»   » ವಿನಯ್ ರಾಜ್ ರ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಸರ್ ಪ್ರೈಸ್

ವಿನಯ್ ರಾಜ್ ರ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಸರ್ ಪ್ರೈಸ್

Posted By:
Subscribe to Filmibeat Kannada

ದೊಡ್ಮನೆಯ ಮತ್ತೊಂದು ಕುಡಿಯಾದ ವಿನಯ್ ರಾಜ್ ಕುಮಾರ್ ಅವರ ಬಹುನಿರೀಕ್ಷಿತ ಸಿನಿಮಾ 'ರನ್ ಆಂಟನಿ' ಅಭಿಮಾನಿಗಳಲ್ಲಿ ಬಹಳ ನಿರೀಕ್ಷೆ ಹುಟ್ಟುಹಾಕಿದೆ. ಮೊದಲ ಚಿತ್ರ 'ಸಿದ್ಧಾರ್ಥ' ಅಷ್ಟಾಗಿ ಯಶಸ್ಸು ಕಾಣದ ಕಾರಣ ಎರಡನೇ ಚಿತ್ರ 'ರನ್ ಆಂಟನಿ' ಬಗ್ಗೆ ಸ್ವಾಭಾವಿಕವಾಗಿ ಕೊಂಚ ಕುತೂಹಲ ಹಾಗೂ ನಿರೀಕ್ಷೆ ಜಾಸ್ತಿ ಇಟ್ಟುಕೊಂಡಿದ್ದಾರೆ.

ಹೌದು ಕಳೆದ ವಾರ ಚಿತ್ರದ ಟೀಸರ್ ಬಿಡುಗಡೆ ಆಗಿದ್ದು, ಟೀಸರ್ ನೋಡಿದ ಅಭಿಮಾನಿಗಳು ಒಳ್ಳೆ ರೆಸ್ಪಾನ್ಸ್ ನೀಡಿದ್ದಾರೆ. ಸಖತ್ ಥ್ರಿಲ್ಲಿಂಗ್ ಮತ್ತು ಮಿಸ್ಟರಿಯಂತಿರುವ 'ರನ್ ಆಂಟನಿ' ಟೀಸರ್ ವಿಭಿನ್ನವಾಗಿ ಮೂಡಿಬಂದಿದ್ದು, ಚಿತ್ರದ ಬಗ್ಗೆ ಅಭಿಮಾನಿಗಳು ಕುತೂಹಲ ಇಟ್ಟುಕೊಂಡಿದ್ದಾರೆ.['ರನ್ ಆಂಟನಿ' ಟೀಸರ್ ಬಹಳ ಥ್ರಿಲ್ಲಿಂಗಾಗಿದೆ ಕಣ್ರೀ..!]


Kannada Movie 'Run Antony' Audio launch on Vinay Rajkumar's Birthday

ಇದೀಗ ಮೇ 7 ರಂದು ನಟ ವಿನಯ್ ರಾಜ್ ಕುಮಾರ್ ಅವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ವಿಶೇಷವಾಗಿ ಆ ದಿನದಂದು 'ರನ್ ಆಂಟನಿ' ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಮಾಡುವ ಮೂಲಕ ನಟ ವಿನಯ್ ರಾಜ್ ಕುಮಾರ್ ಅವರ ಹುಟ್ಟುಹಬ್ಬವನ್ನು ಆಚರಿಸಿ ಆ ದಿನವನ್ನು ಸದಾ ಅವರ ನೆನಪಿನಲ್ಲುಳಿಯುವಂತೆ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.[ಶೂಟಿಂಗ್ ಮುಗಿಸಿದ ಖುಷಿಯಲ್ಲಿ ಕಣ್ಣೀರು ಹಾಕಿದ 'ರನ್ ಆಂಟನಿ' ತಂಡ]


Kannada Movie 'Run Antony' Audio launch on Vinay Rajkumar's Birthday

ನವ ನಿರ್ದೇಶಕ ರಘು ಶಾಸ್ತ್ರಿ ಅವರು ನಿರ್ದೇಶನ ಮಾಡಿರುವ 'ರನ್ ಆಂಟನಿ' ಚಿತ್ರಕ್ಕೆ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಅವರು ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಥ್ರಿಲ್ಲರ್ ಸಿನಿಮಾವೊಂದಕ್ಕೆ ಮಣಿಕಾಂತ್ ಕದ್ರಿ ಅವರು ಸಂಗೀತ ನೀಡಿದ್ದು, ಅವರ ಕೈ ಮೀರಿ ಅತ್ಯುತ್ತಮ ಸಂಗೀತ ನೀಡಿದ್ದಾರಂತೆ.[ವಿನಯ್ ರಾಜ್ ಕುಮಾರ್ 'ರನ್ ಆಂಟನಿ' ಸ್ಪೆಷಾಲಿಟೀಸ್ ಗೊತ್ತಾ?]


Kannada Movie 'Run Antony' Audio launch on Vinay Rajkumar's Birthday

'ವಜ್ರೇಶ್ವರಿ ಹಾಸ್ಪಿಟಾಲಿಟಿ' ನಿರ್ಮಾಣ ಸಂಸ್ಥೆಯಡಿಯಲ್ಲಿ ಮೂಡಿ ಬಂದಿರುವ 'ರನ್ ಆಂಟನಿ' ಚಿತ್ರದಲ್ಲಿ ನವ ನಟಿಯರಾದ ರುಕ್ಷಾರ್ ಮೀರ್ ಮತ್ತು ನಟಿ ಸುಶ್ಮಿತಾ ಜೋಶಿ ಅವರು ವಿನಯ್ ರಾಜ್ ಕುಮಾರ್ ಅವರ ಜೊತೆ ಮುಖ್ಯ ಭೂಮಿಕೆಯಲ್ಲಿ ಮಿಂಚಿದ್ದಾರೆ.

English summary
The audio launch of Kannada Movie 'Run Antony' is planned on May 7th, coinciding with Vinay Rajkumar's birthday. Arrangements are currently on to make it a grand event and to make it twice as memorable for the actor. The movie is directed by Raghu Shastry.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada