For Quick Alerts
  ALLOW NOTIFICATIONS  
  For Daily Alerts

  ನಟ ದೇವರಾಜ್‌ಗೆ ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

  |

  ನವೆಂಬರ್ 1ರ ರಾಜ್ಯೋತ್ಸವಕ್ಕೂ ಮುನ್ನ ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಗಿದೆ. 66 ಮಂದಿಯ ಹೆಸರು ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯಲ್ಲಿದ್ದು ನಟ ದೇವರಾಜ್, ಟೆನ್ನಿಸ್ ಆಟಗಾರ ಬೋಪ್ಪಣ್ಣ ಹೆಸರು ಕೂಡ ಈ ಪಟ್ಟಿಯಲ್ಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಪ್ರಶಸ್ತಿ ಪ್ರಕಟ ಮಾಡಿದ್ದು, ಪುನೀತ್‌ ರಾಜ್‌ಕುಮಾರ್ ಅಂತ್ಯಸಂಸ್ಕಾರದ ಬಳಿಕ ಸ್ವಲ್ಪ ತಡವಾಗಿ ಪಟ್ಟಿ ಪ್ರಕಟ ಮಾಡಿದ್ದಾರೆ.

  ಈ ಬಾರಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಸೇವಾ ಸಿಂಧು ಮೂಲಕ ಸಾರ್ವಜನಿಕರು ಮಾಡಿದ್ದ ಶಿಫಾರಸ್ಸನ್ನು ಪರಿಗಣಿಸಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಹಲವರಿಗೆ ನೀಡಲಾಗುತ್ತಿದೆ. ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಪ್ರತಿ ವರ್ಷ ನೀಡಲಾಗುತ್ತಿರುವ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳಿಗೆ ಈ ವರ್ಷ ವಿವಿಧ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ 66 ಸಾಧಕರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಇದರೊಂದಿಗೆ ಈ ವರ್ಷ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಅದರ ಸ್ಮರಣೆಗಾಗಿ ರಾಜ್ಯದ 10 ಸಂಘ ಸಂಸ್ಥೆಗಳಿಗೆ ಅಮೃತ ಮಹೋತ್ಸವ ರಾಜ್ಯ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಆದರೆ ಇದು ಈ ವರ್ಷಕ್ಕೆ ಮಾತ್ರ ಸೀಮಿತವಾಗಿರಲಿದೆ ಎಂದು ತಿಳಿಸಲಾಗಿದೆ.

  ಕರ್ನಾಟಕ ಹಿಮೋ ಫೀಲಿಯಾ ಸೊಸೈಟಿ ದಾವಣಗೆರೆ, ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಕಲಬುರಗಿ, ಶ್ರೀ ವಿರೇಶ್ವರ ಪುಣ್ಯಾಶ್ರಮ ಅಂಧ ಮಕ್ಕಳ ಶಾಲೆ ಗದಗ, ಉತ್ಸವ ರಾಕ್ ಗಾರ್ಡನ್ ಹಾವೇರಿ, ಅದಮ್ಯ ಚೇತನ ಬೆಂಗಳೂರು, ಶ್ರೀ ರಾಮಕೃಷ್ಣಾಶ್ರಮ, ಮಂಗಳೂರು ದಕ್ಷಿಣ ಕನ್ನಡ, ಆಲ್ ಇಂಡಿಯಾ ಜೈನ್ ಯೂತ್ ಫೆಡರೇಷನ್ ಹುಬ್ಬಳ್ಳಿ, ಅನುಗ್ರಹ ಕಣ್ಣಿನ ಆಸ್ಪತ್ರೆ ವಿಜಯಪುರ, ಸ್ಟೆಪ್ ಒನ್ ಬೆಂಗಳೂರು, ಬನಶಂಕರಿ ಮಹಿಳಾ ಸಮಾಜ ಬೆಂಗಳೂರು. ಇಷ್ಟು ಸಂಸ್ಥೆಗಳಿಗೆ ಈ ವರುಷ ಅಮೃತ ಮಹೋತ್ಸವ ರಾಜ್ಯ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

  ಇನ್ನು ಯಾವ ಯಾವ ಕ್ಷೇತ್ರದಲ್ಲಿ ಯಾರಿಗೆ ಪ್ರಶಸ್ತಿ ಪ್ರಕಟ ಆಗಿದೆ ಅನ್ನೋದನ್ನು ಗಮನಿಸೋದಾದರೆ.

  ಸಾಹಿತ್ಯ
  ಮಹಾದೇಔ ಶಂಕನಪುರ, ಡಿ.ಟಿ ರಂಗನಾಥ, ವಿಜಯಲಕ್ಷೀ ಮಂಗಳಮೂರ್ತಿ, ಅಜ್ಜಂಪುರ ಮಂಜುನಾಥ್, ಡಾ. ಕೃಷ್ಣ ಕೋಲ್ಹಾರ ಕುಲಕರ್ಣಿ, ಸಿದ್ದಪ್ಪ ಬಿದರಿ

  ಸಿನಿಮಾ: ದೇವರಾಜ್

  ಕ್ರೀಡೆ: ರೋಹನ್‌ ಬೊಪ್ಪಣ್ಣ , ಕೆ.ಗೋಪಿನಾಥ್, ರೋಹಿತ್ ಕುಮಾರ್ ಕಟೀಲ್, ಎ.ನಾಗರಾಜ್.

  ಶಿಲ್ಪ ಕಲೆ: ಡಾ.ಜಿ.ಜ್ಞಾನಾನಂದ, ವೆಂಕಣ್ಣ ಚಿತ್ರಗಾರ

  ಸಂಗೀತ: ತ್ಯಾಗರಾಜು.ಸಿ, ಹೆರಾಲ್ಡ್ ಸಿರಿಲ್ ಡಿಸೋಜಾ

  ರಂಗಭೂಮಿ
  ಫಕೀರಪ್ಪ ರಾಮಪ್ಪ ಕೊಡಾಯಿ, ಪ್ರಕಾಶ್ ಬೆಳವಾಡಿ, ರಮೇಶ್ ಗೌಡ ಪಾಟೀಲ, ಮಲ್ಲೇಶಯ್ಯ ಎನ್, ಸಾವಿತ್ರಿ ಗೌಡರ್

  ಶಿಕ್ಷಣ ಸ್ವಾಮಿ ಲಿಂಗಪ್ಪ , ಶ್ರೀಧರ್‌ ಚಕ್ರವರ್ತಿ , ಪ್ರೊ. ಪಿ.ವಿ.ಕೃಷ್ಣ ಭಟ್‌ , ಸಂಕೀರ್ಣ, ಡಾ. ಬಿ.ಅಂಬಣ್ಣ , ಕ್ಯಾಪ್ಟನ್‌ ರಾಜಾರಾಮ್‌ , ಗಂಗಾವತಿ ಪ್ರಾಣೇಶ್

  ವಿಜ್ಞಾನ/ತಂತ್ರಜ್ಞಾನ ಡಾ. ಹೆಚ್‌.ಎಸ್‌.ಸಾವಿತ್ರಿ , ಪ್ರೊ.ಜಿ.ಯು.ಕುಲ್ಕರ್ಣಿ
  ಸಂಕೀರ್ಣ ಡಾ. ಬಿ.ಅಂಬಣ್ಣ , ಕ್ಯಾಪ್ಟನ್‌ ರಾಜಾರಾಮ್‌ ಗಂಗಾವತಿ ಪ್ರಾಣೇಶ್‌

  ಪರಿಸರ ಮಹಾದೇವ ವೇಳಿಪಾ , ಬೈಕಂಪಾಡಿ ರಾಮಚಂದ್ರ

  ಪತ್ರಿಕೋದ್ಯಮ ಪಟ್ನಂ ಅನಂತ ಪದ್ಮನಾಭ , ಯು.ಬಿ.ರಾಜಲಕ್ಷ್ಮಿ

  ನ್ಯಾಯಾಂಗ ಸಿ.ವಿ.ಕೇಶವ ಮೂರ್ತಿ

  ಆಡಳಿತ ಹೆಚ್‌.ಆರ್‌.ಕಸ್ತೂರಿ ರಂಗನ್‌

  ಸೈನಿಕ ನವೀನ್‌ ನಾಗಪ್ಪ

  ಯಕ್ಷಗಾನ ಗೋಪಾಲಚಾರ್ಯ

  ಹೊರನಾಡು ಕನ್ನಡಿಗ ಸುನಿತಾ ಶೆಟ್ಟಿ , ಚಂದ್ರಶೇಖರ್‌ ಪಾಲ್ತಾಡಿ , ಡಾ. ಸಿದ್ದರಾಮೇಶ್ವರ ಪ್ರವೀಣ್‌ ಶೆಟ್ಟಿ

  ಪೌರ ಕಾರ್ಮಿಕ ರತ್ನಮ್ಮ ಶಿವಪ್ಪ ಬಬಲಾದ

  ಕರ್ನಾಟಕ ಏಕೀಕರಣ ಹೋರಾಟಗಾರರು ಮಹದೇವಪ್ಪ ಕಡೆಚೂರು

  ಯೋಗ ಭ.ಮ.ಶ್ರೀಕಂಠ , ಡಾ. ರಾಘವೇಂದ್ರ ಶೆಣೈ

  ಉದ್ಯಮ ಶ್ಯಾಮರಾಜು

  English summary
  Kannada rajyotsava award announced 2021-22, Actor Devaraj to be felicitated.
  Sunday, October 31, 2021, 20:35
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X