»   » ಈ ವಾರ (ನ.16) ಬಾಕ್ಸಾಫೀಸಲ್ಲಿ ತ್ರಿಕೋನ ಸ್ಪರ್ಧೆ

ಈ ವಾರ (ನ.16) ಬಾಕ್ಸಾಫೀಸಲ್ಲಿ ತ್ರಿಕೋನ ಸ್ಪರ್ಧೆ

Posted By:
Subscribe to Filmibeat Kannada

ಕಳೆದ ಕೆಲ ವಾರಗಳಿಂದ ಕನ್ನಡ ಚಿತ್ರಗಳ ನಡುವೆ ಬಿಗ್ ಫೈಟ್ ಇಲ್ಲದಿದ್ದರೂ ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಮೂರು ಕನ್ನಡ ಚಿತ್ರಗಳು ನ.16ರಂದು ತೆರೆಕಾಣುತ್ತಿವೆ. ಈ ಚಿತ್ರಗಳಲ್ಲಿ ಒಂಚೂರು ಕುತೂಹಲ ಮೂಡಿಸಿರುವ ಜಗ್ಗೇಶ್ ಪ್ರಥಮ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ಗುರು' ಚಿತ್ರ.

ಜಗ್ಗೇಶ್ ಅವರು ಈಗಾಗಲೆ ತಮ್ಮ ಅಮೋಘ ಅಭಿನಯದಿಂದ ಚಿತ್ರರಸಿಕರ ಮನ ಗೆದ್ದಿದ್ದಾರೆ. ಈಗ ಅವರ ನಿರ್ದೇಶನಲ್ಲಿ ಬಿಡುಗಡೆಯಾಗುತ್ತಿರುವ ಗುರು ಚಿತ್ರವೂ ಪ್ರೇಕ್ಷಕರಿಗೆ ಇಷ್ಟವಾಗಬಹುದು. ಗುರುರಾಜ ಫಿಲಂಸ್ ಲಾಂಛನದಲ್ಲಿ ಜಗ್ಗೇಶ್ ಹಾಗೂ ಪರಿಮಳಾ ಜಗ್ಗೇಶ್ ಅವರು ನಿರ್ಮಿಸಿರುವ ಈ ಚಿತ್ರದ ನಾಯಕರಾಗಿ ಗುರುರಾಜ್ ಅಭಿನಯಿಸಿದ್ದಾರೆ.

ಯತಿರಾಜ್, ರಶ್ಮಿಗೌತಮ್, ಗೌತಮಿ, ಶ್ರೀನಿವಾಸಮೂರ್ತಿ, ಶೋಭರಾಜ್, ಕಿಲ್ಲರ್ ವೆಂಕಟೇಶ್, ಶಂಕರ್ ಪಾಟೀಲ್, ಶೈಲಶ್ರೀ, ಅಭಿಜಿತ್, ಜೀವನ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಅಪ್ಪ ನಿರ್ದೇಶಿಸಿರುವ ಚಿತ್ರದಲ್ಲಿ ಪುತ್ರರಾದ ಗುರುರಾಜ್ ಹಾಗೂ ಯತಿರಾಜ್ ಅಭಿನಯಿಸಿರುವುದು ವಿಶೇಷ.

ವಿನಯಚಂದ್ರ ಸಂಗೀತ ನೀಡಿರುವ ಈ ಚಿತ್ರಕ್ಕೆ ರಮೇಶ್ ಬಾಬು ಅವರ ಛಾಯಾಗ್ರಹಣವಿದೆ. ಕೆ.ಎಂ.ಪ್ರಕಾಶ್ ಸಂಕಲನ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ, ಟಿ.ಎ.ಆನಂದ್ ಸಹ ನಿರ್ದೇಶನ ಹಾಗೂ ರವಿಶಂಕರ್ ಅವರ ನಿರ್ಮಾಣ ನಿರ್ವಹಣೆ ಈ ಚಿತ್ರಕ್ಕಿದೆ.

ಒಲವಿನ ಓಲೆ: ಜಗ್ಗೇಶ್ ಅವರ ಗುರು ಚಿತ್ರದ ಜೊತೆಗೆ ಮತ್ತೆರಡು ಚಿತ್ರಗಳು ಒಲವಿನ ಓಲೆ ಹಾಗೂ ಬಣ್ಣದ ಕೊಡೆ. ಆನೇಕಲ್ ಬಾಲರಾಜ್ ಅರ್ಪಿಸುವ, ಮಮತಾವೆಂಕಟೇಶ್ ಅವರು ನಿರ್ಮಿಸಿರುವ 'ಒಲವಿನ ಓಲೆ' ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಬೆಂಗಳೂರುಬಂದ್, ಮೊಂಡ ಚಿತ್ರಗಳನ್ನು ನಿರ್ದೇಶಿಸಿದ್ದ ಟೆ.ಶಿ.ವೆಂಕಟೇಶ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನವನ್ನೂ ಮಾಡಿದ್ದಾರೆ. ಚಿತ್ರದ ಹಾಡುಗಳನ್ನು ಇವರೇ ರಚಿಸಿದ್ದಾರೆ. ತುಮಕೂರು ಜಿಲ್ಲೆ ಗುಬ್ಬಿಯ ಆಸುಪಾಸಿನ ಮೂವತ್ತ್ಮೂರು ಹಳ್ಳಿಗಳಲ್ಲಿ ಚಿತ್ರಕ್ಕೆ ನಲವತ್ತು ದಿನಗಳ ಚಿತ್ರೀಕರಣ ನಡೆದಿದೆ.

ಯಶೋವರ್ಧನ್ ಸಂಗೀತ ನಿರ್ದೇಶನ, ಮಹಂತೇಶ್ ಮಸ್ಕಿ ಛಾಯಾಗ್ರಹಣವಿರುವ 'ಒಲವಿನ ಓಲೆ'ಗೆ ಬಿ.ಎಸ್.ಕೆಂಪರಾಜ್ ಅವರ ಸಂಕಲನವಿದೆ. ಸಂತೋಷ್ ನಾಯಕರಾಗಿರುವ ಈ ಚಿತ್ರದ ನಾಯಕಿಯಾಗಿ ನೇಹಾಪಟೀಲ್ ನಟಿಸಿದ್ದಾರೆ. ಶಂಕರ್ಅಶ್ವತ್, ಅರುಣಬಾಲರಾಜ್, ಋತು, ರಣಿ, ಜಯಲಕ್ಷ್ಮೀ, ಎಸ್ಕಾರ್ಟ್ ಶ್ರೀನಿವಾಸ್, ಜಯರಾಮ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

ಬಣ್ಣದಕೊಡೆ: ಸುಪ್ರೀಂ ಫಿಲಂಸ್ ಲಾಂಛನದಲ್ಲಿ ಹರೀಶ್ ಬೆಳ್ಳಾಲು ಅವರು ನಿರ್ಮಿಸಿರುವ 'ಬಣ್ಣದಕೊಡೆ' ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಜಿ.ಕೃಷ್ಣ ಬೆಳ್ತಂಗಡಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರದ ತಾರಾಬಳಗದಲ್ಲಿ ಬೇಬಿ ಸುಹಾಸಿನಿ, ಯತಿರಾಜ್, ರೋಹಿತ್ ಕುಮಾರ್ ಕಟೀಲು, ಶರಣ್ಯ, ಮೋಹಿನಿ, ಮಾ.ಚಿರಂಜೀವಿ, ಡಾ.ರಮೇಶ್ ಕಾಮತ್ ಮುಂತಾದವರಿದ್ದಾರೆ.

ವಿಷ್ಣುಪ್ರಸಾದ್ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ನೇವಿಲ್ ಮುಂಬೈ ಸಂಗೀತ ನೀಡಿದ್ದಾರೆ. ಕೆಂಪರಾಜ್ ಸಂಕಲನ, ಸತ್ಯಪ್ರಕಾಶ್ ಕಲಾ ನಿರ್ದೇಶನವಿರುವ 'ಬಣ್ಣದಕೊಡೆ'ಗೆ ಕಪಿಲ್ ಅವರ ನೃತ್ಯ ನಿರ್ದೇಶನವಿದೆ. (ಒನ್ಇಂಡಿಯಾ ಕನ್ನಡ)

English summary
Three Kannada films including actor Jaggesh debut directional 'Guru' and two other 'Olavina Ole' and 'Bannada Kode' are releasing this week (16th November).

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada