»   » ಟಕ್ ಟಕ್ ಟಕ್ ವಿಭಿನ್ನ ಕಿರುಚಿತ್ರದ ಟೀಸರ್ ಔಟ್

ಟಕ್ ಟಕ್ ಟಕ್ ವಿಭಿನ್ನ ಕಿರುಚಿತ್ರದ ಟೀಸರ್ ಔಟ್

Posted By:
Subscribe to Filmibeat Kannada

ಯೆಸ್ ಫೌಂಡೇಷನ್-ನ 101 ಘಂಟೆಗಳಲ್ಲಿ ಕಿರುಚಿತ್ರ ರಾಷ್ಟ್ರೀಯ ಮಟ್ಟದ ಸ್ಫರ್ಧೆಯಲ್ಲಿ ಮೊದಲ 50ರಲ್ಲಿ ಸ್ಥಾನಗಳಿಸಿ People Choice Award ಗೆ ಆಯ್ಕೆಯಾಗಿದ್ದ 'ಆಸರೆ' ಎಂಬ ಕಿರುಚಿತ್ರ ನೀಡಿದ್ದ ಬೈಟು ಕಾಫಿ ಚಿತ್ರ ತಂಡ ಈಗ 'ಟಕ್ ಟಕ್ ಟಕ್' ಎಂಬ ಕಿರುಚಿತ್ರವನ್ನು ನಿರ್ಮಿಸುತ್ತಿದೆ. ಈ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಇದರ ವಿವರ ಇಲ್ಲಿದೆ.

ಟಕ್ ಟಕ್ ಟಕ್ ಅಂತ ಹಗಲು ಹೊತ್ತು ಬಾಗಿಲು ಬಡಿದ ಸದ್ದು ಕೇಳಿದ್ರೆ, ಯಾರೋ ಅತಿಥಿ ಇಲ್ಲಾ ಮನೆಯವರು ಬಂದ್ರು ಅಂತ ಖುಷಿಯಾಗುತ್ತೆ. ಆದರೆ ಹೊತ್ತಲ್ಲದ ಹೊತ್ತಿನಲ್ಲಿ ಟಕ್ ಟಕ್ ಟಕ್ ಅಂತ ಸದ್ದು ಕೇಳಿದ್ರೆ ಭಯವಾಗಿ ಮನದಲ್ಲಾಗುವ ಸದ್ದು ಯಾರಿಗೂ ಕೇಳೋದಿಲ್ಲ.

ಒಂದೇ ಶಬ್ದ ಪರಿಣಾಮ ವಿಭಿನ್ನ. ಅದೇ ಶಬ್ದ ರಹಸ್ಯ, ತೀಕ್ಷ್ಣತೆ ಹಾಗೂ ಕಾವು. ಹೀಗೆ ಕೇಳುವ ಶಬ್ದ "ಟಕ್ ಟಕ್ ಟಕ್" ಆ ಶಬ್ದದ ಪರಿಣಾಮ ಕೇಳುವವರ ಲಕ್ ಮೇಲೆ ಅವಲಂಬಿತ! [ಆಸರೆ ಕನ್ನಡ ಕಿರು ಚಿತ್ರ ನೋಡಿ]

Tak Tak Tak Teaser by2coffeefilms

ಇಂಥದೊಂದು ವಿಭಿನ್ನ ಥ್ರಿಲ್ಲರ್ ಕಿರುಚಿತ್ರಕ್ಕೆ ಕಾರಣಕತೃರು ಪ್ರತಿಷ್ಠಿತ ಕಂಪೆನಿಯ ಚಿತ್ರ ತಂಡ "ಡಾಟ್ ಮೂವೀ ಟಾಕೀಸ್ ಹಾಗೂ ಬೈಟೂ ಕಾಫಿ ಫಿಲ್ಮ್ಸ್". ಚಿತ್ರತಂಡ ಹಾಗೂ ಪಾತ್ರವರ್ಗವೇ ದುಡ್ಡು ಹಾಕಿ ನಿರ್ಮಾಣ ಮಾಡಿರುವ 25 ನಿಮಿಷಗಳ ಕಿರುಚಿತ್ರ "ಟಕ್ ಟಕ್ ಟಕ್". ಈ ಪ್ರಯತ್ನದ ಟ್ರೇಲರ್ ಮೊದಲ ಬಾರಿಗೆ ನಿಮ್ಮ ಮುಂದೆ...

ಟಕ್ ಟಕ್ ಟಕ್ ...ಮಾನ್ಯರೇ ನಾ ಹೇಳಿದ್ದು ಕೇಳಿಸ್ತಾ?...ಈ ಕೆಳಗಿನ ಕೊಂಡಿಯಲ್ಲಿರುವ ಟೀಸರ್ ನೋಡಿದ್ರಾ?....

"ಡಾಟ್ ಮೂವೀ ಟಾಕೀಸ್ ಹಾಗೂ ಬೈಟೂ ಕಾಫಿ ಫಿಲ್ಮ್ಸ್ ಪರವಾಗಿ
-ಅಮರನಾಥ್ ವಿ.ಬ್ಯಾಡಗಿ
http://www.by2coffeefilms.com

English summary
Here is the teaser of Kannada Short Film 'Tak Tak Tak' made as part of Dot Mov Talkies Cinema Workshop 2014 in association with by2coffeefilms.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada