»   » ಜೂನ್ ತಿಂಗಳಲ್ಲಿ ಚಿತ್ರಪ್ರೇಮಿಗಳು 'ವೆನ್ನಿಲ್ಲಾ' ಸವಿಯಬಹುದು

ಜೂನ್ ತಿಂಗಳಲ್ಲಿ ಚಿತ್ರಪ್ರೇಮಿಗಳು 'ವೆನ್ನಿಲ್ಲಾ' ಸವಿಯಬಹುದು

Posted By:
Subscribe to Filmibeat Kannada

ಜಯತೀರ್ಥ ನಿರ್ದೇಶನದ ಮಾಡುತ್ತಿರುವ ವೆನ್ನಿಲ್ಲಾ ಸಿನಿಮಾ ಜೂನ್ ಮೊದಲ ವಾರದಲ್ಲಿ ತೆರೆಗೆ ಬರಲಿದೆ. ಅವಿನಾಶ್ ಈ ಚಿತ್ರದಲ್ಲಿ ನಾಯಕರಾಗಿದ್ದು, ಸ್ವಾತಿ ನಾಯಕಿಯಾಗಿ ಅಭಿನಯಿಸಿದ್ದಾರೆ.

ಅಖಿಲ ಕಂಬೈನ್ಸ್ ಲಾಂಛನದಲ್ಲಿ ಜಯರಾಮು ಅವರು ನಿರ್ಮಿಸಿರುವ 'ವೆನಿಲ್ಲಾ' ಚಿತ್ರವನ್ನ ಜಯಣ್ಣ ಕಂಬೈನ್ಸ್ ಮೂಲಕ ಈ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಉಡುಪಿ, ಮೈಸೂರು ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಹಾಡೊಂದರ ಚಿತ್ರೀಕರಣ ವಿದೇಶದಲ್ಲಿ ನಡೆದಿದೆ. ರವಿಶಂಕರ್ ಗೌಡ, ಪಾವನ, ಬಿ.ಸುರೇಶ್, ರೆಹಮಾನ್, ಗಿರಿ, ನಂದ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಜಯತೀರ್ಥ ರಚನೆ ಹಾಗೂ ನಿರ್ದೇಶನದ ಈ ಚಿತ್ರಕ್ಕೆ ಬಿ.ಜೆ.ಭರತ್ ಸಂಗೀತ ನೀಡಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಹಾಡುಗಳಿಗೆ ಕೇಳುಗರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಕಿರಣ್ ಹಂಪಾಪುರ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ವಿಕ್ರಂ ಸಾಹಸ ನಿರ್ದೇಶನ, ಮೋಹನ್ ನೃತ್ಯ ನಿರ್ದೇಶನ ಹಾಗೂ ಚಂಚಲ ಭಟ್ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.

kannada movie vennila will releasing on june

ಶೀಘ್ರದಲ್ಲಿ ತೆರೆ ಮೇಲೆ ಲುಂಗಿ' ಕಟ್ಟಲಿದ್ದಾರೆ

ಯುವ-ನಿರ್ದೇಶಕ ಅಕ್ಷಿತ್ ಶೆಟ್ಟಿ ನಿರ್ದೇಶನದ ಚೊಚ್ಚಲ ಕನ್ನಡ ಸಿನೆಮಾ 'ಲುಂಗಿ' ಮೊದಲ ಹಂತದ ಚಿತ್ರೀಕರಣವನ್ನು ಪೂರೈಸಿ ಎರಡನೇ ಹಂತದ ಚಿತ್ರೀಕರಣದಲ್ಲಿ ತೊಡಗಿದೆ. ಚಿತ್ರದ ತಾಂತ್ರಿಕ ಕೆಲಸಗಳು ಭರದಿಂದ ಸಾಗುತ್ತಿದ್ದು ಜುಲೈ ಅಥವಾ ಆಗಸ್ಟ್ ತಿಂಗಳಲ್ಲಿ ತೆರೆ ಮೇಲೆ ಬರುವ ಯೋಜನೆ ಚಿತ್ರ ತಂಡಕ್ಕಿದೆ.

ಚಿತ್ರದ ನಾಯಕನಾಗಿ ಪ್ರಣವ್ ಹೆಗ್ಡೆ, ನಾಯಕಿಯರು ಅಹಲ್ಯಾ ಸುರೇಶ್ ಮತ್ತು ರಾಧಿಕ ರಾವ್ ಇನ್ನುಳಿದಂತೆ ಪ್ರಕಾಶ್ ತೂಮಿನಾಡು, ರೂಪ ವರ್ಕಾಡಿ, ದೀಪಕ್ ರೈ ಪಾಣಜೆ, ರಂಗಿ ತರಂಗ ಕಾರ್ತಿಕ್, ವಿ.ಜೆ.ವಿನೀತ್, ಮೈಮ್ ರಾಮದಾಸ್, ಸಂದೀಪ್ ಶೆಟ್ಟಿ ತಾರಾಗಣದಲ್ಲಿದ್ದಾರೆ.

kannada movie vennila will releasing on june

ಅರ್ಜುನ್ ಲೂಯಿಸ್ ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದು, ಸಿಂಪಲ್ ಸುನಿ, ಅರ್ಜುನ್ ಲೂಯಿಸ್ ಮತ್ತು ವಿಲ್ಸನ್ ಕಟೀಲ್ ಹಾಡುಗಳನ್ನು ರಚಿಸಿದ್ದಾರೆ. ಚಿತ್ರಕ್ಕೆ ರಿಜ್ಜೋ ಪಿ ಜಾನ್ ಕ್ಯಾಮೆರಾ, ಪ್ರಸಾದ್ ಕೆ ಶೆಟ್ಟಿ ಸಂಗೀತ, ಮನು ಶೆಡ್ಗಾರ್ ಸಂಕಲನ, ಸತೀಶ್ ಬ್ರಹ್ಮಾವರ್ ನಿರ್ಮಾಣ ನಿರ್ವಹಣೆ, ರಕ್ಷಿತ್ ರೈ ಸಹ-ನಿರ್ದೇಶನ ಮತ್ತು ಮಹೇಶ್ ಯೆನ್ಮೂರು ಕಲಾ ನಿರ್ದೇಶನವಿದೆ. ಖಾರ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಮುಖೇಶ್ ಹೆಗ್ಡೆಯವರು ನಿರ್ಮಿಸಿದ್ದಾರೆ.

English summary
kannada movie vennila will releasing on june month. the movie directed by jayatheertha and also starrer swathi, ravi shankar and others.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X