕಥೆಯನ್ನ ಆಧರಿಸಿದ ಸಿನಿಮಾ. ಚಿತ್ರದಲ್ಲಿ ನಟಿ ಪ್ರಿಯಾಂಕ ಉಪೇಂದ್ರ ಅವರು 7 ತಿಂಗಳ ಗರ್ಭಿಣಿ ಪಾತ್ರವನ್ನ ನಿರ್ವಹಿಸಿದ್ದಾರೆ. ಅವರ ಪಾತ್ರಕ್ಕೆ ಈಗಾಗಲೇ ಎಲ್ಲ ಕಡೆಯಿಂದ ಮೆಚ್ಚುಗೆ ಕೂಡ ವ್ಯಕ್ತವಾಗಿದೆ. ಇನ್ನೂ ಖ್ಯಾತ ಬಾಲನಟಿ ಯುವಿನಾ ಪಾರ್ಥವಿ ಕೂಡ ಚಿತ್ರದಲ್ಲಿ ಅಭಿನಯಿಸಿದ್ದು, ಪ್ರಿಯಾಂಕ ಉಪೇಂದ್ರ ಅವರ ಮಗಳ ಪಾತ್ರದಲ್ಲಿ ಯುವಿನಾ ಕಾಣಿಸಿಕೊಂಡಿದ್ದಾರೆ.[ಯುವ ನಿರ್ದೇಶಕನ ಪ್ರಯೋಗಕ್ಕೆ ಬೆಚ್ಚಿಬಿದ್ದ ಗಾಂಧಿನಗರ.!]

  ಯುವ ನಿರ್ದೇಶಕ ಲೋಹಿತ್ ಅವರು ಆಕ್ಷನ್-ಕಟ್ ಹೇಳಿದ್ದು, ಕೆ ರವಿಕುಮಾರ್ ಬಂಡವಾಳ ಹಾಕಿದ್ದಾರೆ. ಇನ್ನೂ ಅಜನೀಶ್ ಲೋಕನಾಥ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದು, ಈ ಚಿತ್ರಕ್ಕಾಗಿ ಅದ್ಬುತವಾದ ರೀ-ರೆಕಾರ್ಡಿಂಗ್ ಮಾಡಲಾಗಿದೆ.[ಹಾಲಿವುಡ್ ಶೈಲಿಯಲ್ಲಿ 'ಮಮ್ಮಿ'ಗೆ ರೀ-ರೆಕಾರ್ಡಿಂಗ್]

  English summary
  Kannada Movie 'Mummy Save Me' is releasing on December 2nd. The movie features Priyanka Upendra, Yuvina Parthavi and others. Directed by Lohith and produced by K Ravikumar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X