Don't Miss!
- Finance
ಅದಾನಿ ಡಾಲರ್ ಬಾಂಡ್ ವಿರುದ್ಧ ಸಾಲ ನೀಡಲು ಸ್ಟಾಡರ್ಡ್ ಚಾರ್ಟೆಡ್ ನಕಾರ: ವರದಿ
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ಭಾರತವನ್ನು ಮಣಿಸಲು ಆಸಿಸ್ ತಂಡಕ್ಕೆ ಮಿಚೆಲ್ ಜಾನ್ಸನ್ ಸಲಹೆ
- News
Ejipura Flyover: ಟೆಂಡರ್ ಕರೆಯಲು ಮೀರಿದ ಸಮಯ, ಸ್ಥಳೀಯರ ಆಕ್ರೋಶ
- Technology
PVRನಿಂದ ಭರ್ಜರಿ ಸಿಹಿಸುದ್ದಿ; ಸಿನಿಮಾ ಪ್ರಿಯರ ಕಣ್ಣಿಗೆ ಹಬ್ಬದ ಸಂಭ್ರಮ!
- Automobiles
ಸೆಲ್ಟೋಸ್ನ ಗೇರ್ಬಾಕ್ಸ್ನಲ್ಲಿ ದೋಷ ಕಂಡು ಬಂದಾಗ ಉಚಿತವಾಗಿ ಬದಲಾಯಿಸಿ ಕೊಟ್ಟ ಕಿಯಾ
- Lifestyle
ಮಕ್ಕಳನ್ನು 'ಅಮ್ಮ' ದಡಾರದಿಂದ ರಕ್ಷಿಸಲು ಇದೇ ತಿಂಗಳು ತಪ್ಪದೆ ಕೊಡಿಸಿ MR ಲಸಿಕೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸಿನಿಮಾ ಪಾಠ ಕಲಿಸಲು ಮುಂದಾದ ಪ್ರಣಯರಾಜ ಶ್ರೀನಾಥ್: 'ಆರ್ಟ್ ಎನ್ ಯು'ಗೆ ಚಾಲನೆ
ಸುಮಾರು ಐದೂವರೆ ದಶಕಗಳ ಕಾಲ ಕನ್ನಡ ಚಿತ್ರರಂಗದ ಸೇವೆ ಮಾಡಿಕೊಂಡು ಬಂದಿರುವವರು ಹಿರಿಯ ನಟ ಶ್ರೀನಾಥ್. ಪ್ರಣಯರಾಜ ಶ್ರೀನಾಥ್ ಅಂತಲೇ ಹೆಸರುವಾಸಿಯಾಗಿರುವ ಈ ಹಿರಿಯ ಕಲಾವಿದ ಕಂಡ ಬಹು ದಿನದ ಕನಸು ಈಗ ಈಡೇರಿದೆ. ಕನ್ನಡ ಸಿನಿಮಾ ಆಸಕ್ತರಿಗೆ ಒಂದು ಸಂಸ್ಥೆ ಕಟ್ಟಬೇಕು ಎಂದುಕೊಂಡಿದ್ದ ಅವರ ಆಸೆ ನನಸಾಗಿದೆ.
ಹಿರಿಯ ನಟ ಶ್ರೀನಾಥ್ ಕಂಡ ಕನಸು 'ಆರ್ಟ್ ಎನ್ ಯು'. ಈ ಸಂಸ್ಥೆ ಕಟ್ಟಲು ಶ್ರೀನಾಥ್ ಅವರ ಕುಟುಂಬ ಬೆಂಬಲ ನೀಡಿದೆ. ಇಷ್ಟು ಕಲಾದೇವಿಯ ಸೇವೆ ಮಾಡಿದ್ದ ಶ್ರೀನಾಥ್ ಅವರು ಈ ವಯಸ್ಸಿನಲ್ಲಿಯೂ ಹೊಸದೇನನ್ನೋ ಸಾಧಿಸುವ ಹುಮ್ಮಸ್ಸು ಹೊಂದಿದ್ದಾರೆ. ಹೀಗಾಗಿಯೇ ಸಿನಿಮಾ ತರಬೇತಿ ಸಂಸ್ಥೆಯನ್ನು ಆರಂಭಿಸಿದ್ದಾರೆ.

ಪ್ರಣಯರಾಜ ಕಂಡ ಕನಸು 'ಆರ್ಟ್ ಎನ್ ಯು'
ಹಿರಿಯ ನಟ ಶ್ರೀನಾಥ್ ಸ್ಥಾಪಿಸಿದ 'ಆರ್ಟ್ ಎನ್ ಯು' ಸಿನಿಮಾ ಆಸಕ್ತರಿಗೆ ಕಟ್ಟಿದ ಸಂಸ್ಥೆ. ಇಲ್ಲಿ ನಟನೆ, ನಿರ್ದೇಶನ, ಕಥೆ ಹಾಗೂ ಬರವಣಿಗೆ, ಸಿನಿಮಾ ತಯಾರಿಕೆ, ತಂತ್ರಜ್ಞಾನ, ಧ್ವನಿ ತರಬೇತಿ ಸೇರಿದಂತೆ ಮೇಕಪ್‌ಗೆ ಸಂಬಂಧಿಸಿದ ಎಲ್ಲಾ ರೀತಿಯ ಶಿಕ್ಷಣವನ್ನು ನೀಡಲಾಗುತ್ತೆ. ಸಿನಿಮಾ ಕ್ಷೇತ್ರದಲ್ಲಿ ಅನುಭವವುಳ್ಳ ತಂತ್ರಜ್ಞರಿಂದ ಈ ತರಬೇತಿಯನ್ನು ನೀಡಲಾಗುತ್ತದೆ. ಈ ಸಂಸ್ಥೆಯನ್ನು ರಿಯಲ್ ಸ್ಟಾರ್ ಉಪೇಂದ್ರ ಉದ್ಘಾಟಿಸಬೇಕಿತ್ತು. ಆದರೆ ಕಾರಣಾಂತರಗಳಿಂದ ಉಪ್ಪಿ ಬರಲು ಸಾಧ್ಯವಾಗಿಲ್ಲ. ಹೀಗಾಗಿ ಶ್ರೀನಾಥ್ ಸರ್ ಅವರ ಈ ಪ್ರಯತ್ನಕ್ಕೆ ಒಳ್ಳೆಯದಾಗಲಿ. ಅವರೊಂದಿಗೆ ಸದಾ ನಾನಿರುತ್ತೇನೆ ಎಂದು ಧ್ವನಿ ಸಂದೇಶ ಕಳುಹಿಸಿ ಶುಭ ಕೋರಿದ್ದಾರೆ.

ಸಾಫ್ಟ್ ವೇರ್ ಉದ್ಯೋಗಿಗಳಿಗೆ ಪ್ರೋತ್ಸಾಹ
ಶ್ರೀನಾಥ್ ಕಟ್ಟಿದ 'ಆರ್ಟ್ ಎನ್ ಯು' ಸಂಸ್ಥೆ ಸಾಫ್ಟ್ ವೇರ್ ಉದ್ಯೋಗಿಗಳಿಗೂ ತರಬೇತಿ ನೀಡುವ ಯೋಜನೆ ಹೊಂದಿದೆ. ಹಿರಿಯ ನಟ ಶ್ರೀನಾಥ್ ಅವರ ಈ ಹೊಸ ಪ್ರಯತ್ನಕ್ಕೆ ಪತ್ನಿ ಗೀತಾ, ಪುತ್ರ ರೋಹಿತ್ ಹಾಗೂ ಸೊಸೆ ಮಂಗಳ ಬೆಂಬಲ ನೀಡಿದ್ದಾರೆ.
"ನಾನು ಚಿತ್ರರಂಗಕ್ಕೆ ಬಂದು 54 ವರ್ಷಗಳಾಯಿತು. ಸುಮಾರು ನಲವತ್ತರಿಂದ, ಐವತ್ತು ನಿರ್ದೇಶಕರ ಜೊತೆ ಕೆಲಸ ಮಾಡಿದ್ದೀನಿ. ನಾನು ಬಂದಾಗಿನ ಚಿತ್ರರಂಗವೇ ಬೇರೆ. ಈಗಿನ ಚಿತ್ರರಂಗವೇ ಬೇರೆ. ಆದರೆ ಕಲಿಕೆ ಮಾತ್ರ ನಿರಂತರ. ನನ್ನ ಗುರುಗಳಾದ ಪುಟ್ಟಣ್ಣ ಕಣಗಾಲ್ ಅವರೇ ಎಂದಿಗೂ ನನ್ನ ಗುರುಗಳು. ಅವರಿಂದ ಕಲಿತದ್ದು ಸಾಕಷ್ಟು. ಆಗಿನ ಕಾಲ , ಈಗಿನ ಕಾಲ ಅನ್ನುವುದಕ್ಕಿಂತ ವರ್ತಮಾನಕ್ಕೆ ನಾವು ಹೊಂದಿಕೊಳ್ಳಬೇಕು." ಎಂದು ಶ್ರೀನಾಥ್ ಪುಟ್ಟಣ್ಣ ಕಣಗಾಲ್ ಅವರನ್ನು ನೆನಪಿಸಿಕೊಂಡಿದ್ದಾರೆ.

ನಟನೆ ಪಾಠ ಹೇಳಿಕೊಡುತ್ತಾರೆ ಶ್ರೀನಾಥ್
"ನಾನು ಈಗಲೂ ಸಿನಿಮಾರಂಗದಲ್ಲಿ ಕಲಿಯುತ್ತಿದ್ದೇನೆ. ಈವರೆಗೂ ಚಿತ್ರರಂಗದಲ್ಲಿ ಕಲಿತಿದ್ದನ್ನು ಮತ್ತೊಬ್ಬರಿಗೆ ಹೇಳಿಕೊಡುವ ಸದುದ್ದೇಶದಿಂದ "ಆರ್ಟ್ ಎನ್ ಯ" ಸಂಸ್ಥೆ ಆರಂಭಿಸಿದ್ದೇನೆ. ಇಲ್ಲಿ ನಟನೆ ಕಲಿಯಲು ಬರುವವರಿಗೆ ನಾನು ಕೂಡ ನಟನೆ ಬಗ್ಗೆ ಹೇಳಿ ಕೊಡುತ್ತೇನೆ. ಇದ್ದಲ್ಲದೆ ಸಿನಿಮಾ ನಿರ್ಮಾಣಕ್ಕೆ ಬೇಕಾದ ಬೇರೆ ಬೇರೆ ವಿಷಯಗಳ ಬಗ್ಗೆ ಕೂಡ ತರಬೇತಿ ನೀಡಲಾಗುತ್ತದೆ. ಈ ಕಾರ್ಯಕ್ಕೆ ನನ್ನ ಕುಟುಂಬ ನೀಡುತ್ತಿರುವ ಬೆಂಬಲ ಅಪಾರ." ಎನ್ನುತ್ತಾರೆ ಪ್ರಣಯರಾಜ ಶ್ರೀನಾಥ್.

ಫೆಬ್ರವರಿಯಲ್ಲಿ ತರಗತಿಗಳು ಆರಂಭ
ಫೆಬ್ರವರಿಯಲ್ಲಿ ಸುಮಾರು ಏಳು ತರಗತಿಯನ್ನು ಆರಂಭ ಮಾಡಲಿದ್ದಾರೆ. ಆಕ್ಟಿಂಗ್, ಡೈರೆಕ್ಷನ್, ಸ್ಕ್ರೀನ್ ಪ್ಲೇ, ಫ್ಯಾಷನ್ ಹಾಗೂ ನಿರೂಪಣೆ ಸೇರಿದಂತೆ ಒಟ್ಟು ಏಳು ತರಗತಿಗಳು ಶುರುವಾಗಲಿದೆ. ಆಯಾ ಕ್ಷೇತ್ರದಲ್ಲಿ ಪರಿಣಿತಿ ಹೊಂದಿದವರೇ ತರಬೇತಿ ನೀಡುತ್ತಾರೆ.