»   » ಸಪ್ತಸಾಗರದಾಚೆಗೆ ಶ್ರೀಮುರಳಿ ಭರ್ಜರಿ ಚಿತ್ರ 'ಉಗ್ರಂ'

ಸಪ್ತಸಾಗರದಾಚೆಗೆ ಶ್ರೀಮುರಳಿ ಭರ್ಜರಿ ಚಿತ್ರ 'ಉಗ್ರಂ'

Posted By:
Subscribe to Filmibeat Kannada

ಶ್ರೀಮುರಳಿ ಅವರ 'ಉಗ್ರಂ' ಚಿತ್ರಕ್ಕೆ ಸಾಕಷ್ಟು ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ. ಚಿತ್ರದ ಮೇಕಿಂಗ್ ಗೆ ಸ್ಯಾಂಡಲ್ ವುಡ್ ಅಷ್ಟೇ ಅಲ್ಲ ಅಕ್ಕಪಕ್ಕದ ರಾಜ್ಯಗಳ ಚಿತ್ರೋದ್ಯಮಗಳೂ ನಿಬ್ಬೆರಗಾಗಿವೆ. ಇದೀಗ ಚಿತ್ರ ಯುಎಸ್, ಯೂರೋಪ್ ಮನರಂಜನಾ ಮಾರುಕಟ್ಟೆಗೆ ದಾಂಗುಡಿ ಇಡುತ್ತಿದೆ.

ಈ ಚಿತ್ರವನ್ನು ಹೊಸ ಪೀಳಿಗೆಯ ಯುವಜನಾಂಗಕ್ಕೆ ವಿಡಿಯೋ ಆಧಾರಿತ ಮನೋರಂಜನೆ ಸೇವೆಗಳನ್ನು ಒದಗಿಸುತ್ತಿರುವ ರೀಲ್ ಬಾಕ್ಸ್ ಸಂಸ್ಥೆ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿರುವುದು ವಿಶೇಷ. [ಉಗ್ರಂ ಚಿತ್ರ ವಿಮರ್ಶೆ]


ಇಂಕ್ ಫೈನೇಟ್ ಪಿಕ್ಚರ್ಸ್ ಸಹಯೋಗದೊಂದಿಗೆ ರೀಲ್ ಬಾಕ್ಸ್ ಸಂಸ್ಥೆ ಅಮೆರಿಕ, ಆಸ್ಟ್ರೇಲಿಯಾ, ಯುಎಇ ಮತ್ತು ಜರ್ಮನಿಯಲ್ಲಿರುವ ಪ್ರೇಕ್ಷಕರಿಗೆ 'ಉಗ್ರಂ' ಚಿತ್ರವನ್ನು ವೀಕ್ಷಿಸುವ ಅವಕಾಶವನ್ನು ಕಲ್ಪಿಸಲಿದೆ.

ಪ್ರಶಾಂತ್ ನೀಲ್ ಅವರ ಚೊಚ್ಚಲ ನಿರ್ದೇಶನದಲ್ಲಿ ಮೂಡಿಬಂದ 'ಉಗ್ರಂ' ಚಿತ್ರವನ್ನು ಮೊದಲ ಬಾರಿಗೆ ಕೋಲಾರ ಗೋಲ್ಡ್ ಫೀಲ್ಡ್ಸ್ ನಲ್ಲಿರುವ ಚಿನ್ನದ ಗಣಿಯ ಸೈನೇಡ್ ರಾಶಿಯ ಹೊರಗೆ ಚಿತ್ರಿಸಲಾಗಿದೆ. ಆರಂಭದಿಂದ ಕೊನೆಯವರೆಗೂ ಕುತೂಹಲ ಕೆರಳಿಸುವ 'ಉಗ್ರಂ' ತನ್ನ ಅತ್ಯುತ್ತಮ ಚಿತ್ರಕಥೆಯಿಂದಾಗಿ ಪ್ರೇಕ್ಷಕರ ಕುತೂಹಲವನ್ನು ಕಾಯ್ದುಕೊಳ್ಳುತ್ತದೆ.

ವೈಫೈ ಸಂಪರ್ಕ ಬಳಸಿಕೊಂಡು ಟೆಲಿವಿಷನ್ ಎಚ್ ಡಿಎಂಐ ಪೋರ್ಟ್ ಪ್ಲಗ್ ಮಾಡಬಹುದಾದ ಮೀಡಿಯಾ ಸ್ಟ್ರೀಮಿಂಗ್ ಡಾಂಗಲ್ (ಎಂಎಎಸ್ ಡಿ) ಮೂಲಕ ರೀಲ್ ಬಾಕ್ಸ್ ಪ್ರೇಕ್ಷಕರಿಗೆ ಚಿತ್ರಗಳನ್ನು ತಲುಪಿಸುತ್ತದೆ. ಪ್ರತಿ ಚಿತ್ರಕ್ಕೆ ಇಷ್ಟು ಎಂಬ ಶುಲ್ಕವನ್ನು ನಿಗದಿಪಡಿಸುತ್ತದೆ. ರೀಲ್ ಬಾಕ್ಸ್ ಎಂಎಸ್ ಡಿ ಚಿತ್ರ ವೀಕ್ಷಣೆಯ ಬಗೆಯನ್ನೇ ಬದಲಿಸುತ್ತದೆ.

Ugramm movie still

ಎಚ್ ಡಿ 5.1 ಡಾಲ್ಬಿ ಸೌಂಡ್ ಬಳಸಿಕೊಂಡು ಎಲ್ಲ ಖಂಡಗಳಲ್ಲಿಯೂ ಚಿತ್ರಗಳನ್ನು ಸ್ಟ್ರೀಮಿಂಗ್ ಮಾಡುವ ಪರವಾನಗಿಯನ್ನು ಇದು ಪಡೆದುಕೊಂಡಿದೆ.
"ಉಗ್ರಂ ಚಿತ್ರವನ್ನು ಸಾಗರೋತ್ತರವಾಗಿ ಕೊಂಡೊಯ್ಯುತ್ತಿರುವುದಕ್ಕೆ ಸಂತಸವಾಗುತ್ತಿದೆ. ಕನ್ನಡಿಗರು ಈ ಸಾಹಸ ಪ್ರಧಾನ ಚಿತ್ರವನ್ನು ಖುಷಿಯಿಂದ ನೋಡಲಿದ್ದಾರೆ. ಅತ್ಯುತ್ತಮ ಚಿತ್ರವನ್ನು ಅತ್ಯುತ್ತಮ ಮಾರುಕಟ್ಟೆಯಲ್ಲಿ ವೀಕ್ಷಿಸುವ ವೇದಿಕೆಯನ್ನು ರೀಲ್ ಬಾಕ್ಸ್ ಕಲ್ಪಿಸುತ್ತಿದೆ" ಎಂದು ರೀಲ್ ಬಾಕ್ಸ್ ನಿರ್ದೇಶಕ ಮತ್ತು ಸಹ ಸ್ಥಾಪಕ ಕೆ.ಜಿ. ರಘು ಹೇಳಿದರು.

ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಮಾತನಾಡಿ, "ಅನಿವಾಸಿ ಭಾರತೀಯರ ಬಳಿಗೆ ತಮ್ಮ ಚಲನಚಿತ್ರ ಹೋಗುತ್ತಿರುವುದು ನಿಜಕ್ಕೂ ಸಂತಸದ ವಿಷಯ. ರೀಲ್ ಬಾಕ್ಸ್ ತಂತ್ರಜ್ಞಾನ ಮತ್ತು ಕನ್ನಡ ಸಿನಿಮಾಗಳ ವಿತರಣಾ ಮಾದರಿ ನಿಜಕ್ಕೂ ಶ್ಲಾಘನೀಯ. ಇದು ಕೇವಲ ಉಗ್ರಂ ಚಿತ್ರಕ್ಕೆ ಮಾತ್ರವಲ್ಲ ಇಡೀ ಕನ್ನಡ ಚಿತ್ರರಂಗಕ್ಕೂ ಅತ್ಯುತ್ತಮ ಕೊಡುಗೆ" ಎಂದು ಪ್ರಶಂಸಿಸಿದರು. (ಒನ್ಇಂಡಿಯಾ ಕನ್ನಡ)

English summary
Reelbox, which gives an opportunity to NRI audience to watch Kannada movies, will release latest box office hit movie Ugramm in US, Europe market. The movie directed by Prashanth Neel, stars Sri Murali and Haripriya as the lead pair. 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada