»   » ನ್ಯೂಜೆರ್ಸಿ ಯಲ್ಲಿ ನಿರ್ದೇಶಕ ಅನೂಪ್ ಖುಷಿ ಮಾತುಗಳು

ನ್ಯೂಜೆರ್ಸಿ ಯಲ್ಲಿ ನಿರ್ದೇಶಕ ಅನೂಪ್ ಖುಷಿ ಮಾತುಗಳು

Posted By:
Subscribe to Filmibeat Kannada

ಚಂದನವನದಲ್ಲಿ ಸಂಚಲನ ಸೃಷ್ಟಿಸಿದ ಹೊಸಬರ ಚಿತ್ರ 'ರಂಗಿತರಂಗ' ಭರ್ಜರಿ 50 ದಿನಗಳನ್ನು ಪೂರೈಸಿ ಇದೀಗ 100ನೇ ದಿನಗಳತ್ತ ಮುನ್ನುಗ್ಗುತ್ತಿದೆ.

ಅಂದಹಾಗೆ ಈ 'ರಂಗಿತರಂಗ' ಚಿತ್ರದ 50ರ ಸಂಭ್ರಮವನ್ನು ಭಂಡಾರಿ ಸಹೋದರರು ಅಮೇರಿಕದಲ್ಲಿ ಟೂರ್ ಹೊಡೆಯುತ್ತಿದ್ದು, ನ್ಯೂಜೆರ್ಸಿಯಲ್ಲಿ ಆಚರಿಸಿಕೊಂಡಿದ್ದಾರೆ. ಜೊತೆಗೆ ವಿದೇಶದಲ್ಲೂ ಚಿತ್ರದ ಬಗ್ಗೆ ಅಭಿಮಾನಿಗಳು ಭಾರಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Kannada movie 'RangiTaranga' 50 days Celebrations in New Jersey

ಎಲ್ಲಾ ಹೊಸಬರೇ ಸೇರಿಕೊಂಡು ಮಾಡಿದ್ದ ಚಿತ್ರ ಈ ವರ್ಷ ಬಾಕ್ಸಾಫೀಸ್ ನಲ್ಲಿ ಸೂಪರ್ ಡೂಪರ್ ಹಿಟ್ ಕಂಡಿದೆ. ಅಂತೂ ಚಂದನವನದಲ್ಲಿ ಈ ವರ್ಷ ಹೊಸಬರು ಸಖತ್ ಕಮಾಲ್ ಮಾಡಿದ್ದಾರೆ.[ಅಂಕಲ್ ಸ್ಯಾಮ್ ಅಂಗಳದಲ್ಲಿ ರಂಗಿತರಂಗ 50 ದಿನದ ಸಂಭ್ರಮ!]

ಇನ್ನೂ 'ರಂಗಿತರಂಗ'ದ ನಿರ್ದೇಶಕ ಅನುಪ್ ಭಂಡಾರಿ ಹಾಗೂ ನಾಯಕ ನಿರುಪ್ ಭಂಡಾರಿ ಅವರು ನ್ಯೂ ಜೆರ್ಸಿಯಲ್ಲಿ (ಆಗಸ್ಟ್ 22) ರಂದು ಚಿತ್ರದ 50 ದಿನಗಳ ಸಂಭ್ರಮವನ್ನು ಆಚರಿಸಿದ ವಿಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ..

'ಸಿನಿಮಾ ಯುನಿಟ್' ನ್ಯೂ ಜೆರ್ಸಿಯಲ್ಲಿ ಜರುಗಿದ ಈ ಸಂಭ್ರಮದ ಕಾರ್ಯಕ್ರಮದಲ್ಲಿ ಭಂಡಾರಿ ಸಹೋದರರು ಹಾಗೂ ಅವರ ಕುಟುಂಬದವರು ಭಾಗವಹಿಸಿದ್ದರು.

ಇನ್ನೂ ಕರ್ನಾಟಕದಲ್ಲಿ ಮಾತ್ರವಲ್ಲದೇ ವಿದೇಶದಲ್ಲೂ 'ರಂಗಿತರಂಗ' ಹಿಟ್ ಆಗಲು ಕಾರಣರಾದ ಪ್ರೇಕ್ಷಕರಿಗೆ ಹಾಗೂ ಅಭಿಮಾನಿಗಳಿಗೆ ಇಡೀ ಚಿತ್ರತಂಡದ ಪರವಾಗಿ ಭಂಡಾರಿ ಸಹೋದರರು ಅಭಿನಂದನೆ ಸಲ್ಲಿಸಿದರು.[ಸೂರ್ಯ ಉದಯಿಸುವ ನಾಡಲ್ಲಿ ರಂಗಿತರಂಗ ಸಂಚಲನ]

ವಿಶೇಷವಾಗಿ ವಿದೇಶದಲ್ಲೂ ಭಾರಿ ಅಭಿಮಾನಿ ವರ್ಗದವರನ್ನು ಹೊಂದಿರುವ ಭಂಡಾರಿ ಸಹೋದರರು ಅಲ್ಲಿಯ ಜನರು ಮುಗಿಬಿದ್ದು ತೋರಿಸಿದ ಪ್ರೀತಿ, ಆದರಾಭಿಮಾನಗಳಿಗೆ ಮೂಕ ವಿಸ್ಮಿತರಾದರು.

ಅನುಪ್ ಭಂಡಾರಿ ನಿರ್ದೇಶನದ ಸಸ್ಪೆನ್ಸ್ ಥ್ರಿಲ್ಲರ್ ಕಥೆಯನ್ನಾಧರಿಸಿದ 'ರಂಗಿತರಂಗ' ಯಾವ ಕ್ಷಣದಲ್ಲಿ ಏನಾಗುತ್ತೋ ಅಂತ ಪ್ರೇಕ್ಷಕರು ಉಸಿರು ಬಿಗಿ ಹಿಡಿದು ನೋಡುವಂತೆ ಮಾಡಿತ್ತು. ಆದ್ದರಿಂದ ಈಗಲೂ ಅಮೇರಿಕಾದ ಪ್ರತಿ ಥಿಯೇಟರ್ ನಲ್ಲೂ ಕೂಡ ಹೌಸ್ ಫುಲ್ ಪ್ರದರ್ಶನ ಕಾಣುವ ಮೂಲಕ ಭರ್ಜರಿ ಕಲೆಕ್ಷನ್ ಮಾಡುತ್ತಿದೆ.[ರಂಗಿತರಂಗ ಅಮೆರಿಕದಲ್ಲಿ ಕೋಟಿಗಟ್ಟಲೇ ಗಳಿಕೆ]

Kannada movie 'RangiTaranga' 50 days Celebrations in New Jersey

ಮಾತ್ರವಲ್ಲದೇ ಕೆಲವು ಎನ್ ಆರ್ ಐ ಕನ್ನಡಿಗರು ನಮ್ಮ ಕಲರ್ ಪುಲ್ 'ರಂಗಿ' ಚಿತ್ರವನ್ನು ಮೂರು ಮೂರು ಬಾರಿ ನೋಡಿ ಆನಂದಿಸಿದ್ದಾರೆ ಅಂದ್ರೆ ಈ ಚಿತ್ರದ ಮೇಕಿಂಗ್ ಹಾಗೂ ಪ್ರೇಕ್ಷಕರನ್ನು ಚಿತ್ರ ಯಾವ ರೀತಿ ಎಂಗೇಜ್ ಮಾಡಿರಬಹುದು ಅಂತ ಊಹಿಸಬಹುದು. [ರಂಗಿತರಂಗ-ಟ್ವಿಟ್ಟರ್ ಲೋಕದಲ್ಲಿ ಮಿಶ್ರ ರಂಗು]

"ಸ್ಯಾಂಡಲ್ ವುಡ್ ಕ್ಷೇತ್ರದಲ್ಲಿ ಈ ವರ್ಷದ ಹಿಟ್ ಚಿತ್ರ ಹಾಗೂ ವಿಶ್ವದ ನಂ 1 ಚಿತ್ರ 'ರಂಗಿತರಂಗ' ವಿದೇಶದಲ್ಲಿ ಬಿಡುಗಡೆಯಾದ ಕೇವಲ ಒಂದೇ ವಾರಕ್ಕೆ ಸುಮಾರು ಒಂದೂವರೆ ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಇನ್ನೂ ಮುಂಬರುವ ಕನ್ನಡ ಚಿತ್ರಗಳಿಗೆ ಒಂಥರಾ ಪ್ರೋತ್ಸಾಹ ನೀಡುವಂತೆ ಮಾಡಿದೆ.

ಜೊತೆಗೆ ಈಗಾಗಲೇ ಜನ ಇಷ್ಟರಮಟ್ಟಿಗೆ ಕನ್ನಡ ಚಿತ್ರಗಳನ್ನು ಇಷ್ಟ ಪಡುತ್ತಾರೆ ಅಂದ್ರೆ ಇನ್ನೂ ಮುಂದಕ್ಕೆ ಕನ್ನಡ ಚಿತ್ರಗಳನ್ನು ಮಾಡುವ ನಿರ್ದೇಶಕರಿಗೆ ಈ ಬೆಳವಣಿಗೆ ಉತ್ತಮ ನಿದರ್ಶನವಾಗಬಹುದು ಯಾಕೆಂದರೆ ವಿಭಿನ್ನ ಕಥೆಯ ಜೊತೆಗೆ ಜನರ ಭಾವನೆಗಳಿಗೆ ಹತ್ತಿರವಾಗುವಂತೆ ಚಿತ್ರ ಮಾಡಿದರೆ ಇಷ್ಟ ಪಟ್ಟೆ ಪಡ್ತಾರೆ' ಅಂತ 'ರಂಗಿಯ' ಯಶಸ್ಸಿನ ಬಗ್ಗೆ ನಿರ್ದೇಶಕ ಅನುಪ್ ಭಂಡಾರಿ ಅವರು ತಮ್ಮ ಅಭಿಪ್ರಾಯದ ಮೂಲಕ ಹರ್ಷ ವ್ಯಕ್ತಪಡಿಸುತ್ತಾರೆ.

ಇನ್ನೂ ಚಿತ್ರದ ನಾಯಕ ನಿರುಪ್ ಭಂಡಾರಿ ಅವರು "ರಂಗಿತರಂಗ' ಬರೀ ಕರ್ನಾಟಕದಲ್ಲಿ ಮಾತ್ರವಲ್ಲದೇ ವಿದೇಶದಲ್ಲೂ ಉತ್ತಮ ರೆಸ್ಪಾನ್ಸ್ ಗಳಿಸುತ್ತಿರುವುದನ್ನು ಕಂಡು ಬಹಳ ಖುಷಿಯಾಗುತ್ತಿದೆ, ಕನ್ನಡ ಚಿತ್ರರಂಗದ ಇತಿಹಾಸದಲ್ಲಿಯೇ ಇದೇ ಮೊಟ್ಟ ಮೊದಲ ಬಾರಿಗೆ ಕನ್ನಡ ಚಿತ್ರವೊಂದು ವಿದೇಶದಲ್ಲಿ 40 ಕೇಂದ್ರಗಳಲ್ಲಿ ಒಂದೇ ವಾರಕ್ಕೆ ಬಿಡುಗಡೆಯಾಗಿ ಯಶಸ್ವಿಯಾಗಿರೋದು ಖುಷಿ ತಂದಿದೆ.

ಈಗಾಗಲೇ ವಿದೇಶದಲ್ಲಿ ಬಿಡುಗಡೆಯಾದ ಎಲ್ಲಾ ಚಿತ್ರಮಂದಿರಗಳಿಗೆ ಭೇಟಿ ಮಾಡಿದ್ದೆವು ಅಲ್ಲಿಯ ಕನ್ನಡ ಕೂಟದವರು ನಮ್ಮನ್ನ ಪ್ರೀತಿಯಿಂದ ಸ್ವಾಗತಿಸಿ, ನಮಗೆ ತುಂಬಾ ಪ್ರೋತ್ಸಾಹ ನೀಡಿ ಸಹಕರಿಸಿದ್ದಾರೆ, ಜೊತೆಗೆ ಬರೀ ಕನ್ನಡದವರು ಮಾತ್ರವಲ್ಲದೇ ಬೇರೆ ಭಾಷೆಯವರು ಚಿತ್ರ ನೋಡಿದ್ದು, ನಮಗೆ ಖುಷಿ ತಂದಿದೆ" ಎನ್ನುತ್ತಾರೆ.

'ರಂಗಿತರಂಗ' ಈಗಾಗಲೇ ಕೆನಡಾ, ಯುರೋಪ್, ಟೋಕಿಯೋ, ಸಿಂಗಪೂರ್, ಹಾಗೂ ಅಮೆರಿಕದಲ್ಲಿ ಪ್ರದರ್ಶನ ಕಂಡಿದ್ದು, ಯುಎಸ್ಎ ನಲ್ಲಿ ಪ್ರದರ್ಶನ ಕಾಣಲು ಚಿತ್ರ ವಿತರಕ ರವಿ ಕಶ್ಯಪ್ ವ್ಯವಸ್ಥೆ ಮಾಡಿದ್ದಾರೆ.

"ಇದೊಂದು ವಿಭಿನ್ನ ಕಥೆ ಜೊತೆಗೆ ಸುಂದರವಾದ ಕಲರ್ ಫುಲ್ ಹಾಡುಗಳ ಜೊತೆಗೆ ನೈಜತೆಗೆ ಹತ್ತಿರವಾದ ಕಥೆಯನ್ನು 'ರಂಗಿತರಂಗ'ದ ಮೂಲಕ ಅನುಪ್ ಭಂಡಾರಿ ತಂದಿದ್ದಾರೆ" ಎಂದು ಚಿತ್ರದ ಓವರ್ ಸೀಸ್ ಡಿಸ್ಟ್ರಿಬ್ಯುಟರ್ ಅಜೇಯ್ ನುಡಿಯುತ್ತಾರೆ.

ಒಟ್ನಲ್ಲಿ ಹೊಸಬರು ಗಾಂದಿನಗರದಲ್ಲಿ ಸೃಷ್ಟಿಸಿರುವ ಹವಾ ಇದೀಗ ದೇಶದೆಲ್ಲೆಡೆ ಹಬ್ಬಿದ್ದು, ಅಭಿಮಾನಿಗಳ ಜೊತೆಗೆ ಅಮೇರಿಕಾದಲ್ಲಿರುವ ಕನ್ನಡಿಗರ ಮಕ್ಕಳು ಕೂಡ ಭಾರಿ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.

English summary
Kannada movie 'RangiTaranga' 50 days Celebrations in New Jersey. Nirup Bhandari starring Kannada movie 'RangiTaranga' in Anup Bhandari direction has completed 50 of days in USA and India screening. 'RangiTaranga' features Actress Avanthika Shetty, Actress Radhika Chetan in the lead role.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada