For Quick Alerts
  ALLOW NOTIFICATIONS  
  For Daily Alerts

  ಶುಕ್ರವಾರದಿಂದ ಹಾರರ್-ಥ್ರಿಲ್ಲರ್ 'ನಾನಿ' ಅಬ್ಬರ ಶುರು

  By ಹುಬ್ಬಳ್ಳಿ ಪ್ರತಿನಿಧಿ
  |

  ಜೂನ್ 29, 1997 ರಲ್ಲಿ ನಡೆದ ಪ್ರನಾಳ ಶಿಶುವಿನ ಘಟನೆ ಕುರಿತಾದ ನಿಜ ಘಟನೆಯಾಧರಿತ 'ನಾನಿ' ಚಿತ್ರ ಜುಲೈ 1, ಶುಕ್ರವಾರದಂದು ಇಡೀ ರಾಜ್ಯಾದ್ಯಂತ ತೆರೆಗೆ ಅಪ್ಪಳಿಸಲಿದೆ.

  ಗುಜರಾತ್ ರಾಜ್ಯದ ನೌಸಾರಿ ನಗರದಲ್ಲಿ ನಡೆದ ನೈಜ ಘಟನೆಯನ್ನಾಧರಿಸಿದ 'ನಾನಿ' ಎಂಬ ಹಾರರ್-ಥ್ರಿಲ್ಲರ್ ಚಿತ್ರಕ್ಕೆ ನಿರ್ದೇಶಕ ಸುಮಂತ್ ಆಕ್ಷನ್-ಕಟ್ ಹೇಳಿದ್ದಾರೆ.

  ತುಳಸಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ 'ನಾನಿ' ನಿರ್ದೇಶಕ ಸುಮಂತ್ ಅವರ ಚೊಚ್ಚಲ ನಿರ್ದೇಶನದ ಚಿತ್ರವಾಗಿದೆ. ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗುತ್ತಿರುವ 'ನಾನಿ' ಚಿತ್ರವು ರಾಜ್ಯದ 150, ಹಾಗೂ ಆಂಧ್ರ-ತೆಲಂಗಾಣದ ಸುಮಾರು 300 ಚಿತ್ರ ಮಂದಿರಗಳಲ್ಲಿ ಗ್ರ್ಯಾಂಡ್ ಆಗಿ ತೆರೆ ಕಾಣಲಿದೆ.

  ಚಿತ್ರದ ಹಿಂದಿ ಭಾಷೆಯ ಹಕ್ಕುಗಳನ್ನು 6 ತಿಂಗಳು ಮೊದಲೇ ನೀಡಲಾಗಿದೆ ಎಂದು ಚಿತ್ರದ ನಿರ್ಮಾಪಕ ರಮೇಶ್ ಕುಮಾರ್ ಜೈನ್ ಪತ್ರೀಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

  ಗುಜರಾತ್, ಮಂಗಳೂರು ಮತ್ತು ಬೆಂಗಳೂರು ನಗರಗಳಲ್ಲಿ ಚಿತ್ರದ ಚಿತ್ರೀಕರಣ ಮಾಡಲಾಗಿದ್ದು, ಜೈಜಗದೀಶ್ ಮತ್ತು ಬಹುಭಾಷಾ ನಟಿ ಸುಹಾಸಿನಿ ಅವರು 'ಬಂಧನ' ಚಿತ್ರದ ನಂತರ ಮತ್ತೆ ಒಂದಾಗಿದ್ದು, ಬಹಳ ನೈಜವಾಗಿ 'ನಾನಿ' ಚಿತ್ರದಲ್ಲಿ ನಟಿಸಿದ್ದಾರೆ.

  ಚಿತ್ರದಲ್ಲಿ 4 ಹಾಡುಗಳಿದ್ದು, ಎಂ.ಎನ್. ತ್ಯಾಗರಾಜ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಗುಂಡ್ಲುಪೇಟೆ ಸುರೇಶ್ ಅವರ ಛಾಯಾಗ್ರಹಣವಿದ್ದು, ಶಿವಂ ತಾಂತ್ರಿಕ ಟಚ್ ನೀಡಿದ್ದಾರೆ.

  ಇನ್ನುಳಿದಂತೆ ಚಿತ್ರದಲ್ಲಿ ನಟ ಮನೀಷ್ ಚಂದ್ರ ಮತ್ತು ನಟಿ ಪ್ರಿಯಾಂಕಾ ರಾವ್ ಅವರು ಮುಖ್ಯ ಭೂಮಿಕೆಯಲ್ಲಿ ಮಿಂಚಿದ್ದಾರೆ. 'ನಾನಿ' ಬಿಡುಗಡೆಗೆ ಮುನ್ನ ಚಿತ್ರದ ಟ್ರೈಲರ್ ಒಮ್ಮೆ ನೋಡಿ ಬಿಡಿ...

  English summary
  Kannada Movie 'Naani' all set to releasing on July 1st.Kannada Actor Manish Chandra, Actress Priyanka Rao, Actress Suhasini in the lead role. The movie is directed by Sumanth.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X