»   » ಕೇವಲ 11 ಗಂಟೆಯಲ್ಲಿ ನಿರ್ಮಾಣವಾಗಲಿರುವ ಸಿನಿಮಾ

ಕೇವಲ 11 ಗಂಟೆಯಲ್ಲಿ ನಿರ್ಮಾಣವಾಗಲಿರುವ ಸಿನಿಮಾ

Posted By:
Subscribe to Filmibeat Kannada

ಇದುವರೆಗೂ ಒನ್ ಟೇಕ್ ಸಿನಿಮಾ, ಒನ್ ಡೇಯಲ್ಲಿ ನಿರ್ಮಾಣಗೊಂಡ ಸಿನಿಮಾ, ಒನ್ ಶಾಟ್ ಸಿನಿಮಾಗಳೆಲ್ಲಾ ಕನ್ನಡ ಚಿತ್ರರಂಗದಲ್ಲಿ ನಿರ್ಮಾಣಗೊಂಡಿವೆ. ಆದರೆ ಇಲ್ಲೊಂದು ಚಿತ್ರ ಹನ್ನೊಂದು ಗಂಟೆಯ ಅವಧಿಯಲ್ಲಿ ನಿರ್ಮಾಣಗೊಂಡು ದಾಖಲೆ ಬರೆಯಲು ಹೊರಟಿದೆ.

ಫೆಬ್ರವರಿ 6ರಂದು ತಯಾರಾಗಲಿರುವ ಈ ಚಿತ್ರದ ಹೆಸರು 'ಓ ಸ್ನೇಹವೇ'. ಹನ್ನೊಂದು ಗಂಟೆಗಳ ಅವಧಿಯಲ್ಲಿ ನಿರ್ಮಾಣಗೊಳ್ಳಬೇಕಾದ್ದರಿಂದ ಈ ಚಿತ್ರದ ತಯಾರಿಯ ಪೂರ್ವಸಿದ್ಧತೆ ಜೋರಾಗಿಯೇ ನಡೆಯುತ್ತಿದೆ.

'ಏಂಜಲ್ ಸಿನಿಮಾ' ಸಂಸ್ಥೆಯ ಅಡಿಯಲ್ಲಿ, ನಿರ್ಮಾಪಕ ಬಿ. ಕುಮಾರಸ್ವಾಮಿ ಅವರು ನಿರ್ಮಿಸುತ್ತಿರುವ 'ಓ ಸ್ನೇಹವೇ' ಚಿತ್ರ ಮೈಸೂರಿನ ಮೂರು ಸ್ಥಳಗಳಲ್ಲಿ ಮೂರು ಕ್ಯಾಮರಾಗಳಲ್ಲಿ ಚಿತ್ರೀಕರಣಗೊಳ್ಳಲಿದೆ.

Kannada movie 'O Snehave' to make in 11 hours

"ಎಲ್ಲ ಧರ್ಮಕ್ಕಿಂತ ಮಾನವ ಧರ್ಮ ಶ್ರೇಷ್ಠ" ಎನ್ನುವ ಮೂಲ ಧ್ಯೇಯವನ್ನಿಟ್ಟುಕೊಂಡು ತಯಾರಾಗುತ್ತಿರುವ ಚಿತ್ರ 'ಓ ಸ್ನೇಹವೇ'. ಸ್ನೇಹಕ್ಕೆ ಯಾವ ಜಾತಿಯೂ ಇಲ್ಲ, ಮೇಲು, ಕೀಳಾಗಲಿ, ಭೇದ-ಭಾವಗಳಾಗಲಿ ಇರುವುದಿಲ್ಲ ಎಂಬ ಅಂಶ ಕಥೆಯಲ್ಲಿ ಪ್ರಧಾನವಾಗಿದೆಯಂತೆ.

ಈ ಚಿತ್ರದಲ್ಲಿ ಸ್ನೇಹಿತರ ತಂಡವೊಂದು ಸಮಸ್ಯೆಯಲ್ಲಿ ಸಿಲುಕಿಕೊಂಡು ನಂತರ ಆ ತಂಡ ಅದರಿಂದ ಹೇಗೆ ಹೊರಬರುತ್ತದೆ ಎಂಬ ಥ್ರಿಲ್ಲಿಂಗ್ ಚಿತ್ರಕಥಾವಸ್ತುವಿದೆಯಂತೆ. 'ಓ ಸ್ನೇಹವೇ' ಚಿತ್ರದ ರಚನೆ ಹಾಗೂ ನಿರ್ದೇಶನ ವಿಜಯ್ ಅವರದು. ವಿನು ಮನಸು ಚಿತ್ರದ ಸಂಗೀತ ನಿರ್ದೇಶಕರು.

ಛಾಯಾಗ್ರಾಹಕ ಶ್ಯಾಮ್ ಅವರು ಸಹಾಯಕರೊಂದಿಗೆ ಮೂರು ಕ್ಯಾಮರಗಳಲ್ಲಿ ಕೈಚಳಕ ತೋರಿಸಲಿದ್ದಾರೆ. 'ಓ ಸ್ನೇಹವೇ' ಚಿತ್ರವನ್ನು 11 ಗಂಟೆಯ ಅವಧಿಯಲ್ಲಿ ನಿರ್ಮಾಣ ಮಾಡುವ ಉದ್ದೇಶದಿಂದ 15 ದಿವಸಗಳ ಕಾರ್ಯಗಾರ ನಡೆಸಲಾಗಿದೆ. ಮುಖ್ಯ ಪಾತ್ರಗಳಲ್ಲಿ ನವೀನ್, ಸ್ಮೈಲ್ ಶಿವು, ಡಾನಿಷ್, ಭಾರತಿ, ಜಾಹ್ನವಿ, ಸಾವಿತ್ರಿ, ಪ್ರತಿಭ, ಡಾಕ್ಟರ್ ಗೀತಾ, ಪ್ರೇಮ ಗೌಡ ಅವರು ಇದ್ದಾರೆ. (ಫಿಲ್ಮಿಬೀಟ್ ಕನ್ನಡ)

English summary
Kannada movie 'O Snehave' planned to make in 11 hours. The movie is by freshers produced by B Kumaraswamy and directed by Vijay. The movie to be shot with three camers of three different locations in Mysuru.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada