For Quick Alerts
  ALLOW NOTIFICATIONS  
  For Daily Alerts

  ಕನ್ನಡ ಚಿತ್ರ ನಿರ್ಮಾಪಕ ಎಸ್ ನಾಗರಾಜ ಶೆಟ್ಟಿ ನಿಧನ

  |

  ನಟ ಅಂಬರೀಶ್ ಕಳೆದ ವಾರ ವಿಧಿವಶರಾಗಿದ್ದರು. ಆ ನೋವು ಮರೆಯುವ ಮುನ್ನವೇ ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ನಿಧನದ ವಾರ್ತೆ ಬಂದಿದೆ.

  ಖ್ಯಾತ ನಿರ್ಮಾಪಕ, ವಿತರಕ ಎಸ್ ನಾಗರಾಜ ಶೆಟ್ಟಿ ಇಂದು ದೈವಾಧೀನರಾಗಿದ್ದಾರೆ. ಮೂಲತಃ ಚಿಕ್ಕಮಗಳೂರಿನವರಾಗಿದ್ದ ಎಸ್ ನಾಗರಾಜ ಶೆಟ್ಟಿ ಕನ್ನಡದಲ್ಲಿ ಸಾಕಷ್ಟು ಒಳ್ಳೆಯ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು.

  ನಾಡಿನ ಸಮಸ್ತ ಜನತೆಗೆ ಪತ್ರದ ಮೂಲಕ ಧನ್ಯವಾದ ತಿಳಿಸಿದ ಸುಮಲತಾ-ಅಭಿ

  'ಪರಾಜಿತ', 'ನಾಗರಹೊಳೆ', 'ನೂರುಜನ್ಮ', 'ಕೂಡಿಬಾಳಿದರೆ ಸ್ವರ್ಗಸುಖ' ಹಾಗೂ 'ಶ್ರಾವಣ ಸಂಜೆ' ಚಿತ್ರಗಳಿಗೆ ಎಸ್ ನಾಗರಾಜ ಶೆಟ್ಟಿ ಬಂಡವಾಳ ಹಾಕಿದ್ದರು. ಅಷ್ಟೇ ಅಲ್ಲದೆ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷರಾಗಿಯು ಕೆಲಸ ಮಾಡಿದ್ದರು.

  ನಿರ್ಮಾಪಕ, ಪ್ರದರ್ಶಕ ಹಾಗೂ ವಿತರಕ ಮೂರು ವಿಭಾಗದಲ್ಲಿ ಗುರುತಿಸಿಕೊಂಡಿದ್ದ ಇವರು ಇಂದು ತಮ್ಮ ಏಳು ಜನ ಮಕ್ಕಳನ್ನು ಅಗಲಿದ್ದಾರೆ. ಕನ್ನಡ ಚಿತ್ರರಂಗ ಇವರ ನಿಧನಕ್ಕೆ ಸಂತಾಪ ಸೂಚಿಸಿದೆ.

  English summary
  Kannada movie producer and Karnataka Film Chamber Of Commerce ex president S Nagaraj Shetty passes away today (December 2nd).

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X