»   » 'ನಾಗರಕಟ್ಟೆ'ಯಲ್ಲಿ ನಡೆದ ಕನ್ನಡ ನಟ ಅನೀಶ್ ಮದುವೆ.!

'ನಾಗರಕಟ್ಟೆ'ಯಲ್ಲಿ ನಡೆದ ಕನ್ನಡ ನಟ ಅನೀಶ್ ಮದುವೆ.!

Posted By:
Subscribe to Filmibeat Kannada

ಕನ್ನಡ ನಟ ಅನೀಶ್ ಹಾಗೂ ಕನ್ನಡ ನಟಿ ನಿಹಾರಿಕಾ ಅವರು ಮದುವೆಯಾಗಿರುವ ಫೋಟೋವೊಂದು ಈಗ ಬಹಿರಂಗವಾಗಿದ್ದು, ಎಲ್ಲೆಡೆ ಚರ್ಚೆಯಾಗುತ್ತಿದೆ.

ಫೋಟೋ ಯಾವುದು? ಯಾವ ಚಿತ್ರದ್ದು ಅಂತ ಕೆಲವರು ತಲೆಕೆಡಿಸಿಕೊಂಡಿದ್ರೆ, ಮತ್ತೆ ಕೆಲವರು ನಿಜವಾಗಲೂ ಮದುವೆ ಆಗ್ಬಿಟ್ರಾ ಅಂತ ಕನ್ ಫ್ಯೂಸ್ ಮಾಡ್ಕೊಂಡಿದ್ದಾರೆ.

'ಅಕಿರ' ಚಿತ್ರದ ಯಶಸ್ಸಿನ ನಂತರ ಹೊಸ ಚಿತ್ರಗಳಲ್ಲಿ ಬ್ಯುಸಿಯಾಗಿದ್ದ ಅನೀಶ್ ಈಗ, 'ನಾಗರಕಟ್ಟೆ'ಯಲ್ಲಿ ಮದುವೆ ಆಗಿದ್ದಾರೆ ಎಂಬ ವಿಷ್ಯ ಈಗ ಗಾಂಧಿನಗರದಲ್ಲಿ ಟಾಕ್ ಆಫ್ ದಿ ಟೌನ್ ಆಗಿದೆ.

ಈ ಮದುವೆ ಫೋಟೋ ಯಾವುದು?

ಕನ್ನಡ ನಟ ಅನೀಶ್ ಹಾಗೂ ಕನ್ನಡ ನಟಿ ನಿಹಾರಿಕಾ ಅವರು ಮದುವೆಯಾಗಿರುವ ಫೋಟೋವೊಂದು ಬಹಿರಂಗವಾಗಿದ್ದು, ಇದು ನಿಜನಾ ಎಂಬ ಚರ್ಚೆಗಳು ನಡೆಯುತ್ತಿದೆ. ಆದ್ರೆ, ಇದು ರಿಯಲ್ ಅಲ್ಲ, ರೀಲ್ ನಲ್ಲಿ ಅನ್ನೋದು ನಿಜಾ. ಹೌದು, ಇದು ಅನೀಶ್ ಹಾಗೂ ನಟಿ ನಿಹಾರಿಕಾ ಅಭಿನಯದ 'ನಾಗರಕಟ್ಟೆ' ಚಿತ್ರದ ದೃಶ್ಯ.

ಅನೀಶ್-ನಿಹಾರಿಕಾ ಅಭಿನಯದ ಚಿತ್ರ

'ನಾಗರಕಟ್ಟೆ', ಅನೀಶ್ ಹಾಗೂ ನಿಹಾರಿಕಾ ಅಭಿನಯದ ಚಿತ್ರ. ಈಗಾಗಲೇ ಚಿತ್ರೀಕರಣ ಮುಗಿಸಿರುವ 'ನಾಗರಕಟ್ಟೆ' ಪೋಸ್ಟ್ ಪ್ರೊಡಕ್ಷನ್ ನಲ್ಲಿ ಬ್ಯುಸಿಯಾಗಿದೆ.

ಶಂಕರ್ ನಾಗ್ ಅಭಿಮಾನಿ!

'ನಾಗರಕಟ್ಟೆ' ಚಿತ್ರದಲ್ಲಿ ಅನೀಶ್ 'ಕರಾಟೆಕಿಂಗ್ ಶಂಕರ್ ನಾಗ್' ಅವರ ಅಭಿಮಾನಿ. ಚಿತ್ರದಲ್ಲಿ ನಿರ್ದೇಶಕನ ಪಾತ್ರವನ್ನ ನಿರ್ವಹಿಸಿರುವ ಅನೀಶ್ ಸಾಮಾಜಿಕ ಕಾಳಿಜಿಯ ನಾಯಕನಾಗಿ ಕಾಣಿಸಿಕೊಂಡಿದ್ದರಂತೆ.

ಇಬ್ಬರು ನಾಯಕಿಯರು

ಅಂದ್ಹಾಗೆ ನಾಗರಕಟ್ಟೆ ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, ಇಡೀ ಸಿನಿಮಾ ನಾಯಕಿಯರು ಸುತ್ತ ನಡೆಯುತ್ತಂತೆ. ನಿಹಾರಿಕಾ ಹಾಗೂ ಶ್ರಾವ್ಯ ಇಬ್ಬರು ನಟಿಯರಿದ್ದು, ಮೊದಲಾರ್ಧದಲ್ಲಿ ನಿಹಾರಿಕಾ ಕಾಣಿಸಿಕೊಂಡ್ರೆ, ಎರಡನೇ ಭಾಗದಲ್ಲಿ ಶ್ರಾವ್ಯ ಬಣ್ಣ ಹಚ್ಚಿದ್ದಾರಂತೆ.

ಡಬ್ಬಿಂಗ್ ಕೆಲಸದಲ್ಲಿ ನಾಗರಕಟ್ಟೆ

ಈ ಹಿಂದೆ ‘18th ಕ್ರಾಸ್' ಚಿತ್ರವನ್ನ ನಿರ್ದೇಶನ ಮಾಡಿದ್ದ ಶಂಕರ್ ಈಗ 'ನಾಗರಕಟ್ಟೆ' ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ. ಇನ್ನೂ ಒಂದು ಹಾಡು ಮಾತ್ರ ಬಾಕಿಯಿದ್ದು ಡಬ್ಬಿಂಗ್ ಕಂಪ್ಲೀಟ್ ಆಗಿದೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ. ಉಳಿದಂತೆ ಚಿತ್ರದಲ್ಲಿ ದ್ವಾರಕೀಶ್, ಚಿಕ್ಕಣ್ಣ, ಶರತ್ ಲೋಹಿತಾಶ್ವ ಸೇರಿದಂತೆ ಹಲವರು ಚಿತ್ರದಲ್ಲಿ ಅಭಿನಯಿಸಿದ್ದಾರೆ.

English summary
Kannada Actor Anish starrer Kannada Movier Nagarakatte shooting complete. the Movie Directed by shanker.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X