»   » ಈ ವಾರ ನಗಿಸುವುದಕ್ಕೆ ಬರ್ತಿದೆ 'ಸ್ಮೈಲ್ ಪ್ಲೀಸ್'

ಈ ವಾರ ನಗಿಸುವುದಕ್ಕೆ ಬರ್ತಿದೆ 'ಸ್ಮೈಲ್ ಪ್ಲೀಸ್'

Posted By:
Subscribe to Filmibeat Kannada

ಗುರುನಂದನ್ ಅಭಿನಯದ "ಸ್ಮೈಲ್ ಪ್ಲೀಸ್‌' ಚಿತ್ರ ಈ ವಾರ ತೆರೆಗೆ ಅಪ್ಪಳಿಸುತ್ತಿದೆ. ಫೆಬ್ರವರಿ 10 ರಂದು ಸಿನಿ ಪ್ರೇಕ್ಷಕರನ್ನ ನಗಿಸುವುದಕ್ಕೆ ರಾಜ್ಯಾದ್ಯಂತ 'ಸ್ಮೈಲ್ ಪ್ಲೀಸ್' ತೆರೆಕಾಣುತ್ತಿದೆ. ಅಂದ್ಹಾಗೆ, ಚಿತ್ರದಲ್ಲಿ ಗುರುನಂದನ್ ಗೆ ಇಬ್ಬರು ನಾಯಕಿಯರಿದ್ದು, ಕಾವ್ಯಾಶೆಟ್ಟಿ ಮತ್ತು ನೇಹಾ ಪಾಟೀಲ್ ಕಾಣಿಸಿಕೊಂಡಿದ್ದಾರೆ.[ಸಂದರ್ಶನ: Rank ಸ್ಟಾರ್ ಗುರುನಂದನ್ ಚಿತ್ರಗಳಲ್ಲಿ ಸ್ಮೈಲೇ ಸ್ಪೆಷಲ್..!]

ಚಿತ್ರದ ಟೈಟಲ್ ಹೇಳುವಾಗೆ 'ಸ್ಮೈಲ್ ಪ್ಲೀಸ್' ಪಕ್ಕಾ ಕಾಮಿಡಿ ಎಂಟರ್ ಟೈನ್ ಮೆಂಟ್ ಆಗಿದ್ದು, ಎಲ್ಲರೂ ಕೂತು ನೋಡುವಂತಹ ಸಿನಿಮಾ ಅಂತೆ. ಏನೇ ಸಮಸ್ಯೆಗಳಿದ್ದರೂ ಸದಾ ನಗುನಗುತ್ತಾ ಸ್ವೀಕರಿಸಿ ಎಂಬ ಸಂದೇಶವನ್ನ ಕೂಡ ಚಿತ್ರ ಒಳಗೊಂಡಿದೆಯಂತೆ. ಚಿಕ್ಕಮಗಳೂರು, ಮಂಗಳೂರು, ಮಲೆನಾಡು ಬ್ಯಾಕ್ ಡ್ರಾಪ್, ಸಕಲೇಶ್ವರ, ಬೆಂಗಳೂರಿನಲ್ಲಿ ಚಿತ್ರೀಕರಣ ನಡೆದಿದ್ದು, ಈಗಾಗಲೇ ಹಾಡುಗಳು ಬಿಡುಗಡೆಯಾಗಿ ಗಮನ ಸೆಳೆದಿದೆ.['ಸ್ಮೈಲ್ ಪ್ಲೀಸ್' ಆಡಿಯೋ ರಿಲೀಸ್ ಮಾಡಿದ ರಾಕಿಂಗ್ ಸ್ಟಾರ್]

Kannada Movie 'Smile Please' Releasing on February 10th

ಈ ಚಿತ್ರಕ್ಕೆ ರಘು ಸಮರ್ಥ್ ಆಕ್ಷನ್ ಕಟ್ ಹೇಳಿದ್ದು, ಇದು ಇವರ ಮೊದಲ ನಿರ್ದೇಶನದ ಸಿನಿಮಾ. ಈ ಹಿಂದೆ ಟಿ.ಎನ್‌. ಸೀತಾರಾಮ್‌ ಬಳಿ ಸಹನಿರ್ದೇಶಕರಾಗಿ ಹಾಗೂ ಹಲವಾರು ಟಿವಿ ಧಾರಾವಾಹಿಗಳಿಗೆ ಸಂಭಾಷಣೆಯನ್ನು ಬರೆದಿರುವ ರಘು ಸಮರ್ಥ್ ಗೆ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಸ್ವತಂತ್ರ ನಿರ್ದೇಶಕರಾಗಿದ್ದಾರೆ.[ಒಂದೇ ತಿಂಗಳಿನಲ್ಲಿ 'ಸ್ಮೈಲ್ ಪ್ಲೀಸ್' ಚಿತ್ರೀಕರಣ ಫಿನಿಶ್.!]

Kannada Movie 'Smile Please' Releasing on February 10th

ಕೆ.ಮಂಜು ಈ ಚಿತ್ರವನ್ನ ನಿರ್ಮಾಣ ಮಾಡಿದ್ದು, ಅನೂಪ್‌ ಸೀಳಿನ್ ಸಂಗೀತ ನೀಡಿದ್ದಾರೆ. ಜೆ.ಎಸ್‌. ವಾಲಿ ಕ್ಯಾಮೆರಾ ಹಿಂದೆ ಕೆಲಸ ಮಾಡಿದ್ದಾರೆ. ಉಳಿದಂತೆ ಚಿತ್ರದಲ್ಲಿ ರಂಗಾಯಣರಘು, ಶ್ರೀನಿವಾಸ್‌ ಪ್ರಭು, ಸುಧಾ ಬೆಳವಾಡಿ, ಅರುಣಾ ಬಾಲರಾಜ್‌ ಮುಂತಾದವರಿದ್ದಾರೆ.

English summary
Kannada Actor Gurunandan Starrer 'Smile Please' Movie Releasing on February 10th. the Movie Directed by Raghu Samarth and Produced by K Manju.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada