»   » 'ಉಪ್ಪಿ 2' ಪೋಸ್ಟರ್ ಯಾಕೆ ಖಾಲಿಯಾಗೈತೆ!

'ಉಪ್ಪಿ 2' ಪೋಸ್ಟರ್ ಯಾಕೆ ಖಾಲಿಯಾಗೈತೆ!

Posted By:
Subscribe to Filmibeat Kannada

ಸ್ಯಾಂಡಲ್ ವುಡ್ 'ರಿಯಲ್ ಸ್ಟಾರ್' ಉಪೇಂದ್ರ ಇತ್ತೀಚೆಗಂತೂ ಸಖತ್ ಸುದ್ದಿಯಲ್ಲಿದ್ದಾರೆ. ಅವರೇ ನಟಿಸಿ ನಿರ್ದೇಶಿಸುತ್ತಿರುವ 'ಉಪ್ಪಿ 2' ಚಿತ್ರ ಇದೀಗ ತುಂಬಾ ಗಾಸಿಪ್ ಕ್ರೀಯೆಟ್ ಮಾಡುತ್ತಿರುವ ವಿಚಾರ ನೀವು ನೋಡುತ್ತಿದ್ದೀರಿ ಅಲ್ವಾ.

ಆದರೆ ಇಷ್ಟೇಲ್ಲಾ ಗಾಸಿಪ್ ಗಳ ನಡುವೆಯೂ 'ರಿಯಲ್ ಸ್ಟಾರ್' ಉಪೇಂದ್ರ ತಮ್ಮ 'ಉಪ್ಪಿ 2' ಚಿತ್ರದ ಹೊಚ್ಚಹೊಸ ಪೋಸ್ಟರ್ ರಿಲೀಸ್ ಮಾಡಿ ಅಲ್ಲೂ ಸುದ್ದಿಯಾಗಿದ್ದಾರೆ. ಯಾಕಂತೀರಾ, ಇದೀಗ ಹೊಸದಾಗಿ ಬಿಡುಗಡೆಯಾಗಿರುವ ಪೋಸ್ಟರ್ ಖಾಲಿ-ಖಾಲಿಯಾಗಿದೆ. ಹಾಡುಗಳ ಬಿಡುಗಡೆಯ ಪೋಸ್ಟರ್ ತುಂಬಾ ಡಿಫರೆಂಟಾಗಿದೆ.[ರಿಯಲ್ ಸ್ಟಾರ್ ಉಪೇಂದ್ರರ 'ಉಪ್ಪಿ 2' ರಿಲೀಸ್ ಡೇ ಘೋಷಣೆ ]

Upendra

ಇಲ್ಲೂ ಸದ್ದಿಲ್ಲದೇ ತಮ್ಮ ಕ್ರಿಯೆಟಿವಿಟಿಯನ್ನು ತೋರಿಸಿರುವ ಉಪೇಂದ್ರ, 'ಉಪ್ಪಿ 2' ಚಿತ್ರದ ಖಾಲಿ ಪೋಸ್ಟರ್ ರಿಲೀಸ್ ಮಾಡಿದ್ದಾರೆ. ಪೋಸ್ಟರ್ ಪೂರ್ತಿ ಖಾಲಿಯಾಗಿದ್ದು, ಕೇವಲ 'ಹಾಡುಗಳ ಬಿಡುಗಡೆ 17-07-2015' ರಂದು ಅಂತ ದಿನಾಂಕ ಮತ್ತು ಚಿತ್ರದ ಹೆಸರನ್ನು ಚಿಕ್ಕದಾಗಿ ಕಾಣುವಂತೆ ಮಾಡಿ ಇಡೀ ಪೋಸ್ಟರ್ ಖಾಲಿ ಬಿಟ್ಟಿದ್ದಾರೆ.[ಕಷ್ಟದಲ್ಲಿ ಬಂದ ಉಪೇಂದ್ರ ಪ್ರತಿಭೆಗಳನ್ನು ಚಿವುಟುತ್ತಿದ್ದಾರೆ! ]

ಅಂದಹಾಗೆ 'ಉಪೇಂದ್ರ' ಚಿತ್ರದಲ್ಲಿ ಉಪ್ಪಿ "ನಾನು" ಆಗಿ ಕಾಣಿಸಿಕೊಂಡಿದ್ದರು. ಅದೇ 'ಉಪ್ಪಿ 2' ಚಿತ್ರದಲ್ಲಿ "ನೀನು" ಆಗಿ ಕಾಣಿಸಿಕೊಂಡಿದ್ದಾರೆ. ಆದ್ದರಿಂದ ಈ ಥರಾ ಖಾಲಿ ಪೋಸ್ಟರ್ ಬಿಡುಗಡೆ ಮಾಡಿ ನಿಮ್ಮ ಆಯ್ಕೆಗೆ ಬಿಟ್ಟಿರಲೂಬಹುದು. ಡಿಫರೆಂಟಾಗಿ ಯೋಚನೆ ಮಾಡುವ ರಿಯಲ್ ಸ್ಟಾರ್ ಖಾಲಿ ಬಿಟ್ಟ ಜಾಗವನ್ನು ಪ್ರೇಕ್ಷಕರಿಂದ ತುಂಬಿಸುವ ಪ್ರಯತ್ನ ಮಾಡಿರಲೂಬಹುದು ಅನ್ನೋದು ನಮ್ಮ ಅನಿಸಿಕೆ.[ಕೃತಿಚೌರ್ಯ ಆರೋಪಿಸಿದವರನ್ನು ಉಪ್ಪಿ ಬೆಂಡೆತ್ತಿದ್ದು ಹೀಗೆ]

'ಉಪ್ಪಿ 2' 'ಉಪೇಂದ್ರ' ಚಿತ್ರದ ಮುಂದುವರಿದ ಭಾಗ ಇರಬಹುದೇ ಅನ್ನುವ ಅನುಮಾನ ತುಂಬಾ ಜನರಿಗೆ ಇರಬಹುದು. ಆದರೆ ಉತ್ತರ ಕಂಡುಕೊಳ್ಳಬೇಕಾದರೆ ಸಿನೆಮಾ ತೆರೆ ಕಾಣಬೇಕಲ್ಲವೇ. ಇದೇ ಅಗಸ್ಟ್ 14 ರಂದು ಚಿತ್ರ ತೆರೆ ಕಂಡ ಮೇಲೆ ನೋಡೋಣ.

English summary
Kannada Movie 'Uppi2'new Poster released, The Movie features Upendra, Kristina in the lead role. The movie is directed by Upendra.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X