For Quick Alerts
  ALLOW NOTIFICATIONS  
  For Daily Alerts

  ಸ್ಯಾಂಡಲ್ ವುಡ್ ನ 'ಚೌಚೌ ಬಾತ್' ಸುದ್ದಿಗಳು

  By Bharath Kumar
  |

  ಸ್ಟಾರ್ ನಟರ ಸಿನಿಮಾಗಳು ಬಂದ್ರೆ, ಹೊಸ ಬರ ಚಿತ್ರಗಳು ಸದ್ದಿಲ್ಲದೇ ಪಕ್ಕಕ್ಕೆ ಹೋಗುತ್ತೆ. ಅಲ್ಲೊಂದು ಇಲ್ಲೊಂದು ಸಿನಿಮಾಗಳು ದೊಡ್ಡ ಸಿನಿಮಾಗಳನ್ನ ಮೀರಿಸಿ ಸೌಂಡ್ ಮಾಡುತ್ತೆ.

  ಇದೀಗ, ಕೆಲವು ವಿಭಿನ್ನ ಮತ್ತು ವಿಶೇಷ ಚಿತ್ರಗಳು ತಮ್ಮ ಟೀಸರ್, ಟ್ರೈಲರ್ ಗಳ ಮೂಲಕ ಸ್ಯಾಂಡಲ್ ವುಡ್ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಯೂಟ್ಯೂಬ್ ನಲ್ಲಿ ಜನರನ್ನ ಆಕರ್ಷಿಸುತ್ತಿದೆ.

  'ತ್ರಿಬಾಹು' ಟೀಸರ್ ಗೆ ಬಾಲಿವುಡ್ ಬೌಲ್ಡ್: ಕನ್ನಡದ ಚಿತ್ರಕ್ಕೆ ಭಾರಿ ಬೇಡಿಕೆ

  ಜನವರಿ ತಿಂಗಳಲ್ಲಿ ಬಿಡುಗಡೆಯಾದ ಈ ಚಿತ್ರಗಳ ಟೀಸರ್ ಮತ್ತು ಟ್ರೈಲರ್ ಗಳು ನೋಡುಗರಲ್ಲಿ ಹೊಸ ಭರವಸೆ ಮೂಡಿಸಿದೆ. ಹಾಗಿದ್ರೆ, ಇತ್ತೀಚಿನ ದಿನಗಳಲ್ಲಿ ರಿಲೀಸ್ ಆದ ಯಾವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗುತ್ತಿದೆ ಎಂದು ತಿಳಿಯಲು ಮುಂದೆ ಓದಿ....

  ಸಿಂಪಲ್ ಸುನಿಯ 'ಬಜಾರ್'

  ಸಿಂಪಲ್ ಸುನಿಯ 'ಬಜಾರ್'

  'ಚಮಕ್' ಚಿತ್ರದ ನಂತರ ಸಿಂಪಲ್ ಸುನಿ ನಿರ್ದೇಶನ ಮಾಡುತ್ತಿರುವ ಹೊಸ ಸಿನಿಮಾ 'ಬಜಾರ್'. 'ಬಜಾರ್' ಚಿತ್ರದಲ್ಲಿ ಹೊಸ ನಾಯಕನ ಪರಿಚಯ ಮಾಡುತ್ತಿರುವ ಸುನಿ, ಮೊದಲ ಟೀಸರ್ ನಲ್ಲೇ ಅಬ್ಬರ ಶುರು ಮಾಡಿದ್ದಾರೆ. ಈ ಚಿತ್ರಕ್ಕೆ ಧನ್ವೀರ್ ನಾಯಕ ಹಾಗೂ ಅಧಿತಿ ಪ್ರಭುದೇವ ನಾಯಕಿಯಾಗಿದ್ದಾರೆ.

  ಜಯತೀರ್ಥರ 'ವೆನ್ನಿಲ್ಲಾ'

  ಜಯತೀರ್ಥರ 'ವೆನ್ನಿಲ್ಲಾ'

  'ಬ್ಯೂಟಿಫುಲ್ ಮನಸುಗಳು' ಚಿತ್ರದ ನಂತರ ಜಯತೀರ್ಥ ನಿರ್ದೇಶನ ಮಾಡುತ್ತಿರುವ ಸಿನಿಮಾ 'ವೆನ್ನಿಲ್ಲಾ'. ಇತ್ತೀಗಷ್ಟೇ ಚಿತ್ರದ ಟ್ರೈಲರ್ ಮತ್ತು ಹಾಡುಗಳನ್ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ರಿಲೀಸ್ ಮಾಡಿದ್ದರು. ಇದೊಂದು ಸಸ್ಪೆನ್ಸ್ ಕಮ್ ಲವ್ ಸ್ಟೋರಿಯಾಗಿದ್ದು, ಚಿತ್ರದ ಮೇಲೆ ಭರವಸೆ ಮೂಡಿದೆ. ಅವಿನಾಶ್, ಸ್ವಾತಿ ಕೊಂಡೆ ನಾಯಕ ನಾಯಕಿಯಾಗಿದ್ದು, ರವಿಶಂಕರ್ ಗೌಡ, ಪವನ್ ಸೇರಿದಂತೆ ಹಲವರು ಅಭಿನಯಿಸಿದ್ದಾರೆ.

  ವೆನಿಲ್ಲಾ ಚಿತ್ರಕ್ಕೆ ದರ್ಶನ್ ಬೆಂಬಲ ನೀಡಿರುವ ಹಿಂದಿದೆ ಬಿಗ್ ಸೀಕ್ರೆಟ್

  'ಗುಲ್ಟು' ಟೀಸರ್ 2

  'ಗುಲ್ಟು' ಟೀಸರ್ 2

  ನಟಿ ಸೋನು ಗೌಡ, ಅವಿನಾಶ್, ರಂಗಾಯಣ ರಘು ಅಭಿನಯದ 'ಗುಲ್ಟು' ಚಿತ್ರದ ಎರಡನೇ ಟೀಸರ್ ರಿಲೀಸ್ ಆಗಿದೆ. ಈಗಾಗಲೇ ಮೊದಲ ಟೀಸರ್ ನಿಂದ ಎಲ್ಲರ ಗಮನ ಸೆಳೆದಿದ್ದ ಗುಲ್ಟು, ಹೊಸ ಟೀಸರ್ ನಲ್ಲೂ ಮೋಡಿ ಮಾಡಿದೆ. ಜನಾರ್ಧನ್ ಚಿಕ್ಕಣ್ಣ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ.

  'ಟಗರು' ಬಲಮ

  'ಟಗರು' ಬಲಮ

  ಶಿವರಾಜ್ ಕುಮಾರ್ ಅಭಿನಯದ 'ಟಗರು' ಚಿತ್ರದ ಐದನೇ ಹಾಡು ಬಿಡುಗಡೆಯಾಗಿದೆ. 'ಬಲಮ ಬಲಮ' ಹಾಡಿನ ಲಿರಿಕಲ್ ವಿಡಿಯೋ ತೆರೆಕಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ಟ್ರೆಂಡ್ ಹುಟ್ಟಿಹಾಕಿದೆ. ಜಯಂತ್ ಕಾಯ್ಕಿಣಿ ಈ ಹಾಡಿಗೆ ಸಾಹಿತ್ಯ ಬರೆದಿದ್ದು, ಚರಣ್ ರಾಜ್ ಸಂಗೀತವಿದೆ. ದುನಿಯಾ ಸೂರಿ ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ಧನಂಜಯ್ ಮತ್ತು ವಸಿಷ್ಠ ಸಿಂಹ ಖಳನಾಯಕರಾಗಿ ಅಭಿನಯಿಸಿದ್ದಾರೆ.

  ಅಯ್ಯೋ ರಾಮ

  ಅಯ್ಯೋ ರಾಮ

  ಆರ್.ವಿನೋದ್ ಕುಮಾರ್ ನಿರ್ದೇಶನ ಹಾಗೂ ತ್ರಿವಿಕ್ರಮ ರಘು ನಿರ್ಮಾಣ ಮಾಡಿರುವ ವಿಭಿನ್ನ ಸಿನಿಮಾ 'ಅಯ್ಯೋ ರಾಮ'. ಈ ಚಿತ್ರದ ಟ್ರೈಲರ್ ಈಗ ಬಿಡುಗಡೆಯಾಗಿದೆ. ಟೈಟಲ್ ಅಷ್ಟೇ ಡಿಫರೆಂಟ್ ಆಗಿ ಸಿನಿಮಾ ಕೂಡ ಇರಹಬುದು ಎಂಬ ಕುತೂಹಲವನ್ನ ಟ್ರೈಲರ್ ನಲ್ಲಿ ಗಮನಿಸಬಹುದು. ಸಂದೇಶ್ ಪದ್ಮಾನಾಭನ್, ಪ್ರಿಯಾಂಕಾ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ವಿವೇಕ್ ಚಕ್ರವರ್ತಿ ಸಂಗೀತ ಚಿತ್ರಕ್ಕಿದೆ.

  English summary
  kannada actor shiva rajkumar starrer 'tagaru' movie's balma song has released. and kannada movie gultoo, ayoo rama, vennila, and bazaar movie teasers also get good respons from kannada audience.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X