»   » ವಿಷ್ಣುದಾದ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಂದ ವಿಶೇಷ 'ಕೇಕ್'

ವಿಷ್ಣುದಾದ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಂದ ವಿಶೇಷ 'ಕೇಕ್'

Posted By:
Subscribe to Filmibeat Kannada

ಎಲ್ಲರ ಮೆಚ್ಚಿನ ನಟ ದಿವಂಗತ ಡಾ.ವಿಷ್ಣುವರ್ಧನ್ ಅವರು ಕಾಣಿಸಿಕೊಂಡಿರುವ, 201ನೇ 'ನಾಗರಹಾವು' ಚಿತ್ರದ ಅದ್ಧೂರಿ ಟ್ರೈಲರ್, ವಿಷ್ಣು ಅವರ ಹುಟ್ಟುಹಬ್ಬದ ದಿನದಂದು ತೆರೆ ಕಾಣಲಿದೆ.

ಸೆಪ್ಟೆಂಬರ್ 18, ಇದೇ ಭಾನುವಾರ ಅಭಿನಯ ಭಾರ್ಗವ ವಿಷ್ಣುವರ್ಧನ್ ಅವರ ಹುಟ್ಟುಹಬ್ಬದ ದಿನವಾಗಿದ್ದು, ಅಂದು 'ನಾಗರಹಾವು' ಚಿತ್ರದ ಟ್ರೈಲರ್ ಬಿಡುಗಡೆ ಆಗಲಿದೆ. ಜೊತೆಗೆ ಅಂದು ವಿಶೇಷವಾಗಿ, ಅಭಿಮಾನಿಗಳ ಸಮ್ಮುಖದಲ್ಲಿ ಸುಮಾರು ಒಂದು ಟನ್ ಕೆ.ಜಿ ತೂಗುವ 'ಕೇಕ್' ಕತ್ತರಿಸುವ ಯೋಜನೆಯನ್ನು ಕೂಡ ಚಿತ್ರತಂಡದವರು ಹಾಕಿಕೊಂಡಿದ್ದಾರೆ.[ಕಿಚ್ಚನನ್ನು ಹೊಗಳುವ ಭರಾಟೆಯಲ್ಲಿ ಲೆಜೆಂಡ್ ನಟರನ್ನು ಗೇಲಿ ಮಾಡಿದ ವರ್ಮಾ]


Kannada movie 'Nagarahavu' trailer release on september 18

ಸಾಹಸ ಸಿಂಹ ವಿಷ್ಣು ಅವರ ಅಭಿಮಾನಿ ಬಳಗದವರ ಜೊತೆ ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ವಿಷ್ಣು ಅವರ ಹುಟ್ಟುಹಬ್ಬವನ್ನು, ಹಬ್ಬದಂತೆ ಆಚರಿಸಲಿದ್ದು, ಈಗಾಗಲೇ ಒಂದು ಟನ್ ತೂಕದ ಕೇಕ್ ತಯಾರಾಗುತ್ತಿದೆ.


ಸೆಪ್ಟೆಂಬರ್ 18, ಭಾನುವಾರ ಸಂಜೆ 4 ಗಂಟೆಯಿಂದ ವಿಷ್ಣುದಾದ ಅವರ ಹುಟ್ಟುಹಬ್ಬದ ಸಂಭ್ರಮಾಚರಣೆ ಶುರುವಾಗಲಿದೆ. ವಿಶೇಷ ಕೇಕ್ ನಲ್ಲಿ ವಿಷ್ಣುದಾದಾ ಅವರ 'ನಾಗರಹಾವು' ಪೋಸ್ಟರ್ ಅನ್ನು ವಿನ್ಯಾಸ ಮಾಡಲಿದ್ದಾರೆ.['ನಾಗರಹಾವು' ಚಿತ್ರದಲ್ಲಿ ದರ್ಶನ್: ಎಕ್ಸ್ ಕ್ಲೂಸಿವ್ ಡೀಟೇಲ್ಸ್ ಇಲ್ಲಿದೆ]


Kannada movie 'Nagarahavu' trailer release on september 18

ಮಾತ್ರವಲ್ಲದೇ ಅಂದು ಮೈದಾನದಲ್ಲಿ ನೆರೆದಿರುವ, ವಿಷ್ಣು ಅವರ ಎಲ್ಲಾ ಅಭಿಮಾನಿಗಳಿಗೆ ಕೇಕ್ ಹಂಚಲಾಗುತ್ತದೆ. ಕೋಡಿ ರಾಮಕೃಷ್ಣ ಅವರು ನಿರ್ದೇಶನ ಮಾಡಿರುವ 'ನಾಗರಹಾವು' ಚಿತ್ರದಲ್ಲಿ ರಮ್ಯ ಮತ್ತು ದಿಗಂತ್ ಅವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.


ಈಗಾಗಲೇ ಹಲವು ಸಾಮಾಜಿಕ ಕಾರ್ಯಗಳಿಂದ, ಟೀಸರ್ ಮತ್ತು ಆಡಿಯೋಗಳಿಂದ, 'ನಾಗರಹಾವು' ಗಾಂಧಿನಗರದಲ್ಲಿ ಸಾಕಷ್ಟು ಸದ್ದು ಮಾಡುತ್ತಿದ್ದು, ಈ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿ ಮಾಡೋದು ಪಕ್ಕಾ.[ಬಿಂಕ ಬಿಟ್ಟು ಬಳುಕಿರುವ 'ನಾಗಿಣಿ' ರಮ್ಯಾ ವಿಡಿಯೋ-ಆಡಿಯೋ ಹಿಂಗಿದೆ..]


Kannada movie 'Nagarahavu' trailer release on september 18

ಇನ್ನು ನಟ ದರ್ಶನ್ ಅವರು ಈ ಚಿತ್ರದ ಟೈಟಲ್ ಹಾಡಿಗೆ ಹೆಜ್ಜೆ ಹಾಕಿದ್ದು, ಈ ಮೂಲಕ ವಿಷ್ಣು ಅವರಿಗೆ ಗೌರವ ಸಲ್ಲಿಸಿದ್ದಾರೆ. ಮಾತ್ರವಲ್ಲದೇ ನಿರ್ಮಾಪಕ ಸಾಜೀದ್ ಖುರೇಶಿ ಅವರು 'ನಾಗರಹಾವು' ತಂಡದ ವತಿಯಿಂದ ಕಾವೇರಿ ಗಲಭೆಯಲ್ಲಿ ಮೃತಪಟ್ಟ ಉಮೇಶ್ ಅವರ ಕುಟುಂಬಕ್ಕೆ 2 ಲಕ್ಷ ರೂಪಾಯಿ ಪರಿಹಾರ ನೀಡಿದ್ದಾರೆ.[ಮಾನವೀಯತೆ ಮೆರೆದ 'ನಾಗರಹಾವು' ನಿರ್ಮಾಪಕ ಸಾಜಿದ್ ಖುರೇಶಿ]


ಅಕ್ಟೋಬರ್ ತಿಂಗಳು ದಸರಾ ಹಬ್ಬದ ಸಂದರ್ಭದಲ್ಲಿ ಈ ಸಿನಿಮಾವನ್ನು ಬಿಡುಗಡೆ ಮಾಡಲು ನಿರ್ಮಾಪಕ ಸಾಜೀದ್ ಖುರೇಶಿ ಅವರು ಪ್ಲ್ಯಾನ್ ಮಾಡುತ್ತಿದ್ದಾರೆ.

English summary
Kannada movie 'Nagarahavu' trailer release on Dr Vishnuvardhan birthday on september 18th. Kannada Actress Ramya, Kannada Actor Diganth in the lead. The movie is directed by Kodi Ramakrishna.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada