»   » 'ಐಫಾ' ಪ್ರಶಸ್ತಿ ವೇದಿಕೆಯಲ್ಲಿ ಕನ್ನಡಾಭಿಮಾನ ಮೆರೆದ ತೆಲುಗು ನಟ ಎನ್.ಟಿ.ಆರ್

'ಐಫಾ' ಪ್ರಶಸ್ತಿ ವೇದಿಕೆಯಲ್ಲಿ ಕನ್ನಡಾಭಿಮಾನ ಮೆರೆದ ತೆಲುಗು ನಟ ಎನ್.ಟಿ.ಆರ್

Posted By:
Subscribe to Filmibeat Kannada

ಟಾಲಿವುಡ್ ಯಂಗ್ ಟೈಗರ್ ಎಂದು ಕರೆಸಿಕೊಳ್ಳುವ ಜೂನಿಯರ್ ಎನ್.ಟಿ.ಆರ್ ತೆಲುಗು ಸಿನಿ ಲೋಕದ ಸ್ಟಾರ್ ನಟ. ಈ ಹೆಸ್ರು ಕೇಳಿದ್ರೆ ತೆಲುಗು ಲೋಕದಲ್ಲಿ ಒಂಥರಾ ಕ್ರೇಜ್. ಆದ್ರೆ, ಈ ನಟ ಕೇವಲ ತೆಲುಗಿನಲ್ಲಿ ಮಾತ್ರವಲ್ಲ, ಕರ್ನಾಟದ ಜೊತೆಯೂ ನಂಟು ಹೊಂದಿದ್ದಾರೆ ಅಂದ್ರೆ ನಂಬಲೇಬೇಕು.

ಹೌದು, ಜೂನಿಯರ್ ಎನ್.ಟಿ.ಆರ್ ಗೂ ಮತ್ತು ಕನ್ನಡ ನಾಡಿಗೂ ಹತ್ತಿರದ ಸಂಬಂಧ. ಒಂದು ರೀತಿಯಲ್ಲಿ ಹೇಳುವುದಾದರೇ ತಾಯ್ನಾಡು ಎನ್ನಬಹುದು. ಈ ವಿಷ್ಯ ಅದೇಷ್ಟೋ ಜನಕ್ಕೆ ಗೊತ್ತಿಲ್ಲ. ಆದ್ರೆ, ಈ ಸಂಗತಿಯನ್ನ ಸ್ವತಃ ಜೂನಿಯರ್ ಎನ್.ಟಿ.ಆರ್ ಅವರೇ 'ಐಫಾ' ಪ್ರಶಸ್ತಿ ಸಮಾರಂಭದಲ್ಲಿ ಹೇಳಿಕೊಂಡಿದ್ದಾರೆ.

ಕನ್ನಡದಲ್ಲಿ ಮಾತನಾಡಿದ ತೆಲುಗು ನಟ

ಇತ್ತೀಚೆಗೆ ಹೈದರಾಬಾದ್ ನಲ್ಲಿ 2017ನೇ ಐಫಾ ಪ್ರಶಸ್ತಿ ಸಮಾರಂಭ ನಡಯಿತು. ಈ ಸಮಾರಂಭದಲ್ಲಿ ಕನ್ನಡದ ನಟ ರಕ್ಷಿತ್ ಶೆಟ್ಟಿ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಪ್ರಧಾನ ಮಾಡಲು ವೇದಿಕೆ ಮೇಲೆ ಬಂದ ಜೂನಿಯರ್ ಎನ್.ಟಿ.ಆರ್ ಕನ್ನಡದಲ್ಲಿ ಮಾತನಾಡಿ ಅಚ್ಚರಿ ಮೂಡಿಸಿದ್ದಾರೆ.

ಕರ್ನಾಟದ ನಂಟು ನೆನಪಿಸಿಕೊಂಡ ಯಂಗ್ ಟೈಗರ್

''ತಮ್ಮ ತಾಯಿ ಕನ್ನಡದವರು, ಅವರ ಹುಟ್ಟುರು ಕುಂದಾಪುರ. ತಾತ ಕುಟುಂಬದ ಹಾಗೆಯೇ ಅಮ್ಮನದ್ದು ದೊಡ್ಡ ಕುಟುಂಬ. ಆಗಾಗ ನಾನೂ ಅಲ್ಲಿಗೆ ಹೋಗಿ ಬರುತ್ತೇನೆ. ಕನ್ನಡ, ಕರ್ನಾಟಕ ನನ್ನ ಬದುಕಲ್ಲಿ ಗೊತ್ತಿಲ್ಲದಂತೆ ಬೆಸೆದುಕೊಂಡಿದೆ ಅಂತ ಭಾವುಕರಾದರು''

ಕನ್ನಡ ಹಾಡಿಗೆ ದ್ವನಿಯಾಗಿದ್ದ ಎನ್.ಟಿ.ಆರ್

ಅಷ್ಟೇ ಅಲ್ಲದೇ, ವೇದಿಕೆಯಲ್ಲಿ ಪುನೀತ್ ರಾಜ್ ಕುಮಾರ್ ಅಭಿನಯದ 'ಚಕ್ರವ್ಯೂಹ' ಚಿತ್ರದ 'ಗೆಳೆಯ ಗೆಳೆಯ' ಹಾಡು ಹೇಳಿ ರಂಜಿಸಿದರು. ಮೂಲ ಚಿತ್ರದಲ್ಲೂ ಕೂಡ ಈ ಹಾಡನ್ನ ಜೂನಿಯರ್ ಎನ್.ಟಿ.ಆರ್ ಅವರೇ ಹಾಡಿದ್ದಾರೆ.

ಕರ್ನಾಟಕದ ಜೊತೆ ಸಂಬಂಧ ಹೇಗೆ?

ತೆಲುಗು ಖ್ಯಾತ ನಟ ಎನ್.ಟಿ.ಆರ್ ಅವರ ಹಿರಿಯ ಮಗ ಹರಿಕೃಷ್ಣ ಹಾಗೂ ಶಾಲಿನಿ ದಂಪತಿ ಪುತ್ರ ಜೂನಿಯರ್ ಎನ್.ಟಿ.ಆರ್. ಶಾಲಿನಿ ಅವರದ್ದು ಮೂಲತಃ ಕುಂದಾಪುರದವರು. ಶಾಲಿನಿ ಅವರು ಚಿಕ್ಕವರಿದ್ದಾಗಲೇ ಅವರ ಕುಟಂಬ ಹೈದರಾಬಾದ್ ಗೆ ಹೋಗಿ ನೆಲಸಿದ್ದರಂತೆ. ಹರಿಕೃಷ್ಣ ಅವರು ಶಾಲಿನಿ ಅವರನ್ನು ಎರಡನೇ ಮದುವೆ ಮಾಡಿಕೊಂಡಿದ್ದರು.

English summary
Kannada Speech By Junior NTR at IIFA Awards 2017 At Hyadarbad.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada