ಕನ್ನಡ ಕಮರ್ಷಿಯಲ್ ಸಿನೆಮಾ: ಮೇಡ್ ಫಾರ್ ಹಿಂದಿ ಆಡಿಯನ್ಸ್!

ಅಗತ್ಯ ಇರಲಿ ಬಿಡಲಿ, ಸಿನಿಮಾದಲ್ಲಿ ಕಮರ್ಷಿಯಲ್ ಸಿನೆಮಾಗಳಲ್ಲಿ ನಾಲ್ಕೈದು ಫೈಟ್ಸ್, ಅದರಲ್ಲೊಂದು ಬೌನ್ಸಿಂಗ್ ಫೈಟ್ (ಪ್ರತಿ ಹೊಡೆತಕ್ಕೂ ಪುಟಿದೇಳುವ ದೃಶ್ಯಗಳು), ಒಂದು ಐಟಂ ಸಾಂಗ್, ಜತೆಗೆ ಒಂದಷ್ಟು ಡಬಲ್ ಮೀನಿಂಗ್ ಜೋಕ್ಸ್. ಇದೇ ಫಾರ್ಮುಲಾ ಇಟ್ಟುಕೊಂಡು ಇವತ್ತು ಕನ್ನಡದಲ್ಲಿ ಸಾಲು ಸಾಲು ಸಿನೆಮಾಗಳು ತಯಾರಾಗುತ್ತಿವೆ. ಯಾಕೆ?

'ಫಿಲ್ಮಿ ಬೀಟ್ ಕನ್ನಡ' ಇಂತಹದೊಂದು ಪ್ರಶ್ನೆಯನ್ನು ಇಟ್ಟುಕೊಂಡು ಗಾಂಧಿ ನಗರಕ್ಕೆ ಇಳಿದರೆ ಆತಂಕಕಾರಿಯಾದ ಮಾಹಿತಿ ಲಭ್ಯವಾಗಿದೆ.

"ಕನ್ನಡ ಸಿನೆಮಾಗಳಲ್ಲಿ ಹಾಡು, ಫೈಟ್ ಇದ್ದರೂ ಕೂಡ ತೀರಾ ತೆಲಗು ಲೆವೆಲ್‌ಗೆ ಹಾಳಾಗಿ ಹೋಗಿರಲಿಲ್ಲ. ಆದರೆ ಇತ್ತೀಚಿಗೆ ಬೀಸಲು ಆರಂಭಿಸಿರುವ ಡಬ್ಬಂಗ್ ಗಾಳಿ ಗಾಂಧಿನಗರದ ಕಮರ್ಷಿಯಲ್ ಸಿನೆಮಾಗಳ ಹೂರಣವನ್ನೇ ಬದಲಿಸಿಸದೆ,'' ಎನ್ನುತ್ತಾರೆ ಯುವ ನಿರ್ದೇಶಕರೊಬ್ಬರು.

ಕನ್ನಡದ ಅಥವಾ ಸೌತ್ ಇಂಡಿಯಾದ ಸಿನಿಮಾಗಳಲ್ಲಿ ಅಗತ್ಯ ಇಲ್ಲ ಎಂದರೂ ಆಕ್ಷನ್ ಸೀನ್‌ಗಳನ್ನು ಹಾಕುವುದಕ್ಕೆ ಪ್ರಮುಖ ಕಾರಣ ಹಿಂದಿ ಡಬ್ಬಿಂಗ್ ರೈಟ್ಸ್ ಎಂಬುದನ್ನು ಗಾಂಧಿನಗರ ಇವತ್ತು ಅರ್ಥ ಮಾಡಿಕೊಂಡಿದೆ. ಇನ್ನೊಂದು ಅರ್ಥದಲ್ಲಿ ಹೇಳಿವುದಾದರೆ ಇವತ್ತಿನ ಕನ್ನಡ ಕಮರ್ಷಿಯಲ್ ಸಿನೆಮಾಗಳು ಕನ್ನಡ ಪ್ರೇಕ್ಷಕರನ್ನು ಗಮನದಲ್ಲಿ ಇಟ್ಟುಕೊಂಡು ತಯಾರಾಗುವುದಕ್ಕಿಂತ ಯುಪಿ, ಬಿಹಾರ್, ಹರಿಯಾಣ, ರಾಜಸ್ತಾನ್ ಹೀಗೆ ಹಿಂದಿ ಭಾಷಿಕ ರಾಜ್ಯಗಳ ಬಿ ಮತ್ತು ಸಿ ಸೆಂಟರ್ ಸಿನೆಮಾ ಮಂದಿರಗಳಿಗಾಗಿ ತಯಾರಾಗುತ್ತಿದೆ.

ಈ ಕಾರಣಕ್ಕಾಗಿಯೇ ಎಲ್ಲಾ ರಾಜ್ಯದಿಂದ ಹೊರಗೆ ಕುಳಿತ ನಿರ್ಮಾಪಕರು ಕನ್ನಡದಲ್ಲಿ ಇಂತಹ ಕುಲಗಟ್ಟ ಸಿನೆಮಾಗಳನ್ನು ತಯಾರಿ ಮಾಡಿಸಲು ಒತ್ತಡ ಹೇರುತ್ತಿದ್ದಾರೆ.

ಹಿಂದಿ ಮಾತ್ರವಲ್ಲದೆ, ಬೋಜಪುರಿ, ರಾಜಸ್ತಾನಿ, ಗುಜರಾತಿ ಹೀಗೆ ಕೆಲವು ಭಾಷೆಯಲ್ಲಿ ಸಿನಿಮಾ ಡಬ್ ಆಗುತ್ತದೆ. ಉತ್ತರ ಭಾರತದ ಬಿ ಸಿ ಸೆಂಟರ್ ಚಿತ್ರಮಂದಿರಗಳಲ್ಲಿ ಈ ಸಿನಿಮಾಗಳು ರಿಲೀಸ್ ಆಗುತ್ತವೆ. ಟಿವಿಯಲ್ಲಿ ಇಂತಹ ಸಿನಿಮಾಗಳಿಗೆ ಒಳ್ಳೆಯ ಬೇಡಿಕೆ ಇದೆ. ಹೀಗಾಗಿ, ಸಿನಿಮಾದ ಕಥೆಗೆ ಫೈಟ್ಸ್ ಅವಶ್ಯಕತೆ ಇಲ್ಲದಿದ್ದರೂ, ಬ್ಯುಸಿನೆಸ್ ದೃಷ್ಟಿಯಿಂದ ಅದನ್ನು ಹಾಕುತ್ತಾರೆ.

ಹೊಸಬರ ಸಿನಿಮಾ ಆದರೂ ಓಕೆ

ಹೊಸಬರ ಸಿನಿಮಾ ಆದರೂ ಓಕೆ

ಬರೀ ಸ್ಟಾರ್ ಗಳ ಸಿನಿಮಾ ಅಲ್ಲ, ಹೊಸಬರ ಸಿನಿಮಾ ಆದರೂ, ಫೈಟ್ ಇದ್ದರೆ ಹಿಂದಿಗೆ ಡಬ್ಬಿಂಗ್ ಆಗುವ ಹಾದಿ ಸುಗಮ ಆಗುತ್ತದೆ. ಹೊಸಬರ ಟ್ರೇಲರ್ ನೋಡಿಯೇ ಹಿಂದಿಯಿಂದ ಆಫರ್ ಬರುತ್ತದೆ. ಮಿನಿಮಮ್ 30 ರಿಂದ 40 ಲಕ್ಷ ಹಣ ನೀಡಲಾಗುತ್ತದೆ. ಈ ಕಾರಣಕ್ಕೆ ಹೊಸ ನಟರ ಚಿತ್ರಗಳಲ್ಲಿಯೂ ಹೊಡೆದಾಟ ಸಾಮಾನ್ಯ ಆಗಿದೆ.

ನಿರ್ಮಾಪಕರ ಒತ್ತಡ ಜಾಸ್ತಿ ಇದೆ

ನಿರ್ಮಾಪಕರ ಒತ್ತಡ ಜಾಸ್ತಿ ಇದೆ

ಬಂಡವಾಳ ಹಾಕಿರುವ ನಿರ್ಮಾಪಕನ ಕಣ್ಣು ಅದನ್ನು ವಾಪಸ್ ತೆಗೆಯುವುದರ ಮೇಲೆ ಇರುತ್ತದೆ. ಹಿಂದಿಗೆ ಡಬ್ ಆದ್ರೆ, ಬಿಡುಗಡೆಗೆ ಮುಂಚೆಯೇ ನಿರ್ಮಾಪಕ ಒಂದಷ್ಟು ಹಣವನ್ನು ವಾಪಸ್ ತೆಗೆದುಕೊಳ್ಳುತ್ತಾನೆ. ಹಾಗಾಗಿ, ಅನೇಕ ನಿರ್ಮಾಪಕರು, ಫೈಟ್ಸ್ ಸೀನ್, ಐಟಂ ಸಾಂಗ್ ಗಳು ಬೇಕು ಎಂದು ನಿರ್ದೇಶಕರ ಮೇಲೆ ಒತ್ತಡ ಹಾಕುತ್ತಾರೆ.

ಎಲ್ಲ ಚಿತ್ರಗಳು, ಎಲ್ಲ ನಿರ್ದೇಶಕರು ಹಾಗಲ್ಲ

ಎಲ್ಲ ಚಿತ್ರಗಳು, ಎಲ್ಲ ನಿರ್ದೇಶಕರು ಹಾಗಲ್ಲ

ಈ ರೀತಿ ಹಿಂದಿ ಡಬ್ಬಿಂಗ್ ಗಾಗಿಯೇ ಆಕ್ಷನ್ ಸೀನ್ ಇಡುವ ನಿರ್ದೇಶಕರು ಒಂದು ಕಡೆ ಇದ್ದಾರೆ. ಆದರೆ, ಮತ್ತೊಂದು ಕಡೆ ಇದನ್ನು ಬಿಟ್ಟು, ಒಂದು ಒಳ್ಳೆಯ ಸಾಹಸಮಯ ಸಿನಿಮಾ ಮಾಡುವ ನಿರ್ದೇಶಕರೂ ಇದ್ದಾರೆ. ಅಂತಹ ನಿರ್ದೇಶಕರು ಕೂಡ ಹಿಂದಿ ಡಬ್ಬಿಂಗ್ ಗಾಗಿ ಸಿನಿಮಾ ಮಾಡುತ್ತಿದ್ದಾರೆ ಎನ್ನುವ ಹಣೆಪಟ್ಟಿ ಕಟ್ಟಿಕೊಂಡಿದ್ದಾರೆ.

ಆಕ್ಷನ್ ನಿಂದ ಕಥೆ ಹಾಳಾಗಬಾರದು ಅಷ್ಟೇ

ಆಕ್ಷನ್ ನಿಂದ ಕಥೆ ಹಾಳಾಗಬಾರದು ಅಷ್ಟೇ

ಸಿನಿಮಾದಲ್ಲಿ ಆಕ್ಷನ್ ಇರಲಿ. ಆದರೆ, ಅದರಿಂದ ಸಿನಿಮಾದ ಕಥೆ ಹಾಳಾಗಬಾರದು. ಸಿನಿಮಾ ಮಾಡುವುದು ಜನರಿಗಾಗಿ ಹೊರತು, ಹಿಂದಿ ಡಬ್ಬಿಂಗ್ ರೈಟ್ ಗಾಗಿ ಅಲ್ಲ. ಡಬ್ಬಿಂಗ್ ಹಣ ಕೀಳುವ ಆಸೆ ಇಟ್ಟುಕೊಂಡು ಕೆಲವು ಸಿನಿಮಾಗಳು ಹಾಳಾಗುತ್ತಿದೆ. ಆ ರೀತಿ ಆಗಬಾರದು ಎನ್ನುವುದಷ್ಟೇ ನಮ್ಮ ಉದ್ದೇಶ.

More from Filmibeat

English summary
Kannada movies are more demand in hindi dubbing.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X