»   » ದ.ಭಾರತ:ಸ್ಪಷ್ಟ ಮೇಲುಗೈ ಸಾಧಿಸಿದ ಕನ್ನಡ ಚಿತ್ರರಂಗ

ದ.ಭಾರತ:ಸ್ಪಷ್ಟ ಮೇಲುಗೈ ಸಾಧಿಸಿದ ಕನ್ನಡ ಚಿತ್ರರಂಗ

Posted By:
Subscribe to Filmibeat Kannada

ಕನ್ನಡ ಚಿತ್ರಗಳು ಗುಣಮಟ್ಟದಿಂದ ಕೂಡಿರುವುದಿಲ್ಲ, ಬರೀ ಮಚ್ಚು ಲಾಂಗ್, ರಿಮೇಕ್ ಚಿತ್ರಗಳೇ ಬರುತ್ತಿದೆ ಎಂದು ಆಡಿಕೊಳ್ಳುತ್ತಿರುವವರ ಬಾಯಿ ಮುಚ್ಚಿಸುವಂತಹ ಒಂದು analysis ಇಲ್ಲಿದೆ ನೋಡಿ.

ಒಂದು ಕಾಲದಲ್ಲಿ ಇಡೀ ಭಾರತೀಯ ಚಿತ್ರರಂಗದಲ್ಲಿ ಕನ್ನಡ ಚಿತ್ರಗಳು ಆಟಕ್ಕೂ ಇಲ್ಲ, ಲೆಕ್ಕಕ್ಕೂ ಇಲ್ಲದಂತಿತ್ತು, ಹಿಂದಿ ಚಿತ್ರಗಳದ್ದೇ ಕಾರುಬಾರು. ಇನ್ನು ದಕ್ಷಿಣಭಾರತದ ಚಿತ್ರೋದ್ಯಮ ಎಂದರೆ ತಮಿಳರದ್ದೇ ಸ್ವತ್ತು ಎನ್ನುವಂತಿತ್ತು.

ನಮ್ಮವರಿಂದಲೂ ಸೇರಿ ಎಲ್ಲರಿಂದಲೂ ಕಡೆಗಣಿಸಲ್ಪಡುತ್ತಿದ್ದ ಕನ್ನಡ ಚಿತ್ರಗಳು ಕಳೆದ ಎರಡು ಮೂರು ವರ್ಷಗಳಿಂದ ಸಾಕಷ್ಟು ಸುಧಾರಣೆ ಕಂಡಿದೆ. ಬೇಕಾಬಿಟ್ಟಿ ಚಿತ್ರ ಬಿಡುಗಡೆಯಾಗುವುದು ಕಮ್ಮಿಯಾಗಿದೆ, ಚಿತ್ರಗಳ ಗುಣಮಟ್ಟ ಎಲ್ಲರೂ ಮೂಗಿಗೆ ಬೆರಳು ಇಟ್ಟುಕೊಳ್ಳುವಂತೆ ಮೇಲ್ದರ್ಜೆಗೇರಿದೆ.

ದಕ್ಷಿಣ ಭಾರತದ ನಾಲ್ಕು ಚಿತ್ರರಂಗಗಳಾದ ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಚಿತ್ರಗಳ ಪೈಕಿ ರಿಮೇಕ್ ಚಿತ್ರಗಳ ಹಾವಳಿ, ಪರಭಾಷಾ ಚಿತ್ರಗಳ ಬಿಡುಗಡೆ, ಥಿಯೇಟರ್ ಸಮಸ್ಯೆಗಳ ನಡುವೆಯೂ ಕನ್ನಡ ಚಿತ್ರಗಳು ಉಳಿದ ಮೂರು ಭಾಷೆಯ ಚಿತ್ರಗಳಿಗಿಂತ ಮೇಲುಗೈ ಸಾಧಿಸಿದೆ.

ಒಂದು ಕಾಲದಲ್ಲಿ ಮಲಯಾಳಂ ಚಿತ್ರಗಳು ಅತ್ಯಂತ ಉತ್ತಮ ಕಥೆ, ಚಿತ್ರಕಥೆಗಳನ್ನು ಹೊಂದಿರುವ ಚಿತ್ರಗಳೆಂದು ಬಿರುದು ಪಡೆದಿತ್ತು. ಆದರೆ ಕಳೆದ ಮೂರು ನಾಲ್ಕು ವರ್ಷಗಳಿಂದ ಮಲಯಾಳಂ ಚಿತ್ರರಂಗ ಭಾರೀ ನಷ್ಟವನ್ನು ಅನುಭವಿಸುತ್ತಿದೆ.

ಕಳೆದ ವರ್ಷ ತಮಿಳು ಚಿತ್ರಗಳು ನಿರೀಕ್ಷಿತ ಫಲಿತಾಂಶ ನೀಡಲಿಲ್ಲ. ದೊಡ್ಡ ದೊಡ್ಡ ಬಜೆಟಿನ ಚಿತ್ರಗಳು ನೆಲಕಚ್ಚಿದವು. ಕನ್ನಡ ಚಿತ್ರಗಳ ನಂತರ ತೆಲುಗು ಚಿತ್ರರಂಗದ ಫರ್ಫಾರ್ಮೆನ್ಸ್ ಕೂಡಾ ಕಳೆದ ವರ್ಷ ಆಶಾದಾಯಕವಾಗಿತ್ತು.

ಈ analysis ಅನ್ನು ಕಳೆದ ವರ್ಷ ನೆಲಕಚ್ಚಿದ ಚಿತ್ರಗಳನ್ನು ಒಟ್ಟು ಬಿಡುಗಡೆಯಾದ ಚಿತ್ರಗಳಿಂದ ಭಾಗಿಸಿ ಅದನ್ನು ನೂರರಿಂದ ಗುಣಿಸಿದಾಗ ಬರುವ ಶೇಕಡವಾರು ಲೆಕ್ಕಾಚಾರದಿಂದ ಬರೆಯಲಾಗಿದೆ.

ಕನ್ನಡ ಸೇರಿ ನಾಲ್ಕು ಭಾಷೆಗಳ 2012ರ performance ಅನ್ನು ಸ್ಲೈಡ್ ನಲ್ಲಿ ಕೊಡಲಾಗಿದೆ.

ಕನ್ನಡ ಚಿತ್ರಗಳು

ಒಟ್ಟು 2012ರಲ್ಲಿ 93 ಚಿತ್ರಗಳು ಬಿಡುಗಡೆಯಾಗಿದ್ದವು. ಕಳೆದ ವರ್ಷಕ್ಕೆ ಹೋಲಿಸಿದರೆ (105) ಬಿಡುಗಡೆಯಾದ ಚಿತ್ರಗಳ ಸಂಖ್ಯೆಯಲ್ಲಿ ಇಳಿಮುಖವಾಗಿದೆ.

ಕನ್ನಡ ಚಿತ್ರಗಳು

ಒಟ್ಟು ಬಿಡುಗಡೆಯಾದ ಚಿತ್ರಗಳು: 92
ಬ್ಲಾಕ್ ಬಸ್ಟರ್ ಚಿತ್ರ : 1
ಸೂಪರ್ ಹಿಟ್ ಚಿತ್ರ : 5
ಹಿಟ್ ಚಿತ್ರಗಳು : 10
ಎವರೇಜ್ ಚಿತ್ರಗಳು: 16
ಫ್ಲಾಪ್ ಚಿತ್ರಗಳು: 60
% - 65 (ಫ್ಲಾಪ್)

ಮಲಯಾಳಂ ಚಿತ್ರಗಳು

ಒಟ್ಟು ಬಿಡುಗಡೆಯಾದ ಚಿತ್ರಗಳು: 127
ಬ್ಲಾಕ್ ಬಸ್ಟರ್ ಚಿತ್ರ : 4
ಸೂಪರ್ ಹಿಟ್ ಚಿತ್ರ : 5
ಹಿಟ್ ಚಿತ್ರಗಳು : 6
ಎವರೇಜ್ ಚಿತ್ರಗಳು: 6
ಫ್ಲಾಪ್ ಚಿತ್ರಗಳು: 106
% - 83 (ಫ್ಲಾಪ್)

ತಮಿಳು ಚಿತ್ರಗಳು

ಒಟ್ಟು ಬಿಡುಗಡೆಯಾದ ಚಿತ್ರಗಳು: 112
ಬ್ಲಾಕ್ ಬಸ್ಟರ್ ಚಿತ್ರ : 2
ಸೂಪರ್ ಹಿಟ್ ಚಿತ್ರ : 6
ಹಿಟ್ ಚಿತ್ರಗಳು : 3
ಎವರೇಜ್ ಚಿತ್ರಗಳು: 13
ಫ್ಲಾಪ್ ಚಿತ್ರಗಳು: 88
% - 79 (ಫ್ಲಾಪ್)

ತೆಲುಗು ಚಿತ್ರಗಳು

ಒಟ್ಟು ಬಿಡುಗಡೆಯಾದ ಚಿತ್ರಗಳು: 166 (ಡಬ್ ಆದ ಚಿತ್ರ 70 ಸೇರಿ)
ಬ್ಲಾಕ್ ಬಸ್ಟರ್ ಚಿತ್ರ : 11
ಸೂಪರ್ ಹಿಟ್ ಚಿತ್ರ : 10
ಹಿಟ್ ಚಿತ್ರಗಳು : 9
ಎವರೇಜ್ ಚಿತ್ರಗಳು: 18
ಫ್ಲಾಪ್ ಚಿತ್ರಗಳು: 118
% - 71 (ಫ್ಲಾಪ್)

English summary
Kannada movies performance is better than other three languages movies in South India in the year 2012.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada