For Quick Alerts
  ALLOW NOTIFICATIONS  
  For Daily Alerts

  ದರ್ಶನ್ 'ವಿರಾಟ್' ದರ್ಶನ ಹೇಗಿದೆ? ಟ್ವಿಟ್ಟರ್ ನಲ್ಲಿ ವಿಮರ್ಶೆ

  By Suneetha
  |

  ಸ್ಯಾಂಡಲ್ ವುಡ್ ಬಾಕ್ಸಾಫೀಸ್ ಸುಲ್ತಾನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 'ವಿರಾಟ್' ಆರ್ಭಟ ಈಗಾಗಲೇ ಇಡೀ ಕರ್ನಾಟಕದಾದ್ಯಂತ ಆರಂಭವಾಗಿದೆ. ಬೆಂಗಳೂರಿನ ಮುಖ್ಯ ಚಿತ್ರಮಂದಿರ 'ನರ್ತಕಿ'ಯಲ್ಲಿ ಅಭಿಮಾನಿಗಳ ಘೋಷಣೆ ಮುಗಿಲು ಮುಟ್ಟಿದೆ.

  ಈ ದಿನ ನಟ ದರ್ಶನ್ ಅವರ ಅಭಿಮಾನಿಗಳ ಪಾಲಿಗೆ ಹಬ್ಬದ ದಿನ ಆಗಿದೆ. ನರ್ತಕಿ ಚಿತ್ರಮಂದಿರದ ಎದುರು ಸಾಕಷ್ಟು ಪ್ರಮಾಣದಲ್ಲಿ ಅಭಿಮಾನಿಗಳು ಜಮಾಯಿಸಿ ದರ್ಶನ್ ಅವರ ಕಟೌಟ್ ಗೆ ಹಾಲಿನ ಅಭಿಷೇಕ ಮಾಡಿ ಪಟಾಕಿ ಸಿಡಿಸಿ ಸಂಭ್ರಮ ಆಚರಣೆ ಮಾಡುತ್ತಿದ್ದಾರೆ.

  ನರ್ತಕಿಯಲ್ಲಿ ಈಗಾಗಲೇ ಎರಡು ಶೋಗಳ ಟಿಕೆಟ್ ಸೋಲ್ಡ್ ಔಟ್ ಆಗಿದೆ. ಬೆಂಗಳೂರಿನ ತಾವರೆಕೆರೆಯ 'ಬಾಲಾಜಿ' ಚಿತ್ರಮಂದಿರದಲ್ಲಿ ಬೆಳ್ಳಂಬೆಳಗ್ಗೆ 6 ಘಂಟೆಗೆ ಶೋ ನಡೆದಿದ್ದು, ದರ್ಶನ್ ಅಭಿಮಾನಿಗಳು ಈಗಾಗಲೇ ಸಿನಿಮಾ ವೀಕ್ಷಿಸುತ್ತಿದ್ದಾರೆ.[ದರ್ಶನ್ ತುಂಬಾ ಒಳ್ಳೆ ಹುಡುಗ ಅಂತ ಊರೆಲ್ಲಾ ಹೇಳ್ತಾರೆ]

  ನಿರ್ದೇಶಕ ಹೆಚ್ ವಾಸು ಆಕ್ಷನ್ ಕಟ್ ಹೇಳಿರುವ ಸಿನಿಮಾಗೆ ನಿರ್ಮಾಪಕ ಸಿ.ಕಲ್ಯಾಣ್ ಅವರು ಬಂಡವಾಳ ಹೂಡಿದ್ದಾರೆ. ಮೂವರು ನಾಯಕಿಯರಾದ ಇಶಾ ಚಾವ್ಲಾ, ಚೈತ್ರ ಚಂದ್ರನಾಥ್ ಮತ್ತು ವಿದಿಶಾ ಶ್ರೀವಾತ್ಸವ್ ಅವರೊಂದಿಗೆ ನಟ ದರ್ಶನ್ ಅವರು ಡ್ಯುಯೆಟ್ ಹಾಡಿದ್ದಾರೆ.[ಚಿತ್ರ ಬಿಡುಗಡೆ ಆದ ಮೇಲೆ ಪೋಸ್ಟ್ ಮಾರ್ಟಂ ಮಾಡಬೇಡಿ: ದರ್ಶನ್]

  ಇನ್ನು ಇಂದು ಬೆಳಗ್ಗೆ ಶೋ ನೋಡಿದ ಅಭಿಮಾನಿಗಳ ಅಭಿಪ್ರಾಯ ಮತ್ತು ದರ್ಶನ್ ಅವರ 'ವಿರಾಟ್' ಆರ್ಭಟ ಟ್ವಿಟ್ಟರ್ ನಲ್ಲಿ ಹೇಗಿದೆ ಎಂಬುದನ್ನು ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ...

  ಅಭಿಮಾನಿಗಳಲ್ಲಿ ದರ್ಶನ್ ಮನವಿ

  ಅಭಿಮಾನಿಗಳಲ್ಲಿ ದರ್ಶನ್ ಮನವಿ

  'ಇಂದು ನನ್ನ 'ವಿರಾಟ್' ಚಿತ್ರ ಬಿಡುಗಡೆಯಾಗಲಿದೆ. ಎಲ್ಲರೂ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ. ಇಂತಿ ನಿಮ್ಮ ದಾಸ ದರ್ಶನ್'. ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಅಭಿಮಾನಿಗಳಿಗೆ ಫೇಸ್ ಬುಕ್ಕ್ ಮತ್ತು ಟ್ವಿಟ್ಟರ್ ನಲ್ಲಿ ಮನವಿ ಮಾಡಿಕೊಂಡಿದ್ದಾರೆ.['ವಿರಾಟ್' ದರ್ಶನಕ್ಕೆ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರು ಗುರು]

  ಅಭಿಮಾನಿ ನವೀನ್ ಗೌಡ

  ಅಭಿಮಾನಿ ನವೀನ್ ಗೌಡ

  'ವಿರಾಟ್' ಸಿನಿಮಾ ಈ ವರ್ಷದ ಬ್ಲಾಕ್ ಬಸ್ಟರ್ ಹಿಟ್ ಚಿತ್ರ ಆಗುತ್ತೆ. ಎಲ್ಲಾ ರೆಕಾರ್ಡ್ಸ್ ಗಳನ್ನು ಬ್ರೇಕ್ ಮಾಡಲು ಅಣ್ಣ ಮತ್ತೆ ವಾಪಸ್ ಬಂದಿದ್ದಾರೆ ಎಂದು ಅಭಿಮಾನಿ ನವೀನ್ ಗೌಡ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  ಅಭಿಮಾನಿ ಪ್ರವೀಣ್ ಮಸನಕಟ್ಟಿ

  ಅಭಿಮಾನಿ ಪ್ರವೀಣ್ ಮಸನಕಟ್ಟಿ

  'ವಿರಾಟ್' ಸಿನಿಮಾ ಸೂಪರ್ ಇದರಲ್ಲಿ ಇಡೀ ಕರ್ನಾಟಕಕ್ಕೆ ಅದ್ಭುತವಾದ ಸಂದೇಶ ಇದೆ. ದರ್ಶನ್ ಅವರ ಆಕ್ಷನ್ ಸಖತ್ತಾಗಿದೆ. ದರ್ಶನ್ ಅವರ ಎಲ್ಲಾ ರೆಕಾರ್ಡ್ ಬ್ರೇಕ್ ಮಾಡುತ್ತೆ ಈ ಸಿನಿಮಾ. ಚಿತ್ರದ ಕಥೆ, ಮೇಕಿಂಗ್ ಎಲ್ಲಾ ಸೂಪರ್, ನಾನು ಇನ್ನೊಮ್ಮೆ ಈ ಸಿನಿಮಾ ನೋಡಲು ತೆರಳುತ್ತೇನೆ. ನಟನೆ ಸೂಪರ್ ಎಂದು ಅಭಿಮಾನಿಯೊಬ್ಬರ ಫಸ್ಟ್ ವಿಮರ್ಶೆ.

  ವಿಮರ್ಶಕ ಶ್ಯಾಮ್ ಪ್ರಸಾದ್

  ಮಧ್ಯಂತರ. ಕಮರ್ಷಿಯಲ್ ಟಚ್ ಸಿನಿಮಾ. ಮೂವರು ಹುಡುಗಿಯರು ಕೊನೆಯ ಹಂತಕ್ಕೆ ಎಂಟ್ರಿ ಆಗುತ್ತಿದ್ದಾರೆ.

  ಸಿನಿಲೋಕ

  ಇಶಾ ಚಾವ್ಲಾ ಅವರದು ಬಬ್ಲಿ ಬಬ್ಲಿ ರೋಲ್. ಸಿನಿಮಾದಲ್ಲಿ ಕಾಮಿಡಿ ತುಂಬಾ ಚೆನ್ನಾಗಿದೆ. ಸಾಧು ಮಹಾರಾಜ್ ಮತ್ತು ಬುಲೆಟ್ ಪ್ರಕಾಶ್ ಅವರ ಜುಗಲ್ ಬಂದಿಯಲ್ಲಿ ಕಾಮಿಡಿ ಅದ್ಭುತವಾಗಿ ಮೂಡಿಬಂದಿದೆ.

  ಬಸವರಾಜ್ ಬಿದರಿ

  ಇದೀಗ 'ವಿರಾಟ್' ಶುರು ಆಗಿದೆ..ಹಾಲಿನ ಅಭಿಷೇಕ ಮುಗಿಯಿತು. ತುಂಬಾ ಜನರು ಗೇಟಿನ ಹೊರಗಡೆ ಉಳಿದಿದ್ದಾರೆ. ನನಗನ್ನಿಸುತ್ತೆ ಇವತ್ತು ಟಿಕೆಟ್ ಸಿಗುವುದು ಕಷ್ಟ. ಭಯಂಕರ ರಶ್ಯೋ ರಶ್ಯು. ಎಂದು ದರ್ಶನ್ ಅಭಿಮಾನಿ ಬಸವರಾಜ್ ಬಿದರಿ ಅವರು ಟ್ವೀಟ್ ಮಾಡಿದ್ದಾರೆ.

  'ವಿರಾಟ್'ಗೆ ಅದ್ಧೂರಿ ಸ್ವಾಗತ

  ದರ್ಶನ್ ಅವರ ಬೃಹತ್ ಕಟೌಟ್ ಗಳನ್ನು ಹಾಕುವ ಮೂಲಕ ಅಭಿಮಾನಿಗಳು 'ವಿರಾಟ್' ಚಿತ್ರಕ್ಕೆ ಬಹಳ ಅದ್ಧೂರಿ ಸ್ವಾಗತ ಮಾಡಿದ್ದಾರೆ.

  'ನರ್ತಕಿ'ಯಲ್ಲಿ ಪ್ರೇಕ್ಷಕರಿಗೆ ಸ್ವಾಗತ

  ದರ್ಶನ್ ಅವರ 'ವಿರಾಟ್' ಸಿನಿಮಾ ಇಂದು ನರ್ತಕಿಯಲ್ಲಿ ತೆರೆ ಕಂಡಿದ್ದು, ಚಿತ್ರಮಂದಿರಕ್ಕೆ ಎಂಟ್ರಿ ಕೊಟ್ಟ ಕೂಡಲೇ 'ವೆಲ್ ಕಮ್' ಎಂದು ಅಭಿಮಾನಿಗಳಿಗೆ ಸ್ವಾಗತ ಕೋರಿದ ಚಿತ್ರಮಂದಿರ.

  'ಡಿ' ಬಾಸ್ ಜಾತ್ರೆ ಶುರು

  ಬಾಕ್ಸಾಫೀಸ್ ಸುಲ್ತಾನ ದರ್ಶನ್ ಅವರ 'ವಿರಾಟ್' ದರ್ಶನ ನೋಡಲು ಅಭಿಮಾನಿಗಳು ಮತ್ತು ಸಿನಿರಸಿಕರು ಚಿತ್ರಮಂದಿರಗಳ ಎದುರಲ್ಲಿ ಜನಜಾತ್ರೆಯನ್ನೇ ಸೃಷ್ಟಿ ಮಾಡಿದ್ದಾರೆ. ಚಿತ್ರದಲ್ಲಿ ಥಿಯೇಟರ್ ಅನ್ನು ಮದುವೆ ಮನೆಯಂತೆ ಸಿಂಗರಿಸಿ ನರ್ತಕಿ ಚಿತ್ರಮಂದಿರದ ಎದುರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿರುವ ಅಭಿಮಾನಿಗಳು.

  ನಟಿ ಶಾನ್ವಿ ಶ್ರೀವಾತ್ಸವ್ ಶುಭಾಶಯ

  'ಮಾಸ್ಟರ್ ಪೀಸ್' ಬೆಡಗಿ ಶಾನ್ವಿ ಶ್ರೀವಾತ್ಸವ್ ಅವರು ದರ್ಶನ್ ಅವರ 'ವಿರಾಟ್' ಚಿತ್ರಕ್ಕೆ ಮತ್ತು ಚಿತ್ರತಂಡಕ್ಕೆ ಗುಡ್ ಲಕ್ ಹೇಳುವ ಮೂಲಕ ಟ್ವಿಟ್ಟರ್ ನಲ್ಲಿ ಶುಭಾಶಯ ಕೋರಿದ್ದಾರೆ.

  ಬಾಲಾಜಿಯಲ್ಲಿ ಮುಂಜಾನೆ ಶೋ

  ಬೆಂಗಳೂರಿನ ತಾವರೆಕೆರೆಯ 'ಬಾಲಾಜಿ' ಚಿತ್ರಮಂದಿರದಲ್ಲಿ ಮುಂಜಾನೆ 6 ಘಂಟೆಗೆ 'ವಿರಾಟ್' ಮೇನಿಯಾ ಶುರು ಆಗಿದೆ.

  ಸಿನಿಲೋಕ

  ದರ್ಶನ್ ಅವರ ಎಂಟ್ರಿ ಸಖತ್ ಕ್ಲಾಸ್ ಲುಕ್ ನಲ್ಲಿದೆ, ಪರ್ಫೆಕ್ಟ್ ಬ್ಯುಸಿನೆಸ್ ಮೆನ್ ಲುಕ್ ನಲ್ಲಿ ದರ್ಶನ್ ಮಿಂಚಿದ್ದಾರೆ ಎಂದು ಸಿನಿಲೋಕ ಡಾಟ್ ಕಾಮ್ ಟ್ವೀಟ್ ಮಾಡಿದ್ದಾರೆ.

  ಸಿನಿಲೋಕ

  ಚಿತ್ರದಲ್ಲಿ ಮೂರು ಮಂದಿ ಲವ್ಲೀ ಲೇಡಿಸ್ (ಇಶಾ ಚಾವ್ಲಾ, ವಿದಿಶಾ ಶ್ರೀವಾತ್ಸವ್ ಮತ್ತು ಚೈತ್ರ ಚಂದ್ರನಾಥ್) ತಮ್ಮ ಕನಸಿನ ಹುಡುಗ ಹೇಗಿರಬೇಕು ಅಂತ ದರ್ಶನ್ ಅವರ ಬಗ್ಗೆ ಕನಸು ಕಾಣುತ್ತಿರುತ್ತಾರೆ.

  ಮಂಡ್ಯದ ದತ್ತು ಮಗ

  ಮಂಡ್ಯದಲ್ಲಿ ಅಭಿಮಾನಿಗಳು ತಯಾರಿಸಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮಾಸ್ ಬ್ಯಾನರ್. ಬ್ಯಾನರ್ ನಲ್ಲಿ 'ಮಂಡ್ಯದ ದತ್ತು ಮಗ' ಹೈಲೈಟ್ ಆಗಿದೆ.

  250 ಚಿತ್ರಮಂದಿರಗಳಲ್ಲಿ 'ವಿರಾಟ್' ದರ್ಶನ

  ಸುಮಾರು 250 ಚಿತ್ರಮಂದಿರಗಳಲ್ಲಿ ದರ್ಶನ್ ಅವರ 'ವಿರಾಟ್' ಸಿನಿಮಾ ಅಭಿಮಾನಿಗಳೆದುರು ಇಂದು ದರ್ಶನವಾಗುತ್ತಿದೆ.

  English summary
  Kannada Movie 'Viraat' directed by H Vasu released today and got overwhelming response all over Karnataka. Darshan, Isha Chawla, Chaitra Chandranath, Vidisha Shrivastav are in the lead role. Here is the first day first show craze, tweets, audience response.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X