For Quick Alerts
  ALLOW NOTIFICATIONS  
  For Daily Alerts

  ಈ ವಾರ 'ಪಟಾಕಿ' ಜೊತೆ 'ಬಿಬಿ5' 'ಕೀಟ್ಲೆ ಕೃಷ್ಣ' ತೆರೆಗೆ

  By Bharath Kumar
  |

  ಈ ವಾರ ಸಿನಿ ಪ್ರೇಮಿಗಳಿಗೆ ತ್ರಿಬಲ್ ಧಮಾಕ. ಒಟ್ಟು ಮೂರು ಚಿತ್ರಗಳು ನಾಳೆ (ಮೇ 26) ಸ್ಯಾಂಡಲ್ ವುಡ್ ಚಿತ್ರಮಂದಿರಗಳಿಗೆ ಲಗ್ಗೆಯಿಡುತ್ತಿದೆ.

  ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಪಟಾಕಿ' ಜೊತೆಗೆ ರಾಧಿಕಾ ಚೇತನ್ ಅಭಿನಯದ 'ಬಿಬಿ5' ಮತ್ತು ಮಕ್ಕಳ ಚಿತ್ರ 'ಕೀಟ್ಲೆ ಕೃಷ್ಣ' ಬಿಡುಗಡೆಯಾಗುತ್ತಿದೆ.[ಮೇ 26 ರಂದು ಗಾಂಧಿನಗರದಲ್ಲಿ ಸಿಡಿಯಲಿದೆ 'ಗಣೇಶ' ಪಟಾಕಿ]

  ಈ ಮೂರು ಚಿತ್ರಗಳು ವಿಭಿನ್ನ ವಿಷಯಕ್ಕೆ ವಿಶೇಷವೆನಿಸಿಕೊಂಡಿದೆ. ಟ್ರೈಲರ್ ಮತ್ತು ಹಾಡುಗಳ ಮೂಲಕ ಕುತೂಹಲ, ಭರವಸೆ ಹುಟ್ಟಿಸಿದೆ. ಹಾಗಾದ್ರೆ, ಯಾವ ಚಿತ್ರದಲ್ಲಿ ಏನು ವಿಶೇಷತೆ ಇದೆ ಎಂಬುದನ್ನ ಮುಂದೆ ಓದಿ......

  'ಗಣೇಶ್' ಪಟಾಕಿ

  'ಗಣೇಶ್' ಪಟಾಕಿ

  ಗೋಲ್ಡನ್ ಸ್ಟಾರ್ ಗಣೇಶ್ ನಾಯಕನಾಗಿ ಅಭಿನಯಿಸಿರುವ 'ಪಟಾಕಿ' ಚಿತ್ರವನ್ನ ಮಂಜು ಸ್ವರಾಜ್ ನಿರ್ದೇಶನ ಮಾಡಿದ್ದಾರೆ. ಸಾಯಿಕುಮಾರ್, ಪ್ರಿಯಾಂಕ, ಆಶೀಶ್ ವಿದ್ಯಾರ್ಥಿ, ಧರ್ಮ, ಸಾಧುಕೋಕಿಲ, ವಿಜಯ್ ಚಂಡೂರು, ಸಂಪತ್ ಕುಮಾರ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನವಿದ್ದು, ಎಸ್.ವಿ. ಬಾಬು ಚಿತ್ರ ನಿರ್ಮಿಸಿದ್ದಾರೆ.

  ಪೊಲೀಸ್ ಆಫೀಸರ್

  ಪೊಲೀಸ್ ಆಫೀಸರ್

  ಗೋಲ್ಡನ್ ಸ್ಟಾರ್ ಗಣೇಶ್ ಇದೇ ಮೊದಲ ಬಾರಿಗೆ ಪೊಲೀಸ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಪ್ರೇಕ್ಷಕರಿಗೆ ಹೊಸ ರೀತಿಯ ಮನರಂಜನೆ ಸಿಗುವುದಂತೂ ಪಕ್ಕಾ. ಉಳಿದಂತೆ ಚಿತ್ರದಲ್ಲಿ ಗಣೇಶ್ ಗೆ ರನ್ಯ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ.

  ಸಸ್ಪೆನ್ಸ್ ಥ್ರಿಲ್ಲರ್ 'ಬಿಬಿ5'

  ಸಸ್ಪೆನ್ಸ್ ಥ್ರಿಲ್ಲರ್ 'ಬಿಬಿ5'

  'ರಂಗಿತರಂಗ', ‘ಯೂ ಟರ್ನ್‌' ಖ್ಯಾತಿಯ ರಾಧಿಕಾ ಚೇತನ್‌ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ 'ಬಿಬಿ5' ಈ ವಾರ ತೆರೆಗೆ ಬರ್ತಿದೆ. ಪೂರ್ಣಚಂದ್ರ ಮೈಸೂರು, ರಾಜೇಶ್ ನಟರಂಗ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಾಫ್ಟ್‌ವೇರ್‌ ಉದ್ಯೋಗದಲ್ಲಿದ್ದ ಜನಾರ್ದನ್ ಎನ್‌. ಈ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ. ಸೌಮ್ಯಾ ಬಿ.ಜಿ. ಅವರು ಈ ಚಿತ್ರಕ್ಕೆ ಬಂಡವಾಳ ಹಾಕಿದ್ದು, ಚೇತನ್‌ ಕುಮಾರ್‌ ಶಾಸ್ತ್ರಿ ಸಂಗೀತ, ವಿಕ್ರಮ್‌ ಮತ್ತು ಚೇತನ್‌ ರಾಯ್‌ ಛಾಯಾಗ್ರಹಣ ‘ಬಿಬಿ5' ಚಿತ್ರಕ್ಕಿದೆ.

  'ಕೀಟ್ಲೆ ಕೃಷ್ಣ'ನ ಆಗಮನ

  'ಕೀಟ್ಲೆ ಕೃಷ್ಣ'ನ ಆಗಮನ

  ಇವರೆಡು ದೊಡ್ಡ ಸಿನಿಮಾಗಳ ಜೊತೆ ಮಕ್ಕಳ ಚಿತ್ರ 'ಕೀಟ್ಲೆ ಕೃಷ್ಣ' ಕೂಡ ಈ ವಾರವೇ ತೆರೆಗೆ ಬರ್ತಿದ್ದಾನೆ. ಮಾ. ಹೇಮಂತ್, ಮಾ. ಮಧುಸೂದನ್, ಸ್ಪಂದನಾ, ನೀನಾಸಂ ಅಶ್ವಥ್, ಹರೀಶ್‌ರಾಜ್, ಪೆಟ್ರೋಲ್ ಪ್ರಸನ್ನ, ಸಿದ್ದು ಪ್ರಶಾಂತ್ ಪ್ರಮುಖ ತಾರಬಳಗದಲ್ಲಿ ಅಭಿನಯಿಸಿದ್ದಾರೆ. ನಾಗರಾಜ್ ಅರೆಹೊಳೆ ಆಕ್ಷನ್ ಕಟ್ ಹೇಳಿದ್ದು, ರಾಜೀವ್ ಕೊಠಾರಿ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ರವಿ ಬಸ್ರೂರು ಸಂಗೀತವಿದೆ.

  English summary
  Kannada Actor Ganesh Starrer Kannada Movie Pataki, Radhika Chethan, Starrer 'BB5', and 'Keetle Krishna' Movies Are Releasing on May 26th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X