ಸ್ಯಾಂಡಲ್ ವುಡ್ ನಲ್ಲಿ ಒಂದಾಗ್ತಿದ್ದಾರೆ ರಾಜ್ ವಿಷ್ಣು!
ಆತ್ಮೀಯ ಗೆಳೆಯರಾಗಿದ್ದ ಮೇರು ನಟ ಡಾ. ರಾಜ್ ಕುಮಾರ್ ಹಾಗೂ ಸಾಹಸಸಿಂಹ ವಿಷ್ಣುವರ್ಧನ್ ಇಬ್ಬರನ್ನೂ ಜಗತ್ತು ನೋಡಿದ್ದು ವೈರಿಗಳು ಅನ್ನೋ ರೀತಿಯಲ್ಲಿ. ಆದರೆ ಒಳಗಿದ್ದ ಸತ್ಯ ಬೇರೇನೇ ಆಗಿತ್ತು. ಹೊರಗೆ ಮಾತ್ರ ಜನ ಏನೇನೋ ಮಾತನಾಡಿಕೊಳ್ಳುತ್ತಿದ್ದರು.
ಸ್ಯಾಂಡಲ್ ವುಡ್ ನಲ್ಲಿ ಡಾ.ರಾಜ್ ರನ್ನ ವಿಷ್ಣು ಒಡಹುಟ್ಟಿದ ಅಣ್ಣನಂತೆ ಭಾವಿಸಿದ್ರು. ಆದ್ರೆ ಅದು ಮೂಢ ಜನ್ರಿಗೆ ಅರ್ಥವಾಗಲಿಲ್ಲವೇನೋ. ಆದರೆ ಈಗ ನಮ್ಮನ್ನಗಲಿರೋ ದಿಗ್ಗಜರು ಒಂದಾಗ್ತಿದ್ದಾರೆ! ಅದು ಒಂದು ಸಿನಿಮಾ ಮೂಲಕ. ಆ ಸಿನಿಮಾ ಟೈಟಲ್ 'ರಾಜವಿಷ್ಣು' ಅಂತ.

ಅಥವಾ ಇವೆಲ್ಲಕ್ಕಿಂತ ಹೊರತಾಗಿ ಒಂದು ಸಾಮಾಜಿಕ ಕಥೆ ಇಟ್ಕೊಂಡು ಟೈಟಲ್ ನಲ್ಲಿ ಗಿಮಿಕ್ಕೂ ಇರಬಹುದು? ಆದರೆ 'ರಾಜವಿಷ್ಣು' ಅನ್ನೋ ಟೈಟಲ್ ಮಾತ್ರ ಅತ್ಯಂತ ಸುಂದರ ಅನ್ನಿಸ್ತಿದೆ. ಚಿತ್ರದ ನಿರ್ದೇಶಕರು ಇನ್ನೂ ನಿರ್ಧಾರವಾಗದಿದ್ರೂ ಸದ್ಯ ನಾಗತಿಹಳ್ಳಿ ವೆಂಕಟೇಶ್ ಅನ್ನೋರು ಸಿನಿಮಾ ನಿರ್ಮಿಸುತ್ತಿದ್ದಾರೆ.
ರೆಬೆಲ್ ಸ್ಟಾರ್ ಅಂಬರೀಶ್ ಆಶೀರ್ವಾದದೊಂದಿಗೆ ಅನ್ನೋ ಅರ್ಪಣೆ ಕೂಡ ಇದೆ. ಕಾದು ನೋಡೋಣ 'ರಾಜವಿಷ್ಣು' ಹೇಗಿರ್ತಾರೆ ಅಂತ. ಚಿತ್ರದ ಮುಹೂರ್ತ ಶ್ರಾವಣ ಸೋಮವಾರ (ಆ.4) 9.15ಕ್ಕೆ ಓಂಕಾರ ಹಿಲ್ಸ್, ಶ್ರೀನಿವಾಸಪುರ, ಕೆಂಗೇರಿಯಲ್ಲಿ ನೆರವೇರಿತು.


Click it and Unblock the Notifications











