For Quick Alerts
  ALLOW NOTIFICATIONS  
  For Daily Alerts

  ಲಾಕ್‌ಡೌನ್ ಆದ ಬಳಿಕ ಮೊದಲ ಕನ್ನಡ ಸಿನಿಮಾ ನೇರವಾಗಿ ರಿಲೀಸ್

  |

  ಚಿತ್ರಮಂದಿರಗಳು ತೆರೆಯಲು ಕೇಂದ್ರ ಸರ್ಕಾರ ಅನುಮತಿ ಏನೋ ಕೊಟ್ಟಿದೆ. ಆದರೆ, ಥಿಯೇಟರ್‌ಗೆ ಪ್ರೇಕ್ಷಕರು ಬರಲು ಧೈರ್ಯ ಮಾಡಿಲ್ಲ. ಹಾಗಾಗಿ, ಯಾವುದೇ ಹೊಸ ಸಿನಿಮಾ ಇದುವರೆಗೂ ಬಿಡುಗಡೆ ದಿನಾಂಕ ಘೋಷಣೆ ಮಾಡಿಲ್ಲ.

  ಈ ವಾರ ಏಳು ಹಳೆಯ ಚಿತ್ರಗಳು ರಿ-ರಿಲೀಸ್ ಆಗಿದೆ. ಶಿವಾಜಿ ಸೂರತ್ಕಲ್, ಮಾಯಾಬಜಾರ್, ಕಾಣದಂತೆ ಮಾಯವಾದನು, 3ರ್ಡ್ ಕ್ಲಾಸ್, ಲವ್ ಮಾಕ್ಟೈಲ್, ಶಿವಾರ್ಜುನ, 5 ಅಡಿ 7 ಅಂಗುಲ ಸಿನಿಮಾಗಳು ಮರು ಬಿಡುಗಡೆಯಾಗಿದೆ.

  ಚಿತ್ರಮಂದಿರಗಳು ಓಪನ್: ಮಾರ್ಗಸೂಚಿ ಪ್ರಕಟಿಸಿದ ರಾಜ್ಯ ಸರ್ಕಾರ

  ಮುಂದಿನ ವಾರವೂ ಒಂದಿಷ್ಟು ಚಿತ್ರಗಳು ರಿ-ರಿಲೀಸ್ ಆಗುತ್ತಿದೆ. ಬಹುಶಃ ಇನ್ನು ಕೆಲವು ವಾರಗಳು ಹೊಸ ಸಿನಿಮಾಗಳು ಚಿತ್ರಮಂದಿರಕ್ಕೆ ಬರುವುದು ಅನುಮಾನ ಎನ್ನುವ ಸಮಯದಲ್ಲೇ ಇಲ್ಲೊಂದು ಚಿತ್ರ ನೇರವಾಗಿ ಥಿಯೇಟರ್‌ಗೆ ಬರೋಕೆ ಸಜ್ಜಾಗಿದೆ.

  ಹೌದು, ಅಕ್ಟೋಬರ್ 23ಕ್ಕೆ 'ಪುರುಸೋತ್ ರಾಮ' ಸಿನಿಮಾ ರಾಜ್ಯದಾದ್ಯಂತ ಬಿಡುಗಡೆಯಾಗುತ್ತಿದೆ. ಲಾಕ್‌ಡೌನ್ ಆದ್ಮೇಲೆ ನೇರವಾಗಿ ಚಿತ್ರಮಂದಿರಕ್ಕೆ ಬರುತ್ತಿರುವ ಮೊದಲ ಸಿನಿಮಾ ಇದಾಗಲಿದೆ.

  6 ತಿಂಗಳ ನಂತರ ತೆರೆದ ಚಿತ್ರ ಮಂದಿರ | Filmibeat Kannada

  ರವಿಶಂಕರ್ ಗೌಡ, ಕುರಿಪ್ರತಾಪ್ ಹಾಗೂ ಕಾಮಿಡಿ ಕಿಲಾಡಿ ಶಿವರಾಜ್ ಕೆಆರ್ ಪೇಟೆ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರವನ್ನು ರಿತಿಕ್ ಸರು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ನಿರ್ಮಾಪಕಿ ಮಾನಸ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

  English summary
  Kannada movie Pursothrama will release on october 23rd. After Lockdown, this is the first kannada new film getting released in theaters.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X