twitter
    For Quick Alerts
    ALLOW NOTIFICATIONS  
    For Daily Alerts

    ಕೊರೊನಾ ವೈರಸ್, ವ್ಯಾಕ್ಸಿನ್ ಜೊತೆ ಕನ್ನಡ ಸಿನಿಮಾಗಳ ಹೆಸರು ಸೇರಿದ್ರೆ....

    |

    ಕಳೆದ ಒಂದೂವರೆ ವರ್ಷದಿಂದ ಕೊರೊನಾ ವೈರಸ್, ಕೊರೊನಾ, ಕೋವಿಡ್, ವ್ಯಾಕ್ಸಿನ್, ಲಾಕ್‌ಡೌನ್, ಕ್ವಾರಂಟೈನ್ ಎಂಬ ಪದಗಳು ಜನರ ಜೊತೆ ಬೆರತು ಹೋಗಿದೆ. ಸಾರ್ವಜನಿಕ ಜೀವನದಲ್ಲಿ ಇದೆಲ್ಲ ಇನ್ನು ಎಷ್ಟು ಜನ ಇರುತ್ತದೆ ಎಂಬುದಕ್ಕೆ ಸ್ಪಷ್ಟ ಉತ್ತರ ಇಲ್ಲ.

    ಕೊರೊನಾ ವೈರಸ್‌ನಿಂದ ಜನರು ಕಷ್ಟಪಡುತ್ತಿದ್ದಾರೆ. ಅನೇಕ ಸಾವು-ನೋವು ಸಂಭವಿಸಿದೆ. ಆರ್ಥಿಕವಾಗಿ ಕಷ್ಟಕರ ಜೀವನ ಎದುರಿಸುವ ಪರಿಸ್ಥಿತಿ ನೋಡುವಂತಾಗಿದೆ. ಸದ್ಯ 'ಕೊರೊನಾ' ಎಂಬ ಹೆಸರಿಲ್ಲದೇ ದೈನಂದಿನ ಜೀವನ ಇಲ್ಲವಂತಾಗಿದೆ.

    ಕೋವಿಡ್ ವಾರಿಯರ್ ನೆರವಿಗೆ ಧಾವಿಸಿದ ನಿಖಿಲ್ ಕುಮಾರಸ್ವಾಮಿಕೋವಿಡ್ ವಾರಿಯರ್ ನೆರವಿಗೆ ಧಾವಿಸಿದ ನಿಖಿಲ್ ಕುಮಾರಸ್ವಾಮಿ

    ಇದೀಗ, ಸಾಮಾಜಿಕ ಜಾಲತಾಣದಲ್ಲಿ ಕೆಲವು ಮೇಮ್ಸ್ ಹರಿದಾಡುತ್ತಿದೆ. 'ಬೆಂಗಳೂರು ಬೇತಾಳ' ಎಂಬ ಟ್ವಿಟ್ಟರ್ ಖಾತೆ ಕನ್ನಡ ಸಿನಿಮಾಗಳ ಹೆಸರನ್ನು ಬಳಸಿಕೊಂಡು ಕೊರೊನಾ ಜೊತೆ ಜೀವನ ಹೇಗಿದೆ ಎನ್ನುವುದನ್ನು ಹೇಳಿದೆ. ಹಾಗಾದ್ರೆ, ಯಾವ ಸಿನಿಮಾದ ಹೆಸರು, ಏನು ಹೇಳುತ್ತಿದೆ? ಮುಂದೆ ಓದಿ...

    (ಕೃಪೆ: ಬೆಂಗಳೂರು ಬೇತಾಳ ಟ್ವಿಟ್ಟರ್ ಖಾತೆ)

    ಕೈ ನೋವ್ತಾ ಇ'ದಿಯಾ'

    ಕೈ ನೋವ್ತಾ ಇ'ದಿಯಾ'

    ಕನ್ನಡದ ಹಿಟ್ ಚಿತ್ರ ದಿಯಾ. ವ್ಯಾಕ್ಸಿನ್ ತೆಗೆದುಕೊಂಡ ನಂತರ ಕೈ ತುಂಬಾ ನೋವಾಗುತ್ತದೆ. ಆ ಬಗ್ಗೆ ದಿಯಾ ಸಿನಿಮಾ ಹೆಸರು ಬಳಸಿ 'ವ್ಯಾಕ್ಸಿನ್ ತಗೊಂಡ್ ಮೇಲೆ ಕೈ ನೋವ್ತಾ ಇ'ದಿಯಾ'' ಎಂಬ ಮೇಮ್ ನೋಡಬಹುದು.

    'ಮೊದಲಾ ಸಲ' ಜ್ವರ ಬರಲಿಲ್ಲ

    'ಮೊದಲಾ ಸಲ' ಜ್ವರ ಬರಲಿಲ್ಲ

    ಯಶ್ ನಟಿಸಿರುವ ಚಿತ್ರ ಮೊದಲಾ ಸಲ. ಧನಂಜಯ್ ನಟಿಸಿರುವ ಸಿನಿಮಾ ಎರಡನೇ ಸಲಾ. ಈ ಚಿತ್ರದ ಹೆಸರುಗಳನ್ನು ಬಳಿಸಿ, ''ಮೊದಲಾ ಸಲ ಏನು ಜ್ವರ ಬರಲಿಲ್ಲ, ಎರಡನೇ ಸಲ ಸ್ವಲ್ ಮೈ ಕೈ ನೋವು ಜ್ವರ ಇತ್ತು'' ಎಂಬ ಸಂಭಾಷಣೆ ಮಾಡಲಾಗಿದೆ.

    ಕೋವಿಡ್ ನಿಯಮ ಉಲ್ಲಂಘನೆ; ಟೈಗರ್ ಶ್ರಾಫ್ ಮತ್ತು ದಿಶಾ ವಿರುದ್ಧಕೋವಿಡ್ ನಿಯಮ ಉಲ್ಲಂಘನೆ; ಟೈಗರ್ ಶ್ರಾಫ್ ಮತ್ತು ದಿಶಾ ವಿರುದ್ಧ

    2022ಕ್ಕೆ ಎಲ್ಲವೂ ಸರಿಹೋಗಬಹುದು

    2022ಕ್ಕೆ ಎಲ್ಲವೂ ಸರಿಹೋಗಬಹುದು

    ಕೊರೊನಾ ಸಂಕಷ್ಟ ಯಾವಾಗ ಮುಗಿಯುತ್ತದೆ ಎಂಬುದಕ್ಕೆ ಯಾರ ಬಳಿಯೂ ಸ್ಪಷ್ಟ ಉತ್ತರ ಇಲ್ಲ. ಈ ವರ್ಷದ ಕೊನೆಯ ಮುಗಿಯುತ್ತೆ, ಮುಂದಿನ ವರ್ಷ ಮುಗಿಯುತ್ತೆ ಎಂಬ ಮಾತುಗಳು ಸಾಮಾನ್ಯವಾಗಿದೆ. ದೇವರಾಜ್ ನಟಿಸಿರುವ 'ಮಾನವ 2022' ಚಿತ್ರದ ಹೆಸರು ಬಳಸಿ ''ಎಲ್ಲ ಸರಿ ಹೋದ್ರೆ 'ಮಾನವ 2022' ರಲ್ಲಾದ್ರು ಸುಖವಾಗಿರಬಹುದು'' ಎಂದು ಮೇಮ್ಸ್ ಮಾಡಲಾಗಿದೆ,

    'ಅಂತ'ದ್ದೇನು ಭಯವಿಲ್ಲ

    'ಅಂತ'ದ್ದೇನು ಭಯವಿಲ್ಲ

    ಭಯದಿಂದಲೇ ಬಹಳ ಜನರು ವ್ಯಾಕ್ಸಿನ್ ಪಡೆಯುತ್ತಿಲ್ಲ. ಅಡ್ಡ ಪರಿಣಾಮ ಬೀರಬಹುದು ಎಂಬ ಆತಂಕ ಕೆಲವರಲ್ಲಿದೆ. ಈ ನಿಟ್ಟಿನಲ್ಲಿ ಅಂಬರೀಶ್ ನಟಿಸಿರುವ ಅಂತ ಸಿನಿಮಾ ಬಳಸಿ ''ಅಂತ'ದ್ದೇನು ಭಯಪಡ್ಬೇಕಾಗಿಲ್ಲ ವ್ಯಾಕ್ಸಿನ್ ಬಗ್ಗೆ...'' ಎಂದು ಹೇಳಲಾಗಿದೆ.

    ಬುದ್ದಿವಂತ ಜನರು ಮಾತ್ರ...

    ಬುದ್ದಿವಂತ ಜನರು ಮಾತ್ರ...

    ವ್ಯಾಕ್ಸಿನ್ ಹಾಕಿಸಿಕೊಳ್ಳುವ ಬಗ್ಗೆ ಉಪೇಂದ್ರ ನಟಿಸಿರುವ ಬುದ್ದಿವಂತ ಸಿನಿಮಾದ ಹೆಸರು ಬಳಸಿಲಾಗಿದೆ. ''ಬುದ್ದಿವಂತ ಜನರು ಮಾತ್ರ ವ್ಯಾಕ್ಸಿನ್ ಹಾಕಿಸಿಕೊಳ್ಳುವರು'' ಎಂದು ಫೋಸ್ಟರ್ ಗಮನ ಸೆಳೆಯುತ್ತಿದೆ.

    Recommended Video

    Sonu Sood ಈಗ ಕೆಲವರ ಪಾಲಿನ ದೇವರು | Filmibeat Kannada
    ಡಿಸೆಂಬರ್ 31ರ ಒಳಗೆ ವ್ಯಾಕ್ಸಿನ್

    ಡಿಸೆಂಬರ್ 31ರ ಒಳಗೆ ವ್ಯಾಕ್ಸಿನ್

    ವಿಷ್ಣುವರ್ಧನ್ ನಟಿಸಿರುವ ಡಿಸೆಂಬರ್ 1 ಚಿತ್ರದ ಹೆಸರು ಬಳಸಿ ''ಡಿಸೆಂಬರ್ 31ರ ಒಳಗೆ 18 ವರ್ಷ ಮೇಲ್ಪಟ್ಟವರಿಗೆ ವ್ಯಾಕ್ಸಿನ್ ನೀಡಲಾಗುವುದಂತೆ'' ಎಂಬ ಪೋಸ್ಟರ್ ವೈರಲ್ ಆಗಿದೆ.

    English summary
    Kannada Movies Titles Linked to Covid-19 Vaccination Talks around us.
    Thursday, June 3, 2021, 16:08
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X