»   » ಗಣರಾಜ್ಯೋತ್ಸವ ದಿನದ ವಿಶೇಷ 'ಪ್ರೇಮಬರಹ' ಟ್ರೈಲರ್ ಬಂತು

ಗಣರಾಜ್ಯೋತ್ಸವ ದಿನದ ವಿಶೇಷ 'ಪ್ರೇಮಬರಹ' ಟ್ರೈಲರ್ ಬಂತು

Posted By:
Subscribe to Filmibeat Kannada

ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಮಗಳು ಮೊಟ್ಟ ಮೊದಲ ಬಾರಿಗೆ ಕನ್ನಡದಲ್ಲಿ ಅಭಿನಯಿಸಿರುವ 'ಪ್ರೇಮ ಬರಹ' ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ಈ ಮೊದಲೇ ತಿಳಿಸಿದಂತೆ ಗಣರಾಜ್ಯೋತ್ಸವದ ದಿನ ಟ್ರೈಲರ್ ಬಿಡುಗಡೆಯಾಗಿದೆ.

ಫೆಬ್ರವರಿ 9 ರಂದು 'ಪ್ರೇಮ ಬರಹ' ರಾಜ್ಯಾದ್ಯಂತ ತೆರೆಕಾಣುತ್ತಿದೆ. ಇಷ್ಟು ದಿನ ಟಿಸರ್ ಹಾಗೂ ಹಾಡುಗಳ ಮೂಲಕ ಗಮನ ಸೆಳೆದಿದ್ದ ಸಿನಿಮಾ ಈಗ ಟ್ರೈಲರ್ ರಿಲೀಸ್ ಮಾಡಿ ಮತ್ತಷ್ಟು ಮೋಡಿ ಮಾಡಿದೆ.

ಪ್ರೇಮ ಬರಹ ಟೈಟಲ್ ಹೇಳುವಾಗೆ, ಇದೊಂದು ಲವ್ ಸ್ಟೋರಿ ಸಿನಿಮಾವಾಗಿದ್ದು, ಲವ್, ಸೆಂಟಿಮೆಂಟ್, ಆಕ್ಷನ್, ಥ್ರಿಲ್ಲಿಂಗ್, ಕಾಮಿಡಿ, ಸರ್ಪ್ರೈಸ್ ಎಲ್ಲವೂ ಚಿತ್ರದಲ್ಲಿದೆ ಎಂಬುದಕ್ಕೆ ಈ ಟ್ರೈಲರ್ ಸಾಕ್ಷಿ.

ಅರ್ಜುನ್ ಸರ್ಜಾ ಮಗಳ 'ಪ್ರೇಮಬರಹ' ಮುಕ್ತಾಯ

Kannada movie prema baraha trailer release

ಐಶ್ವರ್ಯ ಸರ್ಜಾಗೆ ಚಂದನ್ ನಾಯಕನಾಗಿದ್ದು, ಸುಹಾಸಿನಿ, ಪ್ರಕಾಶ್ ರೈ, ಸಾಧುಕೋಕಿಲಾ, ಅರ್ಜುನ್ ಸರ್ಜಾ, ರಂಗಾಯಣ ರಘು, ಮಂಡ್ಯ ರಮೇಶ್, ಕುರಿ ಪ್ರತಾಪ್ ಸೇರಿದಂತೆ ಹಲವರು ಅಭಿನಯಿಸಿದ್ದಾರೆ.

ಸರ್ಜಾ ಕುಟುಂಬದ ಜೊತೆ 'ಚಾಲೆಂಜಿಂಗ್ ಸ್ಟಾರ್ ದರ್ಶನ್' ಹಾಕಿದ್ರು ಹೆಜ್ಜೆ.!

Kannada movie prema baraha trailer release

ಇನ್ನು ಚಿತ್ರದ ವಿಶೇಷ ಹಾಡಿನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ಚಿರಂಜೀವಿ ಸರ್ಜಾ, ಧ್ರುವ ಸರ್ಜಾ ಕೂಡ ಹೆಜ್ಜೆಹಾಕಿದ್ದಾರೆ. ಇನ್ನುಳಿದಂತೆ ಕಥೆ, ಚಿತ್ರಕಥೆ, ನಿರ್ದೇಶನ ಹಾಗೂ ನಿರ್ಮಾಣ ಅರ್ಜುನ್ ಸರ್ಜಾ ಅವರೇ ನಿರ್ವಹಿಸಿದ್ದಾರೆ. ಜೆಸ್ಸಿಗಿಫ್ಟ್ ಸಂಗೀತ ನೀಡಿದ್ದಾರೆ.

English summary
Action King arjun sarja daughter aishwarya sarja and chandan starrer Kannada movie prema baraha trailer released. the movie directed by arjun sarja.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada