twitter
    For Quick Alerts
    ALLOW NOTIFICATIONS  
    For Daily Alerts

    ಅರ್ಧ ವರ್ಷ ಮುಗಿದೇ ಹೋಯ್ತು: 'ಜೇಮ್ಸ್', 'ಕೆಜಿಎಫ್ 2', '777 ಚಾರ್ಲಿ' ಜೊತೆ ಗೆದ್ದೋರು ಯಾರು?!

    |

    2022 ಕನ್ನಡ ಚಿತ್ರರಂಗ ಎಲ್ಲಾ ಕಡೆ ಸದ್ದು ಮಾಡುತ್ತಿದೆ. ಕನ್ನಡದ ಸಿನಿಮಾಗಳು ವಿಶ್ವ ಮಟ್ಟದಲ್ಲಿ ಹೆಸರು ಮಾಡುತ್ತಿವೆ. ಈಗತಾನೇ ಅರ್ಧ ವರ್ಷ ಮುಗಿದಿದ್ದು, ಈ ಆರು ತಿಂಗಳಲ್ಲಿ ಸ್ಯಾಂಡಲ್‌ವುಡ್ ಬೇರೆ ಲೆವೆಲ್‌ಗೆ ಹೋಗಿದೆ. ಕನ್ನಡದ ಮೂರು ಮೂರು ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸಿಕ್ಕಾ ಪಟ್ಟೆ ಸದ್ದು ಮಾಡುತ್ತಿವೆ.

    ಇನ್ನು ಮುಂದಿನ ಆರು ತಿಂಗಳಲ್ಲಿ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡುವುದಕ್ಕೆ ಇನ್ನೊಂದಿಷ್ಟು ಸಿನಿಮಾಗಳು ಕಾದು ಕುಳಿತಿವೆ. ಆದರೆ, ಮೊದಲಾರ್ಧದಲ್ಲಿ ಸ್ಯಾಂಡಲ್‌ವುಡ್‌ ಸಿನಿಮಾ ಎಷ್ಟು ಹೆಸರು ಮಾಡಿವೆಯೋ? ಅದಕ್ಕಿಂತ ಹೆಚ್ಚು ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿವೆ.

    ದಾಖಲೆ ಬರೆದ 'ಕೆಜಿಎಫ್ 2' ಸಿನಿಮಾ ಫೈನಲ್ ಬಾಕ್ಸಾಫೀಸ್‌ ಕಲೆಕ್ಷನ್ ರಿಪೋರ್ಟ್ ಎಷ್ಟು?ದಾಖಲೆ ಬರೆದ 'ಕೆಜಿಎಫ್ 2' ಸಿನಿಮಾ ಫೈನಲ್ ಬಾಕ್ಸಾಫೀಸ್‌ ಕಲೆಕ್ಷನ್ ರಿಪೋರ್ಟ್ ಎಷ್ಟು?

    ಒಂದ್ಕಡೆ ಬಿಗ್ ಬಜೆಟ್ ಸಿನಿಮಾಗಳು. ಇನ್ನೊಂದ್ಕಡೆ ಸ್ಮಾಲ್ ಬಜೆಟ್ ಸಿನಿಮಾಗಳು ಎರಡೂ ಪ್ರಕಾರದ ಸಿನಿಮಾಗಳು ರಿಲೀಸ್ ಆಗಿವೆ. ಇವುಗಳಲ್ಲಿ ಕೆಲವು ಸೋತಿವೆ. ಮತ್ತೆ ಕೆಲವು ಗೆದ್ದಿವೆ. ಹಾಗಿದ್ದರೆ, 2022ರ ಫಸ್ಟ್ ಹಾಫ್‌ ರಿಪೋರ್ಟ್ ಹೇಗಿದೆ? ಅನ್ನುವುದನ್ನು ತಿಳಿಯಲು ಮುಂದೆ ಓದಿ.

    ಸ್ಯಾಂಡಲ್‌ವುಡ್ ಹೇಗಿದೆ ಫಸ್ಟ್ ಹಾಫ್ ರಿಪೋರ್ಟ್?

    ಸ್ಯಾಂಡಲ್‌ವುಡ್ ಹೇಗಿದೆ ಫಸ್ಟ್ ಹಾಫ್ ರಿಪೋರ್ಟ್?

    2022ರಲ್ಲಿ ಕನ್ನಡದಲ್ಲಿ ಅದ್ಭುತ ಸಿನಿಮಾಗಳು ಬಿಡುಗಡೆಯಾಗಿವೆ. ಇವುಗಳಲ್ಲಿ ಕೆಲವು ಸಿನಿಮಾ ವಿಶ್ವ ಮಟ್ಟದಲ್ಲಿ ಸದ್ದು ಮಾಡುತ್ತಿವೆ. 'ಜೇಮ್ಸ್', 'ಕೆಜಿಎಫ್ 2' ಹಾಗೂ '777 ಚಾರ್ಲಿ' ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಬೇಜಾನ್ ಸದ್ದು ಮಾಡುವೆ. ಈ ನಡುವೆ ಸ್ಮಾಲ್ ಬಜೆಟ್ ಸಿನಿಮಾಗಳೂ ಕೂಡ ಸಿನಿಪ್ರಿಯರ ಗಮನ ಸೆಳೆದಿವೆ. ಗೆದ್ದಿರುವ ಸಿನಿಮಾಗಳ ಸಂಖ್ಯೆಯಲ್ಲಿ ಕಡಿಮೆ ಇದ್ದರೂ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿದ ಸಿನಿಮಾ ಅಬ್ಬರ ಜೋರಾಗಿದೆ.

    '777 ಚಾರ್ಲಿ' 14ನೇ ದಿನ ಕಲೆಕ್ಷನ್ ಎಷ್ಟು? 75 ಕೋಟಿ ಕ್ಲಬ್‌ಗೆ ಎಂಟ್ರಿ ಕೊಟ್ಟಿದ್ದಾಯ್ತಾ?'777 ಚಾರ್ಲಿ' 14ನೇ ದಿನ ಕಲೆಕ್ಷನ್ ಎಷ್ಟು? 75 ಕೋಟಿ ಕ್ಲಬ್‌ಗೆ ಎಂಟ್ರಿ ಕೊಟ್ಟಿದ್ದಾಯ್ತಾ?

    ಫಸ್ಟ್ ಹಾಫ್‌ನಲ್ಲಿ ಗೆದ್ದ ಸಿನಿಮಾಗಳು

    ಫಸ್ಟ್ ಹಾಫ್‌ನಲ್ಲಿ ಗೆದ್ದ ಸಿನಿಮಾಗಳು

    ಫಸ್ಟ್ ಹಾಫ್‌ನಲ್ಲಿ ಸ್ಯಾಂಡಲ್‌ವುಡ್‌ನ ಹಲವು ಸಿನಿಮಾಗಳು ವಿಶ್ವ ಮಟ್ಟದಲ್ಲಿ ಗಮನ ಸೆಳೆದಿದೆ. ಅದರಲ್ಲಿ ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟಕ್ಕೆ ಹೆಸರು ಮಾಡಿದ್ದು ಮೂರು ಸಿನಿಮಾಗಳು. ಪವರ್‌ಸ್ಟಾರ್ ಪುನೀತ್‌ ರಾಜ್‌ಕುಮಾರ್‌ ಸಿನಿಮಾ 'ಜೇಮ್ಸ್', ಯಶ್ ಸಿನಿಮಾ 'ಕೆಜಿಎಫ್ 2' ಹಾಗೂ ರಕ್ಷಿತ್ ಶೆಟ್ಟಿ ಸಿನಿಮಾ '777 ಚಾರ್ಲಿ'. ಈ ಮೂರು ಪ್ಯಾನ್ ಇಂಡಿಯಾ ಸಿನಿಮಾಗಳೂ ಗೆದ್ದು ಬೀಗಿವೆ. 'ಜೇಮ್ಸ್' 100 ಕೋಟಿ ಕ್ಲಬ್ ಗಳಿಸಿದ್ದರೆ, ಕೆಜಿಎಫ್ 2 ಬಾಕ್ಸಾಫೀಸ್‌ನಲ್ಲಿ 1198 ರಿಂದ 1250 ಕೋಟಿ ರೂ. ಗಳಿಸಿದೆ ಎಂದು ಅಂದಾಜಿಸಲಾಗಿದೆ. ಇನ್ನೊಂದು ಕಡೆ '777 ಚಾರ್ಲಿ' ಕಲೆಕ್ಷನ್ 90 ಕೋಟಿ ಸಮೀಪದಲ್ಲಿದೆ ಎನ್ನಲಾಗಿದೆ.

    'ಲವ್ ಮಾಕ್ಟೇಲ್ 2' ಸೂಪರ್ ಸಕ್ಸಸ್

    'ಲವ್ ಮಾಕ್ಟೇಲ್ 2' ಸೂಪರ್ ಸಕ್ಸಸ್

    ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ನಾಗರಾಜ್ ಕಾಂಬಿನೇಷನ್‌ನ ಮತ್ತೊಂದು ಸಿನಿಮಾ 'ಲವ್ ಮಾಕ್ಟೇಲ್ 2' ಈ ವರ್ಷ ಕನ್ನಡಕ್ಕೆ ಸಿಕ್ಕ ಮೊದಲ ಗೆಲುವು. ವರ್ಷ ಆರಂಭದಲ್ಲಿಯೇ 'ಲವ್ ಮಾಕ್ಟೇಲ್ 2' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಕೋವಿಡ್ ಬಳಿಕ ಸ್ಮಾಲ್ ಬಜೆಟ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ 20 ಕೋಟಿಗೂ ಅಧಿಕ ಗಳಿಕೆ ಕಂಡಿತ್ತು. 'ಜೇಮ್ಸ್', 'ಕೆಜಿಎಫ್ 2', '777 ಚಾರ್ಲಿ' ಬಿಟ್ಟರೆ ಅತೀ ಹೆಚ್ಚು ಗಳಿಕೆ ಕಂಡಿದ್ದು ಇದೇ ಸಿನಿಮಾ.

    ಪುನೀತ್ ಯಾರಿಗೂ ಫೋನ್ ಮಾಡುತ್ತಿರಲಿಲ್ಲ, 'ಕಾಲ್' ಮೆಸೇಜ್ ಕಳಿಸ್ತಿದ್ರು ಯಾಕೆ?ಪುನೀತ್ ಯಾರಿಗೂ ಫೋನ್ ಮಾಡುತ್ತಿರಲಿಲ್ಲ, 'ಕಾಲ್' ಮೆಸೇಜ್ ಕಳಿಸ್ತಿದ್ರು ಯಾಕೆ?

    ಗೆದ್ದಿದ್ದಕ್ಕಿಂತ ಸೋತ ಸಿನಿಮಾಗಳೇ ಹೆಚ್ಚು

    ಗೆದ್ದಿದ್ದಕ್ಕಿಂತ ಸೋತ ಸಿನಿಮಾಗಳೇ ಹೆಚ್ಚು

    2022ನಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ಸುಮಾರು 50ಕ್ಕೂ ಅಧಿಕ ಸಿನಿಮಾಗಳು ತೆರೆಕಂಡಿವೆ. ಇವುಗಳಲ್ಲಿ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿದ್ದು ನಾಲ್ಕು ಸಿನಿಮಾಗಳು. ಇವುಗಳನ್ನು ಹೊರತಾಗಿಯೂ ಕೆಲವು ಸಿನಿಮಾಗಳು ಪ್ರೇಕ್ಷಕರ ಗಮನ ಸೆಳೆದಿದ್ದವು. 'ಫ್ಯಾಮಿಲಿ ಪ್ಯಾಕ್', 'ಓಲ್ಡ್ ಮಾಂಕ್', 'ತಲೆದಂಡ', 'ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ', 'ಅವತಾರ ಪುರುಷ', 'ವ್ಹೀಲ್ ಚೇರ್ ರೋಮಿಯೋ' ಅಂತಹ ಸಿನಿಮಾಗಳು ಸದ್ದು ಮಾಡಿವೆ.

    English summary
    Kannada Movies 2022 Half-Yearly Report: Love Mocktail 2, James, KGF 2, 777 Charlie Top The List, Know More.
    Wednesday, June 29, 2022, 14:25
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X