»   »  ಜೂನ್ ತಿಂಗಳ ಕನ್ನಡ ಚಿತ್ರಗಳ ಮಾಸಿಕ ವರದಿ

ಜೂನ್ ತಿಂಗಳ ಕನ್ನಡ ಚಿತ್ರಗಳ ಮಾಸಿಕ ವರದಿ

Posted By:
Subscribe to Filmibeat Kannada

2013ರ ಅರ್ಧ ವರ್ಷ ಮುಗಿದಿದೆ. ಕುಂಟುತ್ತಾ, ತೆವಳುತ್ತಾ, ಓಡುತ್ತಾ ಕನ್ನಡ ಚಿತ್ರರಂಗ ಸಾಗುತ್ತಿದೆ. ಈ ವರ್ಷ ಇದುವರೆಗೆ ಕನ್ನಡ ಚಿತ್ರಗಳ ಫರ್ಫಾರ್ಮೆನ್ಸ್ ಅಂತಹ ನಿರಾಶದಾಯಕವಾಗಿಲ್ಲ.

ಭಾರೀ ನಿರೀಕ್ಷೆ ಹುಟ್ಟು ಹಾಕಿದ್ದ ಶಿವರಾಜ್ ಕುಮಾರ್ ಅಭಿನಯದ, ಸೂರಿ ನಿರ್ದೇಶನದ ಕಡ್ಡಿಪುಡಿ ಚಿತ್ರ ಮತ್ತು ಪ್ರೇಮ್, ಶ್ರೀಯಾ ಸರನ್ ಅಭಿನಯದ, ರೂಪಾ ಐಯ್ಯರ್ ನಿರ್ದೇಶನದ ಚಂದ್ರ ಚಿತ್ರ ಜೂನ್ ತಿಂಗಳಲ್ಲಿ ಬಿಡುಗಡೆ ಕಂಡಿತ್ತು.

ಜೂನ್ ತಿಂಗಳಲ್ಲಿ ಒಟ್ಟು 9 ಚಿತ್ರಗಳು ಬಿಡುಗಡೆಯಾದವು. ಅದರಲ್ಲಿ ಯಾವ ಯಾವ ಚಿತ್ರದ ಗಲ್ಲಾಪೆಟ್ಟಿಗೆ ವರದಿ ಹೇಗಿತ್ತು? ಸ್ಲೈಡಿನಲ್ಲಿ (ಇದು ನಿರ್ಮಾಪಕರು ನೀಡುವ ಬಾಕ್ಸ್ ಆಫೀಸ್ ವರದಿ ಆದರಿಸಿ ಬರೆದ ಲೇಖನವಲ್ಲ. ಚಿತ್ರಮಂದಿರದ ಮಾಲೀಕರು ಮತ್ತು ಚಿತ್ರರಂಗದ ಇತರ ಮೂಲಗಳಿಂದ ವರದಿ ಆದರಿಸಿ ಬರೆದ ಲೇಖನವಾಗಿದೆ)

ಕಡ್ಡಿಪುಡಿ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ವೃತ್ತಿ ಜೀವನಕ್ಕೆ ಈ ಚಿತ್ರ ಭಾರೀ ತಿರುವು ನೀಡಬಹುದಾದ ಚಿತ್ರವೆಂದೇ ಬಿಂಬಿಸಲಾಗಿತ್ತು. ಮಾಧ್ಯಮ, ಪತ್ರಿಕೆಗಳಿಂದ ವ್ಯಾಪಕ ಪ್ರಶಂಸೆಗೆ ಒಳಗಾಗಿದ್ದ ಚಿತ್ರ. ನಿರೀಕ್ಷಿತ ಮಟ್ಟದಲ್ಲಿ ಚಿತ್ರ ಭಾರೀ ಯಶಸ್ಸು ಕಾಣದಿದ್ದರೂ ಚಿತ್ರವನ್ನು 'ಹಿಟ್' ಕ್ಯಾಟಗರಿಗೆ ಸೇರಿಸಬಹುದು. ದುನಿಯಾ ಸೂರಿ ನಿರ್ದೇಶನ ಮತ್ತು ಶಿವರಾಜ್ ಕುಮಾರ್ ಅವರ ಅಭಿನಯಕ್ಕೆ ಪ್ರೇಕ್ಷಕರು ಶಹಬ್ಬಾಸ್ ಅಂದಿದ್ದರು.
(ಚಿತ್ರವಿಮರ್ಶೆಗೆ ಇಲ್ಲಿ ಕ್ಲಿಕ್ಕಿಸಿ)

ರಾಧನಗಂಡ

ಕೋಮಲ್ ಕುಮಾರ್, ಪೂರ್ಣ ಪ್ರಮುಖ ಭೂಮಿಕೆಯಲ್ಲಿರುವ ಈ ಚಿತ್ರ ಜೂನ್ 14ರಂದು ಬಿಡುಗಡೆಯಾಯಿತು. ಮುರುಗನ್ ನಿರ್ದೇಶನದ ಈ ಚಿತ್ರ ನಿರೀಕ್ಷಿತ ಯಶಸ್ಸು ಕಾಣಲಿಲ್ಲ.

ಮಹಾನದಿ

ಕೃಷ್ಣಪ್ಪ ಉಪ್ಪೂರು ನಿರ್ದೇಶನದ ಈ ಚಿತ್ರ ಜೂನ್ 14ರಂದು ಬಿಡುಗಡೆಯಾಯಿತು. ಸಂಜನಾ, ದಿಲೀಪ್ ಪ್ರಮುಖ ತಾರಾಗಣದಲ್ಲಿರುವ ಈ ಚಿತ್ರದಲ್ಲಿ ಸಂಜನಾ ಬೆಸ್ತ ಹುಡುಗಿಯ ಪಾತ್ರದಲ್ಲಿ ಅಭಿನಯಿಸಿದ್ದರು. ಚಿತ್ರ ಬಾಕ್ಸ್ ಆಫೀಸಿನಲ್ಲಿ ಮುಗ್ಗರಿಸಿತು.

ಆಟೋರಾಜ

ಯಶಸ್ಸಿನ ಹುಡುಕಾಟದಲ್ಲಿರುವ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಈ ಚಿತ್ರ ಜೂನ್ 21 ರಂದು ಬಿಡುಗಡೆಯಾಯಿತು. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದರೂ ಉತ್ತರ ಕರ್ನಾಟಕದ ಭಾಗದಲ್ಲಿ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಉದಯ್ ಪ್ರಕಾಶ್ ನಿರ್ದೇಶನದ ಈ ಚಿತ್ರದಲ್ಲಿ ಗಣೇಶ್ ಜೊತೆ ಭಾಮಾ, ದೀಪಿಕಾ ಕಾಮಯ್ಯ ಪ್ರಮುಖ ತಾರಾಗಣದಲ್ಲಿದ್ದಾರೆ.
(ಚಿತ್ರವಿಮರ್ಶೆಗೆ ಇಲ್ಲಿ ಕ್ಲಿಕ್ಕಿಸಿ)

ಗರ್ಭದ ಗುಡಿ

ಓಂ ಸಾಯಿ ಪ್ರಕಾಶ್ ನಿರ್ದೇಶನದ ಈ ಚಿತ್ರದಲ್ಲಿ ಅನು ಪ್ರಭಾಕರ್, ಮೋಹನ್, ರಮೇಶ್ ಭಟ್ ಪ್ರಮುಖ ಭೂಮಿಕೆಯಲ್ಲಿದ್ದಾರೆ. ಚಿತ್ರದ ಗಲ್ಲಾಪೆಟ್ಟಿಗೆ ನಿರಾಶೆ ಮೂಡಿಸಿದೆ.

ಚಂದ್ರ

ರೂಪಾ ಐಯ್ಯರ್ ನಿರ್ದೇಶನದ ಪ್ರೇಮ್, ಶ್ರೀಯಾ ಸರನ್, ಯಶ್ ಅಭಿನಯದ ಚಂದ್ರ ಚಿತ್ರದ ಗಲ್ಲಾಪೆಟ್ಟಿಗೆ ವರದಿ ತೃಪ್ತಿದಾಯಕವಾಗಿದೆ. ಕ್ಲಾಸ್ ಪ್ರೇಕ್ಷಕರನ್ನು ಸೆಳೆಯುವಲ್ಲಿ ಚಿತ್ರ ಯಶಸ್ವಿಯಾಗಿದೆ. ಮಲ್ಟಿಪ್ಲೆಕ್ಸ್ ಗಳಲ್ಲಿ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
(ಚಿತ್ರವಿಮರ್ಶೆಗೆ ಇಲ್ಲಿ ಕ್ಲಿಕ್ಕಿಸಿ)

ನಮ್ ದುನಿಯಾ ನಮ್ ಸ್ಟೈಲ್

ಪ್ರೀತಂ ಗುಬ್ಬಿ ನಿರ್ದೇಶನದ ಈ ಚಿತ್ರ ಜೂನ್ 28ರಂದು ಬಿಡುಗಡೆಯಾಯಿತು. ಲಿಖಿತ್ ಶೆಟ್ಟಿ, ಸೋನಿಯಾ ಗೌಡ, ವಿನಾಯಕ್ ಜೋಷಿ ಪ್ರಮುಖ ತಾರಾಗಣದಲ್ಲಿರುವ ಈ ಚಿತ್ರದ ಕಲೆಕ್ಷನ್ ತುಂಬಾ ತೃಪ್ತಿದಾಯಕವಾಗಿಲ್ಲ.
(ಚಿತ್ರವಿಮರ್ಶೆಗೆ ಇಲ್ಲಿ ಕ್ಲಿಕ್ಕಿಸಿ)

ಬಿಡಲಾರೆ ಎಂದೂ ನಿನ್ನ

ಉಮೇಶ್ ಬಾದರದಿನ್ನಿ ನಿರ್ದೇಶನದ ಈ ಚಿತ್ರದಲ್ಲಿ ನವೀನ್ ಕೃಷ್ಣ, ಸ್ವಾತಿ ಪ್ರಮುಖ ಭೂಮಿಕೆಯಲ್ಲಿದ್ದಾರೆ. ಚಿತ್ರದ ಮೊದಲವಾರದ ಗಳಿಕೆ ಆಶಾದಾಯವಾದ ಬಗ್ಗೆ ವರದಿಯಿಲ್ಲ.

ಸೈಕಲ್

ಅಗ್ನಿ ನಿರ್ದೇಶನದ ಸೈಕಲ್ ಚಿತ್ರದ ಪ್ರಮುಖ ತಾರಾಗಣದಲ್ಲಿ ಅಗ್ನಿ, ಹರ್ಷಿಕಾ ಪೂಣಚ್ಚ, ಲಹರಿ ವೇಲು ಪ್ರಮುಖ ತಾರಾಗಣದಲ್ಲಿರುವ ಈ ಚಿತ್ರದ ಮೊದಲ ವಾರದ ಗಳಿಗೆ ತೃಪ್ತಿದಾಯಕವಾಗಿಲ್ಲ.

English summary
Kannada movies overall June month performance. Total Nine films released during June month.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada