»   » 76ರ ವಯಸ್ಸಲ್ಲಿ 26ರ ಯುವತಿ 'ಲೀಲಾವತಿ'

76ರ ವಯಸ್ಸಲ್ಲಿ 26ರ ಯುವತಿ 'ಲೀಲಾವತಿ'

Posted By:
Subscribe to Filmibeat Kannada

ಬಣ್ಣದ ಬದುಕಿಗೆ ಕಾಲಿಟ್ಟು ಐದು ದಶಕಗಳನ್ನು ಪೂರೈಸಿ, 400ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಹಿರಿಯ ಅಭಿನೇತ್ರಿ 'ಲೀಲಾವತಿ'. 76ರ ಇಳಿವಯಸ್ಸಲ್ಲಿ ಇದೀಗ ಮತ್ತೆ ಬಣ್ಣ ಹಚ್ಚಿರುವ ಲೀಲಾವತಿ 26ರ ಯುವತಿಯಾಗಿದ್ದಾರೆ. ಹಾಗೆ ಲೀಲಾವತಿ ಯುವತಿಯಾಗಿರುವುದು ಅಣ್ಣಾವ್ರಿಗೋಸ್ಕರ, ಅಣ್ಣಾವ್ರ ನೆನಪಲ್ಲಿ ಅನ್ನುವುದು ವಿಶೇಷ. [ಅಣ್ಣಾವ್ರ ಜೀವನ ಪುಟದ ಕಹಿ ಸತ್ಯ ಬಿಚ್ಚಿಟ್ಟ ರಾಘಣ್ಣ]

ಹೌದು, ನಿನ್ನೆಯಷ್ಟೇ (ನವೆಂಬರ್ 29)ರಂದು ಕನ್ನಡ ರತ್ನ 'ಡಾ.ರಾಜ್ ಹಬ್ಬ' ಅದ್ದೂರಿಯಾಗಿ ನಡೆಯಿತು. ಅಣ್ಣಾವ್ರ ಸ್ಮಾರಕ ಲೋಕಾರ್ಪಣೆಯಾಗುತ್ತಿದ್ದಂತೆ ಅರಮನೆ ಮೈದಾನದಲ್ಲಿ 'ಅಮರಜೀವಿ' ನೆನಪಲ್ಲಿ ಇಡೀ ಕನ್ನಡ ಚಿತ್ರರಂಗ ವೈಭವೋಪೇತ ಮನರಂಜನಾ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಅದರಲ್ಲಿ ಹಿರಿಯ ನಟಿ ಲೀಲಾವತಿ ವೀರಕೇಸರಿಯ ಪ್ರಿಯತಮೆಯಾಗಿ 'ಮೆಲ್ಲುಸಿರಲ್ಲಿ ಸವಿಗಾನ' ಹಾಡಿದ ರೀತಿ ನಯನಮನೋಹರವಾಗಿತ್ತು. [ನಟಸಾರ್ವಭೌಮ ರಾಜ್ ಬಗ್ಗೆ ರಜನಿ ಹೀಗಂದಿದ್ಯಾಕೆ?]

ಲೀಲಾವತಿಯೊಂದಿಗೆ ಹಿರಿಯ ನಟ ಚಂದ್ರಶೇಖರ್, ರೆಬೆಲ್ ಸ್ಟಾರ್ ಅಂಬರೀಷ್, ಸುಮಲತಾ, ಶಿವರಾಜ್ ಕುಮಾರ್, ರವಿಚಂದ್ರನ್, ಪುನೀತ್ ರಾಜ್ ಕುಮಾರ್, ಉಪೇಂದ್ರ, ಮಾಲಾಶ್ರೀ, ಯಶ್, ಗಣೇಶ್ ಸೇರಿದಂತೆ ಕನ್ನಡ ಚಿತ್ರರಂಗದ ಎಲ್ಲಾ ತಾರೆಗಳ ರಂಗಿನಾಟ ವೇದಿಕೆ ಮೇಲೆ ರಂಗುರಂಗಾಗಿತ್ತು. ಅಂತಹ ಅಪೂರ್ವ ಕ್ಷಣಗಳನ್ನು ಕಣ್ತುಂಬಿಕೊಳ್ಳುವುದಕ್ಕೆ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ...

26ರ ಯುವತಿ ಲೀಲಾವತಿ

ಡಾ.ರಾಜ್ ಕುಮಾರ್ ಅಂದ್ರೆ ಬೆಟ್ಟದಷ್ಟು ಅಭಿಮಾನ ಹೊಂದಿರುವ ನಟಿ ಲೀಲಾವತಿ. ಅಣ್ಣಾವ್ರ ಜೊತೆ ಅನೇಕ ಚಿತ್ರಗಳಲ್ಲಿ ಜೋಡಿಯಾಗಿ ನಟಿಸಿರುವ ಲೀಲಾವತಿ, ಅಮರಜೀವಿಯ ನೆನಪಲ್ಲಿ ಸ್ಯಾಂಡಲ್ ವುಡ್ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹೆಜ್ಜೆಹಾಕಿ ಎಲ್ಲರ ಹುಬ್ಬೇರುವಂತೆ ಮಾಡಿದರು. ಅನಾರೋಗ್ಯದ ಕಾರಣವಿದ್ದರೂ, ಅದನ್ನಾವುದನ್ನೂ ಲೆಕ್ಕಿಸದೆ ಲೀಲಾವತಿ, ಹಿರಿಯ ನಟ ಚಂದ್ರಶೇಖರ್ ಜೊತೆ 'ವೀರಕೇಸರಿ' ಚಿತ್ರದ 'ಮೆಲ್ಲುಸಿರೇ ಸವಿಗಾನ' ಹಾಡಿಗೆ ಹೆಜ್ಜೆ ಹಾಕಿದರು.

ಅಂಬಿ-ಸುಮಲತಾ ರೋಮ್ಯಾನ್ಸ್

ಒಂದೇ ವೇದಿಕೆಯ ಮೇಲೆ ಅಂಬರೀಷ್ ಮತ್ತು ಸುಮಲತಾ ಜೋಡಿಯ ಡ್ಯುಯೆಟ್ ನ ಕಣ್ಣಾರೆ ಕಾಣುವ ಭಾಗ್ಯ ನಿನ್ನೆ ಕನ್ನಡ ಸಿನಿಪ್ರಿಯರಿಗೆ ಲಭಿಸಿತು. ರಾಜಕೀಯದಲ್ಲಿ ಬಿಜಿಯಿದ್ದರೂ ಅಣ್ಣಾವ್ರ ಸ್ಮರಣಾರ್ಥ ಅಂಬರೀಷ್ ವೇದಿಕೆ ಹತ್ತಿ ಹೆಜ್ಜೆಹಾಕಿದ್ದು ವಿಶೇಷವಾಗಿತ್ತು. ಪತ್ನಿ ಸುಮಲತಾ ಜೊತೆ ರಾಜಣ್ಣನ ಜನಪ್ರಿಯ ''ನೀ ಬಂದು ನಿಂತಾಗ'' ಹಾಡಿಗೆ ಹೆಜ್ಜೆಹಾಕ್ತಿದ್ರೆ, ಅಭಿಮಾನಿಗಳ ಚಪ್ಪಾಳೆ-ಶಿಳ್ಳೆ-ಕೇಕೆ ಮುಗಿಲುಮುಟ್ಟಿತ್ತು.

ರವಿಮಾಮನ 'ಮಯೂರ' ಮೋಡಿ

ಕನ್ನಡ ಚಿತ್ರರಂಗ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಎಲ್ಲರ ಗಮನಸೆಳೆದದ್ದು ಕ್ರೇಜಿಸ್ಟಾರ್ ರವಿಚಂದ್ರನ್. ನಟಸಾರ್ವಭೌಮ ಅಭಿನಯದ ಸೂಪರ್ ಹಿಟ್ 'ಮಯೂರ' ಚಿತ್ರದ ''ನಾನಿರುವುದೇ ನಿಮಗಾಗಿ'' ಹಾಡಿಗೆ ಮಲ್ಲ ರವಿಮಾಮ ತಮ್ಮದೇ ಶೈಲಿಯಲ್ಲಿ ರಥವನ್ನೇರಿ ಕತ್ತಿವರಸೆ ಮಾಡುವ ಮೂಲಕ ಭರ್ಜರಿಯಾಗಿ ಸ್ಟೆಪ್ ಹಾಕಿದರು.

'ಶಿವ..ಶಿವ..' ತಾಂಡವ!

ಅಪ್ಪಾಜಿ ನಟಿಸಿರುವ ಹಾಡುಗಳಿಗೆ ಹೆಜ್ಜೆ ಹಾಕದೇ ಇದ್ದರೂ, ಅಪ್ಪಾಜಿ ದನಿಯಾಗಿದ್ದ ತಮ್ಮ ಹಾಡುಗಳಿಗೆ (ಶಿವ..ಶಿವ, ಜಗವೇ ಒಂದು ರಣರಂಗ, ಕನ್ನಡದ ಮಾತು ಚಂದ) ಕುಣಿದುಕುಪ್ಪಳಿಸಿ ಎಲ್ಲಾ ಅಭಿಮಾನಿಗಳಿಗೆ ರಸದೌತಣವನ್ನ ಉಣಬಡಿಸಿದರು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್. ಬೈಕ್ ಏರಿ ವೇದಿಕೆ ಮೇಲೆ ಶಿವಣ್ಣ ಎಂಟ್ರಿ ಕೊಡ್ತಿದ್ದಂತೆ, ಅಲ್ಲಿ ನೆರೆದಿದ್ದ ಅಭಿಮಾನಿಗಳು ಕುಂತಲ್ಲಿ ಕೂರದೇ ಶಿವಣ್ಣನ ತಾಳಕ್ಕೆ ಕೈಜೋಡಿಸುತ್ತಿದ್ದರು. ಹಾಗಿತ್ತು ಶಿವ ತಾಂಡವ.

'ಪವರ್' ಮ್ಯಾಜಿಕ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೂಡ ವರನಟನ ವಿವಿಧ ಹಾಡುಗಳಿಗೆ ಅವರದ್ದೇ ಶೈಲಿಯಲ್ಲಿ ನೃತ್ಯ ಮಾಡಿದರು. ತಮ್ಮ ಫೇವರಿಟ್ 'ಬೆಳ್ಳಿ ಮೂಡಿತೋ..ಕೋಳಿ ಕೂಗಿತೋ' ಹಾಡಿಗೆ ಅಪ್ಪಾಜಿಯ ಅನುಕರಣೆ ಮಾಡಿದ ಪುನೀತ್, ಕಂಪ್ಲೀಟ್ ಮನರಂಜನೆ ನೀಡಿದರು.

'ವಿನೋದ್' ವೈಭವ

ಮನರಂಜನಾ ಕಾರ್ಯಕ್ರಮದಲ್ಲಿ ಹಿರಿಯ ನಟಿ ಲೀಲಾವತಿ ಪುತ್ರ ವಿನೋದ್ ರಾಜ್ ಕೂಡ ಹಿಂದೆ ಬಿದ್ದಿರಲಿಲ್ಲ. ಅಣ್ಣಾವ್ರ ಕಂಠದಿಂದ ಹೊರಹೊಮ್ಮಿದ್ದ ಸೂಪರ್ ಹಿಟ್ 'ಹೃದಯ ಸಮುದ್ರ ಕಲಕಿ' ಹಾಡಿಗೆ ವಿನೋದ್ ರಾಜ್ ಮೈ ಜುಂ ಅನಿಸುವಂತಹ ಪರ್ಫಾಮೆನ್ಸ್ ನೀಡಿದರು.

ರೆಟ್ರೋ ಸ್ಟೈಲ್ ನಲ್ಲಿ ಯಶ್-ರಚಿತಾ ಜುಗುಲ್ಬಂದಿ

ಹಳೇ ರೆಟ್ರೋ ಸ್ಟೈಲ್ ನಲ್ಲಿ ಬೂಟ್ ಕಟ್ ಪ್ಯಾಂಟ್ ತೊಟ್ಟು ರಾಜ್ ಕುಮಾರ್ ರವರ ''ಲೇ..ಲೇ...ಅಪ್ಪನ ಮಗಳೇ'' ಹಾಡಿಗೆ ಕುಣಿದು ಚಪ್ಪಾಳೆ ಗಿಟ್ಟಿಸಿಕೊಂಡವರು ರಾಕಿಂಗ್ ಸ್ಟಾರ್ ಯಶ್ ಮತ್ತು ರಚಿತಾ ರಾಮ್.

'ಮರೆಯಲಾಗದ' ಗಣಿ-ಅಮೂಲ್ಯ ರೋಮ್ಯಾನ್ಸ್

ವೇದಿಕೆ ಮೇಲೆ ರಾಜಣ್ಣ ಮತ್ತು ಜ್ಯೂಲಿ ಲಕ್ಷ್ಮೀಯನ್ನು ನೆನಪಿಸಿದವರು ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಅಮೂಲ್ಯ. ಎವರ್ಗ್ರೀನ್ 'ನಾ ನಿನ್ನ ಮರೆಯಲಾರೆ' ಚಿತ್ರದ ಹಾಡಿಗೆ ಹೆಜ್ಜೆ ಹಾಕಿದ ಈ ಜೋಡಿಯ ಮೋಡಿ ಕಣ್ಮನ ಸೆಳೆಯುವಂತಿತ್ತು.

ಅಂತಿಂಥ ಹೆಣ್ಣಲ್ಲಾ 'ಮಾಲಾಶ್ರೀ'!

ಕನಸಿನ ರಾಣಿ ಮಾಲಾಶ್ರೀ, ತಮ್ಮ ರೌದ್ರಾವತಾರವನ್ನು ಪಕ್ಕಕ್ಕಿಟ್ಟು, ಸ್ವಲ್ಪ ಜಂಬದಿಂದ ರಾಜಣ್ಣನನ್ನ ನೆನೆದದ್ದು 'ಅಂತಿಂಥ ಹೆಣ್ಣು ನಾನಲ್ಲ...ನನ್ನಂಥ ಹೆಣ್ಣು ಯಾರೂ ಇಲ್ಲ..'' ಹಾಡಿನ ಮೂಲಕ.

ನೆನಪಿನಂಗಳದಲ್ಲಿ 'ಉಪೇಂದ್ರ'

ಇತರೆ ಸ್ಟಾರ್ ಗಳಂತೆ ಹೆಜ್ಜೆ ಹಾಕದೇ ಇದ್ದರೂ, ರಿಯಲ್ ಸ್ಟಾರ್ ಉಪೇಂದ್ರ ರಾಜಣ್ಣನ ಸ್ಮರಣೆ ಮಾಡಿದರು. ಪ್ರತಿಷ್ಟಿತ ವಜ್ರೇಶ್ವರಿ ಕಂಬೈನ್ಸ್ ಮೂಲಕ ರಾಜಣ್ಣನ ಆಶೀರ್ವಾದಿಂದ 'ಓಂ' ಚಿತ್ರವನ್ನು ನಿರ್ದೇಶಿಸಿದ್ದ ಉಪೇಂದ್ರ ಅಂದಿನ ಮರೆಯಲಾಗದ ಘಟನೆಗಳನ್ನ ಶಿವಣ್ಣನ್ನೊಟ್ಟಿಗೆ ಮೆಲುಕು ಹಾಕಿದರು.

ಸ್ಯಾಂಡಲ್ ವುಡ್ ತಾರೆಯರ ಸಮಾಗಮ

ಇವ್ರಿಷ್ಟೇ ಅಲ್ಲದೇ ಅಜುರ್ನ್ ಸರ್ಜಾ, ಚಿರಂಜೀವಿ ಸರ್ಜಾ, ಮೇಘನಾ ರಾಜ್, ಹರ್ಷಿಕಾ ಪೂಣಚ್ಚ, ಶ್ರೀಧರ್, ಶ್ರೀನಾಥ್, ಭವ್ಯ, ಅಕುಲ್ ಬಾಲಾಜಿ, ಶ್ವೇತಾ ಚೆಂಗಪ್ಪ, ವಿಜಯ್ ರಾಘವೇಂದ್ರ, ಬಾಲರಾಜ್, ಶ್ರೀಮರುಳಿ, ರಮೇಶ್, ಶೃತಿ ಸೇರಿದಂತೆ ಅನೇಕ ಕಲಾವಿದರು ನೃತ್ಯ ಪ್ರದರ್ಶನ ನೀಡಿದರು. [ಅಣ್ಣಾವ್ರ ನೆನಪಲ್ಲಿ ಮನರಂಜನಾ ಮಹಾಪೂರ]

English summary
Karnataka Matinee Idol, Karnataka Ratna Late.Dr.Rajkumar Memorial Culturall Night happened in Palace grounds in a great grandeur. Kannada stars including Veteran Actress Leelavathi, Ravichandran, Ambareesh, Sumalatha, Ganesh, Yash, Shivarajkumar, Puneeth Rajkumar performed for Dr.Raj songs in the Cultural Night.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada