For Quick Alerts
  ALLOW NOTIFICATIONS  
  For Daily Alerts

  ವೆಡ್ಡಿಂಗ್ ಗಿಫ್ಟ್: ರಕ್ಷಣೆಗಿರೋ ಕಾನೂನಿನ ಸುತ್ತಾ ಟೀಸರ್ ಪ್ರದಕ್ಷಿಣೆ!

  |

  ರಕ್ಷಣೆಗಾಗಿ ಇರುವ ಕಾನೂನನ್ನು ಹೆಣ್ಣು ಮಕ್ಕಳು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಇತ್ತೀಚೆಗೆ ಸಾಕಷ್ಟು ಕೇಸುಗಳಲ್ಲಿ ಈ ಉದಾಹರಣೆಗಳು ಸಿಕ್ಕಿವೆ. ಆದರೆ ಅದು ಸತ್ಯವೂ ಅಲ್ಲ. ಹಾಗಂತ ಸುಳ್ಳು ಎನ್ನುವ ಹಾಗೂ ಅಲ್ಲ. ಯಾರೋ ಹತ್ತು ಪರ್ಸೆಂಟ್ ಹೆಣ್ಣು ಮಕ್ಕಳಿಂದ ಆಗುವ ದುರುಪಯೋಗದಿಂದಾಗಿ ತೊಂಭತ್ತು ಪರ್ಸೆಂಟ್ ಹೆಣ್ಣು ಮಕ್ಕಳಿಗೆ ತೊಡಕಾಗಬಾರದು, ಅನ್ಯಾಯವಾಗಬಾರದು. ಇಂಥದ್ದೊಂದು ಗಂಭೀರ ವಿಚಾರ ಇಟ್ಟುಕೊಂಡು ವಿಕ್ರಂ ಪ್ರಭು ಗಾಂಧಿನಗರಕ್ಕೆ ಎಂಟ್ರಿಯಾಗಿದ್ದಾರೆ.

  ಹೆಣ್ಣು ಮಕ್ಕಳ ಸುರಕ್ಷತೆ ಎನ್ನುವುದು ಎಲ್ಲಾ ಕಾಲಕ್ಕೂ ಮಹತ್ವ ಪಡೆಯುವಂತದ್ದೇ ಆಗಿದೆ. ಹೀಗಾಗಿಯೇ ಒಂದಷ್ಟು ಕಾನೂನುಗಳು ಬಂದಿರುವುದು. ಅದೇ ವಿಚಾರವನ್ನು 'ವೆಡ್ಡಿಂಗ್ ಗಿಫ್ಟ್' ಮೂಲಕ ಜಾಗೃತಿ ಮೂಡಿಸಲು ಹೊರಟಿದ್ದಾರೆ. ಸದ್ಯ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ಕೋರ್ಟ್ ಕಟಕಟೆಯಲ್ಲಿ ಸುರಕ್ಷತೆಯ ಪ್ರಶ್ನೆ ಎದ್ದಿದೆ.

  4 ವರ್ಷಗಳ ಬಳಿಕ ಡಬ್ಬಿಂಗ್ ಸ್ಟುಡಿಯೋದಲ್ಲಿ ನಟಿ ಪ್ರೇಮಾ: ಪಾತ್ರಕ್ಕಾಗಿ ಏನೆಲ್ಲಾ ಮಾಡಿದ್ರು?4 ವರ್ಷಗಳ ಬಳಿಕ ಡಬ್ಬಿಂಗ್ ಸ್ಟುಡಿಯೋದಲ್ಲಿ ನಟಿ ಪ್ರೇಮಾ: ಪಾತ್ರಕ್ಕಾಗಿ ಏನೆಲ್ಲಾ ಮಾಡಿದ್ರು?

  Kannada Movie Wedding Gift Teaser Looks Promising

  ಸದ್ಯದ ಪೀಳಿಗೆಯಲ್ಲಿ ಹೆಣ್ಣು ಯಾವುದರಲ್ಲೇನು ಕಡಿಮೆ ಇಲ್ಲ. ಮನೆಯನ್ನು ನಿಭಾಯಿಸುತ್ತಾಳೆ. ಮಕ್ಕಳನ್ನು ಸಲಹುತ್ತಾಳೆ, ಹೊರಗಡೆ ದುಡಿಮೆಯನ್ನು ಮಾಡುತ್ತಾಳೆ. ಆದರೆ ಆಕೆ ಸೇಫಾ ಅನ್ನೋ ಪ್ರಶ್ನೆ ಬಂದಾಗ ೧೦೦% ಗ್ಯಾರಂಟಿ ಕೊಡುವುದು ಕಷ್ಟವೇ. ಇದೇ ಪರಿಸ್ಥಿತಿ ಟೀಸರ್ ನಲ್ಲಿ ಅನಾವರಣವಾಗಿದೆ.

  ಅಷ್ಟೇ ಅಲ್ಲ, ಹೆಣ್ಣು ಸುರಕ್ಷತೆಯಾ ಎಂಬ ಪ್ರಶ್ನೆಯ ಜೊತೆಗೆ ಸುರಕ್ಷತೆಗಾಗಿ ಇರುವ ಕಾನೂನನ್ನು ಯಾವುದಕ್ಕೆಲ್ಲಾ ಬಳಸಿಕೊಳ್ಳುತ್ತಿದ್ದಾರೆ ಎಂಬುದನ್ನು ವಾದಿಸಿದ್ದಾರೆ. ಪ್ರೈವಸಿ ಲೈಫ್‌ಗಾಗಿ, ಎಂಜಾಯ್ಮೆಂಟ್‌ಗಾಗಿ, ಇನ್ಯಾವುದೋ ಸಂಬಂಧದಿಂದಾಗಿ ಬಚಾವ್ ಆಗುವ ಕಾರಣಕ್ಕೆ ಈ ಕಾನೂನುಗಳನ್ನು ಉಪಯೋಗಿಸಿಕೊಂಡು ತಪ್ಪಿಲ್ಲದ ಗಂಡನಿಗೆ ಶಿಕ್ಷೆಯನ್ನು ಕೊಡಿಸುತ್ತಿದ್ದಾರೆ. ಇದರಲ್ಲಿ ಪರವಾಗಿ ಅಚ್ಯುತಕುಮಾರ್ ವಾದಿಸಿದರೆ ವಿರೋಧವಾಗಿ ಪ್ರೇಮಾ ವಾದಕ್ಕಿಳಿದಿದ್ದಾರೆ. ಇಷ್ಟೇ ವಾದ-ಪ್ರತಿವಾದ ಎಲ್ಲರ ಗಮನ ಸೆಳೆಯುತ್ತಿರುವಾಗ ಇನ್ನು ಸಿನಿಮಾದಲ್ಲಿ ಎಷ್ಟೆಲ್ಲಾ ವಾದ ನಡೆಯುತ್ತೆ ಎಂಬುದನ್ನು ಊಹೆ ಮಾಡಬಹುದು. ಈ ಸಿನಿಮಾದಲ್ಲಿ ಕೋರ್ಟ್ ದೃಶ್ಯ ಮಜಭೂತವಾಗಿರುತ್ತೆ ಎಂಬುದು ಟೀಸರ್ ಮೂಲಕ ಸಾಬೀತಾಗಿದೆ.

  ಗಟ್ಟಿ ಕಥೆಯೊಂದಿಗೆ ವಿಕ್ರಂ ಪ್ರಭು ಎಂಬ ನಿರ್ದೇಶಕನ ಎಂಟ್ರಿಯಾಗಿದ್ದು, ನಂದೀಶ್ ನಾಣಯ್ಯ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಸೋನುಗೌಡ ನಾಯಕಿ ಪಾತ್ರ ನಿರ್ವಹಿಸಿದ್ದು, ಈ ಪಾತ್ರವನ್ನು ಸಾಕಷ್ಟು ಇಷ್ಟಪಟ್ಟಿರುವುದಾಗಿ ಹೇಳಿಕೊಂಡಿದ್ದಾರೆ.

  English summary
  Kannada Movie Wedding Gift Teaser Looks Promising, Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X