»   » 'ಸೈನಿಕ' ಮತ್ತು 'ಅನ್ನದಾತ'ನ ಹಿರಿಮೆ ಸಾರುವ 'ಶ್ರೇಷ್ಠರು'

'ಸೈನಿಕ' ಮತ್ತು 'ಅನ್ನದಾತ'ನ ಹಿರಿಮೆ ಸಾರುವ 'ಶ್ರೇಷ್ಠರು'

Posted By:
Subscribe to Filmibeat Kannada

ನಮಗಾಗಿ, ನಮ್ಮ ನೆಮ್ಮದಿಗಾಗಿ ಬಿಸಿಲು, ಮಳೆ, ಚಳಿಯನ್ನು ಲೆಕ್ಕಿಸದೆ ಕಾಯುತ್ತಿರುವ ಸೈನಿಕರು ಒಂದೆಡೆಯಾದರೆ, ಹಳ್ಳಿಯಲ್ಲಿದ್ದುಕೊಂಡು ದಿಲ್ಲಿವರೆಗೆ ಅನ್ನನೀಡುವ ಅನ್ನದಾತ ಮತ್ತೊಂದೆಡೆ. ಜಾತಿ, ಮತ, ಕುಲ, ಧರ್ಮವೆನ್ನದೆ ನೆಮ್ಮದಿಯ ಹಾಗೂ ಅನ್ನವ ಉಣಬಡಿಸುವ ಕಾಮಧೇನು ಈ ಇಬ್ಬರು..

ಇವರಿಬ್ಬರು ಎಲ್ಲರ ಸುಖ, ನೆಮ್ಮದಿಗಾಗಿ ತಮ್ಮನ್ನ ತಾವೇ ಮೀಸಲಿಟ್ಟಿದ್ದಾರೆ. ಆದ್ರೆ, ಅವರಿಗಾಗಿ ನಾವು ಏನೂ ಮಾಡಿದ್ದೇವೆ? ಇದು ಪ್ರತಿಯೊಬ್ಬ ಮನುಷ್ಯನಿಗೂ ಕಾಡುವ ಬಹುದೊಡ್ಡ ಪ್ರಶ್ನೆ. ಇಂತಹ ಪ್ರಶ್ನೆಯನ್ನಿಟ್ಟು, ಅನ್ನದಾತ ಮತ್ತು ಸೈನಿಕನ ಕುರಿತು 'ಶ್ರೇಷ್ಠರು' ಎಂಬ ಕಿರುಚಿತ್ರ ಮೂಡಿ ಬಂದಿದೆ.

kannada short film shreshtaru trailer

'ಶ್ರೇಷ್ಠರು' ಕಿರುಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ಗಳಿಸಿಕೊಂಡಿದೆ. ರೈತ ಮತ್ತು ಸಿಪಾಯಿ ದೇಶದ ಬೆನ್ನೆಲುಬು ಎಂಬುದನ್ನ ಹೃದಯಮುಟ್ಟುವ ರೀತಿಯಲ್ಲಿ ತೆರೆ ಮೇಲೆ ತರಲಿದ್ದಾರೆ.

ಅಂದ್ಹಾಗೆ, ಈ ಕಿರುಚಿತ್ರವನ್ನ ತ್ಯಾಗರಾಜ್ ಎಂಬುವರು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದು, ರಾಜೇಶ್ವರಿ.ಟಿ ನಿರ್ಮಾಣ ಮಾಡಿದ್ದಾರೆ. ಅಜಿತ್ ಅವರ ಛಾಯಾಗ್ರಾಹಣ ಈ ಚಿತ್ರಕ್ಕಿದ್ದು, ನೋಬಿನ್ ಪೌಲ್ ಹಿನ್ನೆಲೆ ಸಂಗೀತ ಒದಗಿಸಿದ್ದಾರೆ. ಉಳಿದಂತೆ ನವೀನ್, ವಿರಾಜ್, ಗಿರೀಶ್ ಬಿಜ್ಜಾಳ್, ಭಾರ್ಗವ ಮಹೇಶ್, ಅಶ್ವಿನಿ ಕೆ.ಎನ್, ಸೇರಿದಂತೆ ಹಲವು ಪ್ರತಿಭೆಗಳು ಅಭಿನಯಿಸಿದ್ದಾರೆ.

'ಶ್ರೇಷ್ಠರು' ಕಿರುಚಿತ್ರದ ಟ್ರೈಲರ್ ಇಲ್ಲಿದೆ ನೋಡಿ....

English summary
kannada short film shreshtaru trailer released. the movie directed by thyagraj. ಕನ್ನಡ ಕಿರುಚಿತ್ರ ಶ್ರೇಷ್ಠರು ಟ್ರೈಲರ್ ಬಿಡುಗಡೆ. ತ್ಯಾಗರಾಜ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದಾನೆ.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada