»   » 'ಉಪ್ಪಿ-2' ಸವಿಯೋಕೆ ನಾಳೆಯೇ ಟಿಕೆಟ್ ಕೊಂಡುಕೊಳ್ಳಿ

'ಉಪ್ಪಿ-2' ಸವಿಯೋಕೆ ನಾಳೆಯೇ ಟಿಕೆಟ್ ಕೊಂಡುಕೊಳ್ಳಿ

Posted By:
Subscribe to Filmibeat Kannada

ರಿಯಲ್ ಸ್ಟಾರ್ ಉಪೇಂದ್ರ ತಯಾರಿಸಿರುವ 'ಉಪ್ಪಿಟ್ಟು' ಘಮ ಸ್ಯಾಂಡಲ್ ವುಡ್ ನಲ್ಲಿ ಹೇಗೆ ಹರಡಿದೆ ಅಂತ ನಿಮಗೆ ಚೆನ್ನಾಗಿ ಗೊತ್ತಿದೆ. ಕರ್ನಾಟಕದ ಮೂಲೆ ಮೂಲೆಯಲ್ಲೂ 'ಉಪ್ಪಿ-2' ನೋಡೋಕೆ ಪ್ರೇಕ್ಷಕರು ತುದಿಗಾಲಲ್ಲಿ ನಿಂತಿದ್ದಾರೆ.

ಈಗಾಗಲೇ ಉಪೇಂದ್ರ ಅವರ ಉಲ್ಟಾ ಕಟೌಟ್ ಗಳು ರಾಜ್ಯದ ಮೂಲೆ ಮೂಲೆಯಲ್ಲೂ ಎಲ್ಲರನ್ನ ಆಕರ್ಷಿಸುತ್ತಿದೆ. ಆಗಸ್ಟ್ 14 ರಂದು ರಾಜ್ಯದ 250 ಥಿಯೇಟರ್ ಗಳಲ್ಲಿ ತೆರೆಗೆ ಅಪ್ಪಳಿಸಲಿರುವ 'ಉಪ್ಪಿ-2' ಚಿತ್ರದ ಟಿಕೆಟ್ ಬುಕ್ಕಿಂಗ್ ಸ್ಟಾರ್ಟ್ ಆಗಿದೆ. [ನರ್ತಕಿ ಚಿತ್ರಮಂದಿರದ ಮುಂದೆ 'ಉಪ್ಪಿ-2' ಸರ್ಕಸ್]


Kannada Movie 'Uppi-2' tickets booking started all over Karnataka

ಆನ್ ಲೈನ್ ನಲ್ಲಿ 'ಉಪ್ಪಿ-2' ಚಿತ್ರದ ಟಿಕೆಟ್ಸ್ ಫಾಸ್ಟ್ ಫಿಲ್ಲಿಂಗ್ ಆಗುತ್ತಿದೆ. ಮಲ್ಟಿಪ್ಲೆಕ್ಸ್ ಗಳನ್ನು ಹೊರತುಪಡಿಸಿ ಸಿಂಗಲ್ ಸ್ಕ್ರೀನ್ ಥಿಯೇಟರ್ ಗಳಲ್ಲಿ ನಾಳೆಯಿಂದ ಟಿಕೆಟ್ ವಿತರಣೆ ಮಾಡಲಾಗುತ್ತದೆ.


'ಉಪ್ಪಿ-2' ಚಿತ್ರವನ್ನ ಫಸ್ಟ್ ಡೇ ಫಸ್ಟ್ ಶೋ ನೋಡ ಬಯಸುವವರು ನಾಳೆಯೇ ಟಿಕೆಟ್ಸ್ ಕೊಂಡುಕೊಳ್ಳಿ. ಲೇಟ್ ಮಾಡಿದ್ರೆ, ಮಿಸ್ ಆಗೋದು ಗ್ಯಾರೆಂಟಿ. ಯಾಕಂದ್ರೆ ಉಪೇಂದ್ರ ಫ್ಯಾನ್ಸ್ ಅಷ್ಟು ಕ್ರೇಜಿ ಆಗಿದ್ದಾರೆ. ಎಷ್ಟು ಕ್ರೇಜಿ ಅಂದ್ರೆ, ಉಪ್ಪಿ ಅಭಿಮಾನಿಯೊಬ್ಬನೇ ಸಿನಿಪೊಲೀಸ್ ನಲ್ಲಿ ಬರೋಬ್ಬರಿ 400 ಟಿಕೆಟ್ಸ್ ಬುಕ್ ಮಾಡಿದ್ದಾನೆ. ಅದೆಲ್ಲವೂ ತನ್ನ ಫ್ರೆಂಡ್ಸ್ ಮತ್ತು ಫ್ಯಾಮಿಲಿಗಂತೆ.! [ಉಪ್ಪಿ Unknownu ನಾನೇಶ್ವರನಾದ ಟೀಸರ್ ನೋಡಿ]


ಇಂಥವರ ಮಧ್ಯೆ ನೀವು 'ಉಪ್ಪಿ-2' ಸವಿಬೇಕು ಅಂದ್ರೆ ಸ್ವಲ್ಪ ಫಾಸ್ಟ್ ಆಗಿರಬೇಕು.

English summary
Upendra directorial and starrer Kannada Movie 'Uppi-2' is all set to release on August 14th. Tickets booking has already started all over Karnataka.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada