ರಿಯಲ್ ಸ್ಟಾರ್ 'ಉಪ್ಪಿ 2'ಗೆ ಏಪ್ರಿಲ್ ನಲ್ಲಿ ಶೂಟಿಂಗ್
'ಬ್ರಹ್ಮ' ಚಿತ್ರದ ಬಳಿಕ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಮತ್ತೊಂದು ಬಹುನಿರೀಕ್ಷಿತ ಹಾಗೂ ಭಾರಿ ಬಜೆಟ್ ಚಿತ್ರ 'ಉಪ್ಪಿ 2'. ಸದ್ದಿಲ್ಲದಂತೆ ಈ ಚಿತ್ರದಲ್ಲಿ ಉಪೇಂದ್ರ ತಲ್ಲೀನರಾಗಿದ್ದಾರೆ. ಇದೇ ಯುಗಾದಿ ಹಬ್ಬಕ್ಕೆ 'ಉಪ್ಪಿ 2' ಸೆಟ್ಟೇರುತ್ತಿದೆ.
ಸದ್ಯಕ್ಕೆ ಉಪೇಂದ್ರ ಅವರು ಬಸವಣ್ಣ ಚಿತ್ರದಲ್ಲಿ ಬಿಜಿಯಾಗಿದ್ದಾರೆ. ಈ ಚಿತ್ರದ ಶೂಟಿಂಗ್ ಟರ್ಕಿಯಲ್ಲಿ ಭರದಿಂದ ಸಾಗುತ್ತಿದೆ. ಅಲ್ಲೇ 'ಉಪ್ಪಿ 2' ಚಿತ್ರಕ್ಕೆ ಡೈಲಾಗ್ ಬರೆಯುತ್ತಿದ್ದಾರೆ. ಉಪ್ಪಿ ಚಿತ್ರ ಅಂದ್ರೆ ಡೈಲಾಗ್ ಗಳಿಗೆ ಹೆಚ್ಚಿನ ಆದ್ಯತೆ ಇರುತ್ತದೆ. ಅದಕ್ಕೆ ತಕ್ಕಂತೆ ಡೈಲಾಗ್ ಗಳು ಮೂಡಿಬಂದಿವೆಯಂತೆ. ['ಉಪ್ಪಿ 2' ಬಗ್ಗೆ ಕೈಕೈ ಹಿಸುಕಿಕೊಂಡವರು!]

ಕಂಠೀರವ ಸ್ಟುಡಿಯೋದಲ್ಲಿ ಉಪೇಂದ್ರ ತಮ್ಮ 45 ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಂಡ ಸಂದರ್ಭದಲ್ಲಿ ಚಿತ್ರಕ್ಕೆ ಚಾಲನೆ ನೀಡಿದ್ದರು. ಈಗ ಅದಕ್ಕೆ ಮುಹೂರ್ತ ಮಾಡಿ ಶೂಟಿಂಗ್ ಆರಂಭಿಸುತ್ತಿದ್ದಾರೆ.
ಇನ್ನು ಉಪ್ಪಿ 2 ಚಿತ್ರಕ್ಕೆ ನಾಯಕಿಯನ್ನೂ ಆಯ್ಕೆ ಮಾಡಲಾಗಿದೆಯಂತೆ. ಅದು ಯಾರು ಎಂಬುದು ಗೊತ್ತಾಗಬೇಕಾದರೆ ಯುಗಾದಿ ತನಕ ಕಾಯಬೇಕಂತೆ. ಈ ಚಿತ್ರಕ್ಕೆ ಪ್ರಿಯಾಂಕಾ ಅವರೇ ಕಾಸ್ಟ್ಯೂಮ್ ಡಿಸೈನ್ ಎಂಬುದು ವಿಶೇಷ.
ಕನ್ನಡ ಚಿತ್ರರಂಗದ ಬ್ಲಾಕ್ ಬಸ್ಟರ್ ಚಿತ್ರ 'ಉಪೇಂದ್ರ' ಚಲನಚಿತ್ರದ ಮುಂದುವರೆದ ಭಾಗ 'ಉಪ್ಪಿ 2' ಆಗಿದೆ. ಉಪ್ಪಿ 2 ಚಿತ್ರವನ್ನು ಪ್ರಿಯಾಂಕಾ ಉಪೇಂದ್ರ ಮತ್ತು ಸಿ.ಆರ್ ಮೋಹನ್ ಅವರು ಉಪೇಂದ್ರ ಪ್ರೋಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸುತ್ತಿದ್ದಾರೆ.


Click it and Unblock the Notifications











