For Quick Alerts
  ALLOW NOTIFICATIONS  
  For Daily Alerts

  ಈ ವಾರ 'ಆಕೆ' ಜೊತೆ ಮತ್ತೆರಡು ಚಿತ್ರಗಳು ಬಿಡುಗಡೆ

  By Bharath Kumar
  |

  ಕನ್ನಡದಲ್ಲಿ ಈ ವಾರ 'ಆಕೆ' ಚಿತ್ರದ್ದೇ ಅಬ್ಬರ. ಟ್ರೈಲರ್ ಮೂಲಕ ಕುತೂಹಲ ಮೂಡಿಸಿದ್ದ 'ಆಕೆ' ಅಂತಿಮವಾಗಿ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. 'ಆಕೆ' ಜೊತೆಯಲ್ಲಿ ಮತ್ತೆರಡು ಹೊಸ ಚಿತ್ರಗಳು ಕೂಡ ಈ ವಾರ ಥಿಯೇಟರ್ ಗೆ ಲಗ್ಗೆಯಿಡುತ್ತಿದೆ.

  'ಆಕೆ' ಜೊತೆಗೆ ಹೊಸಬರ 'ನಮ್ಮೂರ ಹೈಕ್ಳು' ಮತ್ತು 'ನಾನೊಬ್ನೆ ಒಳ್ಳೆವ್ನು' ಚಿತ್ರಗಳು ತೆರೆಕಾಣುತ್ತಿದೆ. ಚಿರಂಜೀವಿ ಸರ್ಜಾ ಹಾಗೂ ಶರ್ಮಿಳಾ ಮಾಂಡ್ರೆ ಅಭಿನಯದ 'ಆಕೆ' ಚಿತ್ರ ಹಾರರ್ ಎಲಿಮೆಂಟ್ಸ್ ಗಳಿಂದ ನಿರೀಕ್ಷೆ ಹೆಚ್ಚಿಸಿದ್ರೆ, ಹೊಸಬರ ಚಿತ್ರಗಳು ಕಾಮಿಡಿ ಕಮ್ ಕಮರ್ಷಿಯಲ್ ಅಂಶಗಳಿಂದ ಗಮನ ಸೆಳೆದಿದೆ.

  ಹಾಗಿದ್ರೆ, ಈ ಮೂರು ಚಿತ್ರಗಳ ವಿಶೇಷತೆಗಳೇನು? ಎಂಬುದರ ಕುರಿತು ಒಂದು ಸಂಫೂರ್ಣ ಮಾಹಿತಿ ಮುಂದಿದೆ ಓದಿ......

  ಈ ವಾರ ತೆರೆಮೇಲೆ 'ಆಕೆ'

  ಈ ವಾರ ತೆರೆಮೇಲೆ 'ಆಕೆ'

  'ಆಕೆ' ಹಾರರ್ ಥ್ರಿಲ್ಲಿಂಗ್ ಸಿನಿಮಾವಾಗಿದ್ದು, ಕೆ.ಎಂ ಚೈತನ್ಯ ಆಕ್ಷನ್ ಕಟ್ ಹೇಳಿದ್ದಾರೆ. ಇದೇ ಮೊದಲ ಬಾರಿಗೆ ಈರೋಸ್ ಇಂಟರ್ ನ್ಯಾಷನಲ್ ಅವರು ಕನ್ನಡ ಚಿತ್ರವನ್ನ ನಿರ್ಮಾಣ ಮಾಡಿದ್ದಾರೆ. ಚಿರಂಜೀವಿ ಸರ್ಜಾ ಮತ್ತು ಶರ್ಮಿಳಾ ಮಾಂಡ್ರೆ ಮುಖ್ಯಭೂಮಿಕೆಯಲ್ಲಿ ಅಭಿನಯಸಿದ್ದಾರೆ. ಉಳಿದಂತೆ ಹಾಲಿವುಡ್ ತಂತ್ರಜ್ಞರು ಚಿತ್ರದಲ್ಲಿ ಕೆಲಸ ಮಾಡಿದ್ದು, ದರ್ಶನ್, ಸುದೀಪ್, ರಮ್ಯಾ, ಪುನೀತ್ ಸೇರಿದಂತೆ ಹಲವರು 'ಆಕೆ' ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  'ಆಕೆ'ಯ ಥ್ರಿಲ್ಲಿಂಗ್ ಟ್ರೈಲರ್ ನೋಡಿ ಥ್ರಿಲ್ ಆದ ಪವರ್ ಸ್ಟಾರ್

  'ಆಕೆ'ಯ ಜೊತೆ 'ನಮ್ಮೂರ ಹೈಕ್ಳು'

  'ಆಕೆ'ಯ ಜೊತೆ 'ನಮ್ಮೂರ ಹೈಕ್ಳು'

  'ಆಕೆ'ಯ ಜೊತೆ 'ನಮ್ಮೂರ ಹೈಕ್ಳು' ಎಂಬ ವಿಭಿನ್ನ ಚಿತ್ರವೊಂದು ಜೂನ್ 30ರಂದು ತೆರೆಕಾಣುತ್ತಿದೆ. ಹಳ್ಳಿಯ ಯುವಕ-ಯುವತಿಯರು ನಗರಕ್ಕೆ ಬಂದು, ಅಲ್ಲಿ ಏನು ಸಾಧಿಸ್ತಾರೆ ಎನ್ನುವುದೇ ಚಿತ್ರದ ಕಥಾ ಹಂದರ. ಪ್ರಸನ್ನ ಶೆಟ್ಟಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಶ್ರೀನಿವಾಸ್‌ ನಾಗೇನಹಳ್ಳಿ ಹಾಗೂ ರಂಗರಾಜು ಹಾಸನ್ ನಿರ್ಮಾಣ ಮಾಡಿದ್ದಾರೆ. ಮಮತಾ ರಾವತ್‌, ದೀಪ್ತಿ ಮಾನೆ, ಪವನ್‌ ಕುಮಾರ್‌, ಕುರಿ ಸುನಿಲ್, ರಘು ಹಾಸನ್, ಪ್ರಶಾಂತ್ ವಿಷ್ಣು ಸೇರಿದಂತೆ ಹಲವರು ಪ್ರಮುಖ ತಾರಬಳಗದಲ್ಲಿದ್ದಾರೆ.

  'ನಾನೊಬ್ನೆ ಒಳ್ಳೆವ್ನು' ಬರ್ತಾವ್ನೆ

  'ನಾನೊಬ್ನೆ ಒಳ್ಳೆವ್ನು' ಬರ್ತಾವ್ನೆ

  ಈ ಎರಡು ಚಿತ್ರಗಳ ಜೊತೆ ಮತ್ತೊಂದು ಸಿನಿಮಾ ಇದೇ ವಾರ ಥಿಯೇಟರ್ ಗೆ ಕಾಲಿಡುತ್ತಿದೆ. ಆ ಚಿತ್ರವೇ 'ನಾನೊಬ್ನೆ ಒಳ್ಳೆವ್ನು'. ವಿಜಯ್ ಮಹೇಶ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಬರೆದು ನಿರ್ದೇಶನ ಮಾಡಿದ್ದಾರೆ. ಜೊತೆಗೆ ಈ ಚಿತ್ರದ ನಾಯಕನಾಗಿಯೂ ವಿಜಯ ಮಹೇಶ್ ಅವರೇ ಬಣ್ಣ ಹಚ್ಚಿದ್ದಾರೆ. ಉಳಿದಂತೆ ರವಿತೇಜ, ಸೋನು, ಸೌಜನ್ಯ, ಅನಿ ಪ್ರಿನ್ಸ್, ಜೋಗಿ ಪುಂಗ, ಜ್ಯೋತಿ, ಮೂರ್ತಿ ಸೇರಿದಂತೆ ಹಲವರು ಕಾಣಿಸಿಕೊಂಡಿದ್ದಾರೆ.

  ನಿಮ್ಮ ಆಯ್ಕೆ ಯಾವುದು?

  ನಿಮ್ಮ ಆಯ್ಕೆ ಯಾವುದು?

  ಈ ಮೂರು ಚಿತ್ರಗಳಲ್ಲಿ ನಿಮ್ಮ ಆಯ್ಕೆ ಯಾವುದು ಎಂದು ಕೆಳಗೆ ನೀಡಿರುವ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡಿ ತಿಳಿಸಿ.....

  ದರ್ಶನ್ ಆಯ್ತು, ರಮ್ಯಾ ಮುಗೀತು.. ಈಗ ಸುದೀಪ್ ಗೆ 'ಆಕೆ' ಮೇಲೆ ಕಣ್ಣು.!

  English summary
  Kannada Actor Chiranjeevi Sarja and Sharmila Mandre Starrer Kannada Movie 'Aake', and 2 Other Movies Are Releasing on June 30th. Here is the Detail Report....

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X