»   » ಶುರುವಾಯ್ತು ಶಿವಣ್ಣ ಹಾಗೂ ಸುದೀಪ್ ನಡುವೆ ಕಾಳಗ

ಶುರುವಾಯ್ತು ಶಿವಣ್ಣ ಹಾಗೂ ಸುದೀಪ್ ನಡುವೆ ಕಾಳಗ

Posted By:
Subscribe to Filmibeat Kannada
ಶುರುವಾಯ್ತು ಶಿವಣ್ಣ ಹಾಗೂ ಸುದೀಪ್ ನಡುವೆ ಫೈಟ್ | Filmibeat Kannada

ಕಿಚ್ಚ ಸುದೀಪ್ ಹಾಗೂ ಶಿವಣ್ಣನ ಮಧ್ಯೆ ಕಾಳಗ ಶುರುವಾಗಿದೆ. ಹೌದು ಇಬ್ಬರು ಅಖಾಡಕ್ಕೆ ಇಳಿದು ಫೈಟ್ ಮಾಡುತ್ತಿದ್ದಾರೆ. ಆದರೆ ಇವೆಲ್ಲವೂ ರಿಯಲ್ ಅಲ್ಲ ರೀಲ್ ನಲ್ಲಿ. ಪ್ರೇಕ್ಷಕರನ್ನ ರಂಜಿಸಲು ತೆರೆ ಮೇಲೆ ಸುದೀಪ್ ಮತ್ತು ಶಿವರಾಜ್ ಕುಮಾರ್ ಕಾಳಗ ಮಾಡುತ್ತಿದ್ದಾರೆ.

ಜೋಗಿ ಪ್ರೇಮ್ ನಿರ್ದೇಶನದ ದಿ ವಿಲನ್ ಸಿನಿಮಾದ ಕ್ಲೈಮ್ಯಾಕ್ಸ್ ಶೂಟಿಂಗ್ ಶುರುವಾಗಿದೆ. ಚಿತ್ರದಲ್ಲಿ ಸುದೀಪ್ ಮತ್ತು ಶಿವಣ್ಣನ ಫೈಟಿಂಗ್ ಸೀನ್ ಗಳನ್ನ ಚಿತ್ರೀಕರಿಸುವುದರಲ್ಲಿ ಸಿನಿಮಾ ತಂಡ ಬ್ಯುಸಿ ಆಗಿದೆ.

ದಿ ವಿಲನ್ ಸಿನಿಮಾದಿಂದ ಹೊರ ಬಂದ ಇಬ್ಬರು ನಟಿಯರು

Kannada movie The villain climax shooting began

ದಿ ವಿಲನ್ ಸಿನಿಮಾದ ಸಾಹಸ ದೃಶ್ಯಗಳನ್ನ ರವಿವರ್ಮ ನಿರ್ದೇಶನ ಮಾಡುತ್ತಿದ್ದಾರೆ. ಸಂಕ್ರಾಂತಿ ಹಬ್ಬದ ವಿಶೇಷವಾಗಿ ನಿರ್ದೇಶಕ ಪ್ರೇಮ್ ಕ್ಲೈಮ್ಯಾಕ್ಸ್ ಚಿತ್ರೀಕರಣದ ಕೆಲ ಫೋಟೋಗಳನ್ನ ಫೇಸ್ ಬುಕ್ ನಲ್ಲಿ ಹಾಕಿದ್ದಾರೆ.

Kannada movie The villain climax shooting began

ಇನ್ನ ಕೆಲವೇ ದಿನಗಳಲ್ಲಿ ಚಿತ್ರದ ಎರಡು ಟೀಸರ್ ಗಳನ್ನೂ ಬಿಡುಗಡೆ ಮಾಡುವುದಾಗಿ ಸುಳಿವು ಕೊಟ್ಟಿದ್ದಾರೆ ನಿರ್ದೇಶಕ ಪ್ರೇಮ್. ಒಟ್ಟಾರೆ ದಿ ವಿಲನ್ ಸಿನಿಮಾ ದಿನೇ ದಿನೇ ಕುತೂಹಲನ್ನ ಹೆಚ್ಚು ಮಾಡುತ್ತಿದೆ.

English summary
Actor Shivaraj kumar and Sudeep starrer Kannada movie The villain climax shooting began. Ravivarma is directing the film's action sequence. The villain movie teaser will be released soon

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X