»   » ''ವಾಟ್ಸ್ ಅಪ್ ಲವ್''ಗೆ ಬಿತ್ತು ಕುಂಬಳಕಾಯಿ

''ವಾಟ್ಸ್ ಅಪ್ ಲವ್''ಗೆ ಬಿತ್ತು ಕುಂಬಳಕಾಯಿ

Posted By:
Subscribe to Filmibeat Kannada

ಫೇಸ್ ಬುಕ್ ನಲ್ಲಿ ಪ್ರಣಯ ಪ್ರಸಂಗಗಳನ್ನ ನೀವು ಕೇಳಿರಬಹುದು. ಆದ್ರೀಗ, ಫೇಸ್ ಬುಕ್ ಕೊಂಚ ಔಟ್ ಡೇಟೆಡ್ ಆಯ್ತು ಬಿಡಿ. ಈಗೇನಿದ್ದರೂ, ವಾಟ್ಸ್ ಅಪ್ ಯುಗ.

ಎಲ್ಲರ ಬಾಯಲ್ಲೂ ವಾಟ್ಸ್ ಅಪ್ ಹರಿದಾಡುತ್ತಿರುವುದನ್ನ ನೋಡಿ, 'ವಾಟ್ಸ್ ಅಪ್ ಲವ್' ಅಂತ ಸಿನಿಮಾ ಬೇರೆ ಬರ್ತಾಯಿದೆ. ಸದ್ದಿಲ್ಲದೇ ಚಿತ್ರ ಶುರುವಾಗಿದೆ. ಆಗಲೇ, ಚಿತ್ರೀಕರಣವನ್ನೂ ಮುಗಿಸಿದೆ.

kannada-movie-whatsapp-love-shooting-completes

ಸೂಗೂರು ಸಿನಿ ಕಂಬೈನ್ಸ್ ಲಾಂಛನದಡಿಯಲ್ಲಿ ಕುಮಾರ್, ಜೆ.ಟಿ.ರೆಡ್ಡಿ ನಿರ್ಮಿಸುತ್ತಿರುವ 'ವಾಟ್ಸ್ ಅಪ್ ಲವ್' ಚಿತ್ರಕ್ಕೆ ಇತ್ತೀಚೆಗಷ್ಟೆ ಕುಂಬಳಕಾಯಿ ಒಡೆಯಲಾಯ್ತು.

ಐವತ್ತೊಂದು ದಿವಸಗಳ ಕಾಲ ಮೂರು ಹಂತದಲ್ಲಿ ಬೆಂಗಳೂರು, ಮಡಿಕೇರಿ, ಕೋಲಾರ ಸುತ್ತಮುತ್ತ ಚಿತ್ರೀಕರಣ ನಡೆಯಿತು. ಚಿತ್ರಕ್ಕೆ ಈ ತಿಂಗಳ ಕೊನೆಯಲ್ಲಿ ಮಾತಿನ ಮರುಲೇಪನ ಕಾರ್ಯ ಆರಂಭವಾಗಲಿದ್ದು, ಆಗಸ್ಟ್ ನಲ್ಲಿ 'ವಾಟ್ಸ್ ಅಪ್ ಲವ್' ತೆರೆಮೇಲೆ ಬರಲಿದೆ.

ಯುವ ಪ್ರತಿಭೆ ಜೀವ, ಐಶ್ವರ್ಯ, ಶ್ರಾವ್ಯ, ಮಮತಾ, ನೀನಾಸಂ ಅಶ್ವಥ್ ಸೇರಿದಂತೆ ಹಲವರು ತಾರಾಗಣದಲ್ಲಿರುವ 'ವಾಟ್ಸ್ ಅಪ್ ಲವ್' ಚಿತ್ರಕ್ಕೆ ಕಥೆ-ಚಿತ್ರಕಥೆ ರಚಿಸಿ ನಿರ್ದೇಶನ ಮಾಡಿರುವುದು ರಾಮ್.

English summary
New Comer Jeeva and Aishwarya starrer 'Whatsapp Love' shooting has been completed. The movie is directed by Ram.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada