Don't Miss!
- Sports
IND vs NZ 3rd T20: ಶುಭ್ಮನ್ ಗಿಲ್ ಸ್ಫೋಟಕ ಶತಕ; ಕಿವೀಸ್ ವಿರುದ್ಧ ಬೃಹತ್ ಮೊತ್ತ ದಾಖಲಿಸಿದ ಭಾರತ
- Lifestyle
ಬಜೆಟ್ನಲ್ಲಿ ಪ್ರಸ್ತಾಪವಾದ ಸಿಕಲ್ ಸೆಲ್ ಅನಿಮಿಯಾ ಕಾಯಿಲೆ ಎಷ್ಟು ಡೇಂಜರಸ್ ಗೊತ್ತೆ?
- News
Assembly election 2023: ಯಾವುದೇ ಪಕ್ಷದ ಜೊತೆ ಹೊಂದಾಣಿಕೆ ಇಲ್ಲ: ಚನ್ನಪಟ್ಟಣದಲ್ಲಿ ಸಿ.ಪಿ.ಯೋಗೇಶ್ವರ್ ಸ್ಪಷ್ಟನೆ
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕನ್ನಡ ರಾಜ್ಯೋತ್ಸವಕ್ಕೆ ಶುಭಕೋರಿದ ಸ್ಯಾಂಡಲ್ ವುಡ್ ತಾರೆಯರು
ಕನ್ನಡ ರಾಜ್ಯೋತ್ಸವ ಸಂಭ್ರಮ ನಾಡಿನಲ್ಲೆಡೆ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಅದರಲ್ಲು ಸೋಶಿಯಲ್ ಮೀಡಿಯಾದಲ್ಲಂತೂ ಕನ್ನಡದ ಕಂಪು ಜಾಸ್ತಿಯೇ ಇದೆ. ಕನ್ನಡ ಹಾಡುಗಳು, ಕನ್ನಡ ಪದಗಳು, ಕನ್ನಡ ಕವನಗಳು, ಕನ್ನಡಿಗರ ಹೆಮ್ಮೆಯ ಫೋಟೋಗಳು ಹೆಚ್ಚು ಹೆಚ್ಚು ಗಮನ ಸೆಳೆಯುತ್ತಿದೆ.
ಕನ್ನಡ ರಾಜ್ಯೋತ್ಸವ ಪ್ರಯುಕ್ತ ಸ್ಯಾಂಡಲ್ ವುಡ್ ಸೂಪರ್ ಸ್ಟಾರ್ಸ್ ಟ್ವಿಟ್ಟರ್, ಫೇಸ್‌ಬುಕ್, ಇನ್ಸ್ಟಾಗ್ರಾಂನಲ್ಲಿ ಶುಭಕೋರಿದ್ದಾರೆ. ಕೆಲವರು ತಮ್ಮ ಚಿತ್ರದ ಟೀಸರ್, ಪೋಸ್ಟರ್ ರಿಲೀಸ್ ಮಾಡಿ ಸಂಸತ ಹಂಚಿಕೊಂಡಿದ್ದಾರೆ. ಹಾಗಿದ್ರೆ, ರಾಜ್ಯೋತ್ಸವ ಪ್ರಯುಕ್ತ ಯಾವ ಸ್ಟಾರ್ ಏನೆಂದು ವಿಶ್ ಮಾಡಿದ್ದಾರೆ? ಮುಂದೆ ಓದಿ...

ಹೆತ್ತ ತಾಯಿ ಕನ್ನಡತಿಯಾದರೆ ಹೊತ್ತ ತಾಯಿ "ಕನ್ನಡ"
''ಹೆತ್ತ ತಾಯಿ ಕನ್ನಡತಿಯಾದರೆ ಹೊತ್ತ ತಾಯಿ "ಕನ್ನಡ", ಹಾರುತಲಿರಲಿ ನಮ್ಮ ತಾಯ್ನಾಡಿನ ಸಂಸ್ಕೃತಿಯ ಬಣ್ಣಗಳ ಪತಾಕೆ, ಝೇಂಕರಿಸಲಿ ಕರುನಾಡಿನ ಘೋಷ ವಾಕ್ಯ,, ಹರಡಲಿ ಎಲ್ಲೆಡೆ ಕನ್ನಡದ ಕಂಪು., ಕನ್ನಡಾಂಬೆಯ ಸಮಸ್ತ ಕುಲಕೋಟಿಗೆ ಕನ್ನಡ ರಾಜ್ಯೋತ್ಸವ ದ ಹಾರ್ದಿಕ ಶುಭಾಶಯಗಳು..'' - ಸುದೀಪ್
ಕನ್ನಡ ರಾಜ್ಯೋತ್ಸವ; ಕನ್ನಡದಲ್ಲೇ ಶುಭಾಶಯ ಕೋರಿದ ಮೋದಿ

ಎಂದೆಂದಿಗೂ ನೀ ಕನ್ನಡವಾಗಿರು
''ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಕನ್ನಡವೇ ಸತ್ಯ ಕನ್ನಡವೇ ನಿತ್ಯ! ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು'' - ಪುನೀತ್ ರಾಜ್ ಕುಮಾರ್

ಸಮಸ್ತ ಕನ್ನಡಿಗರಿಗೂ ರಾಜ್ಯೋತ್ಸವದ ಶುಭಾಶಯ
''ಸಮಸ್ತ ಕನ್ನಡಿಗರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯ'' ಎಂದು ನಟ ಜಗ್ಗೇಶ್ ಅವರು ತಮ್ಮ ಟ್ವಿಟ್ಟರ್‌ನಲ್ಲಿ ಶುಭ ಕೋರಿದ್ದಾರೆ.

ಉಳಸಿ..ಬೆಳಸಿ..ಬಳಸಿ ಕನ್ನಡವೇ ಸತ್ಯ
''ಮಾತೃಭಾಷೆಯವರಿಗೆ,,ಮಾತಾಡುವವರಿಗೆ ಪ್ರೀತಿಸುವವರಿಗೆ,,ಹಾಡುವವರಿಗೆ,, ಕೂಗುವವರಿಗೆ,,ಕೇಳುವವರಿಗೆ,, ಗೌರವಕೊಟ್ಟವರಿಗೆ,,ಗೌರವತಂದವರಿಗೆ ಸರ್ವರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು ... ಉಳಸಿ..ಬೆಳಸಿ..ಬಳಸಿ ಕನ್ನಡವೇ ಸತ್ಯ.. ಕನ್ನಡವೇ ನಿತ್ಯ..'' - ನಿರ್ದೇಶಕ ಸುನಿ

ಡಾಲಿ ಧನಂಜಯ್
''ಸಮಸ್ತ ನಾಡಿನ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು'' ಎಂದು ಶುಭಕೋರಿರುವ ನಟ ಧನಂಜಯ್ ಬಡವ ರಾಸ್ಕಲ್ ಚಿತ್ರದ ಪೋಸ್ಟರ್ ಹಂಚಿಕೊಂಡಿದ್ದಾರೆ. ಚಿತ್ರೀಕರಣ ಮುಕ್ತಾಯ ಎಂದು ಮಾಹಿತಿ ನೀಡಿದ್ದಾರೆ.

ಶಿವ 143 ಪೋಸ್ಟರ್
ಕನ್ನಡ ರಾಜ್ಯೋತ್ಸವದ ಅಂಗವಾಗಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಧೀರೆನ್ ರಾಮ್ ಕುಮಾರ್ ನಟನೆಯ ಚೊಚ್ಚಲ ಚಿತ್ರ ಶಿವ 143 ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.
Recommended Video


ಕನ್ನಡ ಎಂದರೆ ಅದು ಬರಿ ಪದವಲ್ಲ, ನಮ್ಮುಸಿರು
''ಕನ್ನಡ ಎಂದರೆ ಅದು ಬರಿ ಪದವಲ್ಲ, ನಮ್ಮುಸಿರು. ಕನ್ನಡ ಎಂದರೆ ಬರೀ ಮಾತಲ್ಲ, ಅದು ನಮ್ಮ ಜೀವ. ಕನ್ನಡವೇ ನಾವು, ನಾವೇ ಕನ್ನಡ. ಸಮಸ್ತ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.'' - ಸುಮಲತಾ