»   » ಮೊದಲ 2 ತಿಂಗಳ ಕನ್ನಡ ಚಿತ್ರಗಳ ರಿಪೋರ್ಟ್ ಕಾರ್ಡ್

ಮೊದಲ 2 ತಿಂಗಳ ಕನ್ನಡ ಚಿತ್ರಗಳ ರಿಪೋರ್ಟ್ ಕಾರ್ಡ್

Posted By:
Subscribe to Filmibeat Kannada

ಜನವರಿ ಮತ್ತು ಫೆಬ್ರವರಿ 2013 ಈ ಎರಡು ತಿಂಗಳಲ್ಲಿ ಒಟ್ಟು ಬಿಡುಗಡೆಯಾದ ಚಿತ್ರಗಳೆಷ್ಟು? ಅದರಲ್ಲಿ ನಿರ್ಮಾಪಕನಿಗೆ ಮತ್ತು ಹಂಚಿಕೆದಾರರಿಗೆ ಲಾಭ ತಂದು ಕೊಟ್ಟ ಚಿತ್ರಗಳಾವುವು? ದಯನೀಯವಾಗಿ ಸೋಲುಂಡ ಚಿತ್ರಗಳಾವುವು?

ಕಳೆದ ಎರಡು ವರ್ಷಗಳ ಕನ್ನಡ ಚಿತ್ರರಂಗದ ಪ್ರೊಗ್ರೆಸ್ ರಿಪೋರ್ಟ್ ಚೆನ್ನಾಗಿರುವುದರಿಂದ ಕನ್ನಡ ಚಿತ್ರದ ಬಗ್ಗೆ ಇತರರಿಗೆ ಇದ್ದ ಅಸಡ್ಡೆ ಪೂರ್ತಿ ಇಲ್ಲದಿದ್ದರೂ ಕೊಂಚ ಮಟ್ಟಿಗೆ ಕಮ್ಮಿಯಾಗಿರುವುದಂತೂ ಹೌದು.

ಜನವರಿ ತಿಂಗಳಲ್ಲಿ ಆರು ಚಿತ್ರಗಳು ಮತ್ತು ಫೆಬ್ರವರಿಯಲ್ಲಿ ಎಂಟು ಚಿತ್ರಗಳು ಬಿಡುಗಡೆಗೊಂಡಿವೆ. ಈ ಎರಡು ತಿಂಗಳ ಅವಧಿಯಲ್ಲಿ ಬಿಡುಗಡೆಯಾದ ಒಟ್ಟು 14 ಚಿತ್ರಗಳಲ್ಲಿ ಗೆದ್ದ ಚಿತ್ರಯಾವುದು? ಪಾಚಿಕೊಂಡ ಚಿತ್ರಗಳಾವುವು? ನೋಡೋಣ

ಜನವರಿಯಲ್ಲಿ ಬಿಡುಗಡೆಯಾದ ಆರು ಚಿತ್ರಗಳಲ್ಲಿ ಪ್ರಜ್ವಲ್ ಅಭಿನಯದ ಗಲಾಟೆ, ಅಜಿತ್ ಪಟ್ರೆ ಅಭಿನಯದ ಈ ಭೂಮಿ ಆ ಭಾನು, ಯತಿರಾಜ್ ಅಭಿನಯದ ಕೊಟ್ ಲಪ್ಪಾ ಕೈ, ಕಿಶನ್ ಭಂಡಾರಿ ಅಭಿನಯದ ಮನಸಿನ ಪುಟದಲಿ ಚಿತ್ರಗಳು ಪ್ರೇಕ್ಷಕರಿಗೆ ಹಿಡಿಸಲಿಲ್ಲ.

ಫೆಬ್ರವರಿ ತಿಂಗಳಲ್ಲಿ ಬಿಡುಗಡೆಯಾದ ಲೂಸ್ ಮಾದ ಯೋಗೀಶ್ ಅಭಿನಯದ ಬಂಗಾರಿ, ಅವಿನಾಶ್ ಅಭಿನಯದ ಸ್ಯಾಂಡಲ್ ವುಡ್ ಸರೆಗಮ, ರವಿಶಂಕರ್ ಅಭಿನಯದ ದೇವ್ರಾಣೆ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ದಯನೀಯ ಸೋಲುಂಡಿತು.

ಹಿಟ್ ಆದ ಮತ್ತು ಆವರೇಜ್ ಹಿಟ್ ಚಿತ್ರಗಳಾವುವು? ಸ್ಲೈಡಿನಲ್ಲಿ ನೋಡಿ.

ಚಿತ್ರ : ಲಕ್ಷ್ಮಿ (ಹಿಟ್)

ಬ್ಯಾನರ್: ಭರಣಿ ಮಿನರಲ್ಸ್
ನಿರ್ದೇಶಕ: ರಾಘವ್ ಲೋಕಿ
ಸಂಗೀತ ನಿರ್ದೇಶಕ : ಗುರುಕಿರಣ್
ನಿರ್ಮಾಪಕ: ಭಾಸ್ಕರ್
ಮುಖ್ಯ ತಾರಾಗಣದಲ್ಲಿ: ಶಿವರಾಜ್ ಕುಮಾರ್, ಪ್ರಿಯಾಮಣಿ, ಸಲೋನಿ ಆಸ್ವಾನಿ, ಆಶಿಸ್ ವಿದ್ಯಾರ್ಥಿ

ಚಿತ್ರ : ವರದನಾಯಕ (ಆವರೇಜ್ ಹಿಟ್)

ಬ್ಯಾನರ್: ಶಂಕರ್ ಪ್ರೊಡಕ್ಷನ್ಸ್
ನಿರ್ದೇಶಕ: ಅಯ್ಯಪ್ಪ ಶರ್ಮಾ
ಸಂಗೀತ ನಿರ್ದೇಶಕ : ಅರ್ಜುನ್ ಜನ್ಯಾ
ನಿರ್ಮಾಪಕ: ಶಂಕ್ರೇ ಗೌಡ
ಮುಖ್ಯ ತಾರಾಗಣದಲ್ಲಿ: ಸುದೀಪ್, ಚಿರಂಜೀವಿ ಸರ್ಜಾ, ಸಮೀರಾ ರೆಡ್ಡಿ, ನಿಖೇಶಾ ಪಟೇಲ್

ಚಿತ್ರ : ಚಾರ್ಮಿನಾರ್ (ಹಿಟ್)

ಬ್ಯಾನರ್: ಚಂದ್ರು ಫಿಲಂಸ್
ನಿರ್ದೇಶಕ: ಆರ್ ಚಂದ್ರು
ಸಂಗೀತ ನಿರ್ದೇಶಕ : ಹರಿ
ನಿರ್ಮಾಪಕ: ಆರ್ ಚಂದ್ರು
ಮುಖ್ಯ ತಾರಾಗಣದಲ್ಲಿ: ಪ್ರೇಮ್ ಕುಮಾರ್, ಮೇಘನಾ ಗಾಂವ್ಕರ್, ಕುಮುದಾ

ಚಿತ್ರ : ಬೊಂಬೆಗಳ ಲವ್ (ಆವರೇಜ್ ಹಿಟ್)

ಬ್ಯಾನರ್: ಆಪಲ್ ಫಿಲಂಸ್
ನಿರ್ದೇಶಕ: ಸಂತೋಶ್
ನಿರ್ಮಾಪಕ: ಅಜಯ್ ರಾಜ್ ಅರಸ್
ಮುಖ್ಯ ತಾರಾಗಣದಲ್ಲಿ: ಅರುಣ್, ಪಾವನಾ, ಅಚ್ಯುತ್ ಕುಮಾರ್

ಚಿತ್ರ : ಅಟ್ಟಹಾಸ (ಆವರೇಜ್ ಹಿಟ್)

ಬ್ಯಾನರ್: ಅಕ್ಷಯ್ ಕ್ರಿಯೇಶನ್ಸ್
ನಿರ್ದೇಶಕ: ಎ ಎಂ ಆರ್ ರಮೇಶ್
ಸಂಗೀತ ನಿರ್ದೇಶಕ : ಸಂದೀಪ್ ಚೌಟ
ನಿರ್ಮಾಪಕ: ಎ ಎಂ ಆರ್ ರಮೇಶ್, ವಿ ಶ್ರೀನಿವಾಸ್, ಜಗದೀಶ್
ಮುಖ್ಯ ತಾರಾಗಣದಲ್ಲಿ: ಕಿಶೋರ್, ಅರ್ಜುನ್ ಸರ್ಜಾ, ಸುರೇಶ್ ಒಬೆರಾಯ್, ವಿಜಯಲಕ್ಷ್ಮಿ

ಚಿತ್ರ : ಪದೇ ಪದೇ (ಆವರೇಜ್ ಹಿಟ್)

ಬ್ಯಾನರ್: ನಿಹಾಲ್ ಮೂವೀಸ್
ನಿರ್ದೇಶಕ: ಪೀಣ್ಯ ನಾಗರಾಜ್
ಸಂಗೀತ ನಿರ್ದೇಶಕ : ಸತೀಶ್ ಆರ್ಯನ್
ನಿರ್ಮಾಪಕ: ವಿಜಯ್ ಆನಂದ್ ಕುಮಾರ್
ಮುಖ್ಯ ತಾರಾಗಣದಲ್ಲಿ: ತರುಣ್ ಚಂದ್ರಾ, ಮೃದುಲಾ, ಅಖಿಲಾ ಕಿಶೋರ್

ಚಿತ್ರ : ಮೈನಾ (ಹಿಟ್)

ನಿರ್ದೇಶಕ: ರಾಜಶೇಖರ್
ಸಂಗೀತ ನಿರ್ದೇಶಕ : ಜೆಸ್ಸಿ ಗಿಫ್ಟ್
ನಿರ್ಮಾಪಕ: ಎನ್ ಎಸ್ ರಾಜಕುಮಾರ್
ಮುಖ್ಯ ತಾರಾಗಣದಲ್ಲಿ: ಚೇತನ್ ಕುಮಾರ್, ನಿತ್ಯಾ ಮೆನನ್, ಶರತ್ ಕುಮಾರ್

English summary
Kannada movies box office performance in January to February 2013.
Please Wait while comments are loading...